ಮನೋರಂಜನೆ

ಅಪ್ಪನ ಹಾದಿಯಲ್ಲಿ ಹೆಜ್ಜೆ ಇಟ್ಟ ಮಗ ವಿನೀಶ್ ದರ್ಶನ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಪುತ್ರ ತಂದೆಯ ಹಾದಿಯಲ್ಲೇ ಸಾಗುತ್ತಿದ್ದಾನೆ.ಈ ಹಿಂದೆ ಐರಾವತ ಚಿತ್ರದ ಕ್ಲೈಮಾಕ್ಸ್’ನ ಒಂದು ದೃಶ್ಯದಲ್ಲಿ ಅಭಿನಯಿಸಿದ್ದ ವಿನೀಶ್, ರಾಜರಾಜೇಶ್ವರಿ ನಗರದ ಹಿಲ್ ವ್ಯೂವ್ ಸ್ಕೂಲ್ ನಲ್ಲಿ ಓದುತ್ತಿರುವ ಒಂಭತ್ತು ವರ್ಷ ವಯಸ್ಸಿನ ವಿನೀಶ್,ಹಿಂದೆ ಶಾಲೆಯಲ್ಲಿ ನಡೆದ ಕರಾಟೆ ಸ್ಫರ್ಧೆಯಲ್ಲಿ ವಿನೀಶ್ ವಿಜೇತನಾಗಿ ಚಿನ್ನದ ಪದಕವನ್ನು ಪಡೆದುಕೊಂಡಿದ್ದು ಎಲ್ಲರಿಗೂ ಗೊತ್ತೆ ಇದೆ .ಈಗ ಯಜಮಾನ ಚಿತ್ರದ ಮೂಲಕ ಮತ್ತೊಮ್ಮೆ ಅಪ್ಪ ದರ್ಶನ್ ಜೊತೆ ನಟಿಸಿದ್ದಾರೆ,ಆ ಚಿತ್ರದ ಹಾಡೊಂದರಲ್ಲಿ ವಿನೀಶ್ ದರ್ಶನ್ ಜೊತೆ ಕುಣಿದಿದ್ದಾರಂತೆ., ಈ ಹಾಡಿನ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆದಿದ್ದೆ.

ಪ್ರೇಕ್ಷಕ ವಲಯದಲ್ಲಿ ನಾನಾ ಕಾರಣಗಳಿಂದ ವಿಪರೀತಿ ನಿರೀಕ್ಷೆ ಹುಟ್ಟುಹಾಕಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾ `ಯಜಮಾನ ಚಿತ್ರೀಕರಣ ಬಿರುಸಿನಿಂದ ನಡೆಯುತ್ತಿದೆ. ಚಿತ್ರದ ಟೈಟಲ್’ನಿಂದ ಹಿಡಿದು ತಾರಾಗಣದವರೆಗೆ ಎಲ್ಲದರಲ್ಲೂ ಕುತೂಹಲ ಮೂಡಿಸಿರುವ ಯಜಮಾನ ಚಿತ್ರದ ಹಾಡಿನಲ್ಲಿ ದರ್ಶನ್ ಮಗ ವಿನೀಶ್ ಕೂಡ ಹೆಜ್ಜೆ ಹಾಕಿದ್ದಾನೆ.

 

 

 

ನಟ ದರ್ಶನ್ ಅವರಿಗೆ ಪ್ರಾಣಿಗಳೆಂದರೆ ತುಂಬಾ ಪ್ರೀತಿ. ಈಗಾಗಲೇ ಅವರು ಅನೇಕ ಪ್ರಾಣಿಗಳನ್ನು ದತ್ತು ಪಡೆದು ಸಾಕುತ್ತಿದ್ದಾರೆ. ಅವರಿಗೆ ಕುದುರೆ ಅಂದರೆ ಅಚ್ಚುಮೆಚ್ಚು, ಅವರು ಸಾಕಿರುವ ಕುದುರೆ ಮೇಲೆ ಅನೇಕ ಬಾರಿ ಸವಾರಿಯನ್ನು ಕೂಡ ಮಾಡಿದ್ದಾರೆ. ಅಷ್ಟೇ ಅಲ್ಲದೇ ತಮ್ಮ ಸಿನಿಮಾದಲ್ಲು ಅವರ ಕುದುರೆಯಲ್ಲೇ ಸವಾರಿ ಮಾಡಿದ್ದಾರೆ.ದರ್ಶನ್ ಅವರ ಮಗ ವಿನೀಶ್ ಗೂ ಕೂಡ ಪ್ರಾಣಿಗಳ ಮೇಲೆ ತುಂಬಾ ಪ್ರೀತಿ. ಅವರು ಕೂಡ ಒಂದು ಕುದುರೆಯನ್ನು ಸಾಕುತ್ತಿದ್ದಾರೆ. ಈಗ ಅವರು ಸಾಕುತ್ತಿರುವ ಕುದುರೆ ಮೇಲೆ ವಿನೀಶ್ ಸವಾರಿ ಮಾಡಿದ್ದಾರೆ. ವಿನೀಶ್ ಸವಾರಿ ಮಾಡುತ್ತಿದ್ದ ಫೋಟೋವನ್ನು ಕ್ಲಿಕ್ಕಿಸಿಕೊಂಡು ಅಭಿಮಾನಿಗಳು ತಮ್ಮ ಟ್ಟಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈಗ ಈ ಫೋಟೋ ಸಾಮಾಜಿಕ ಜಾಲತಾಣಗಲ್ಲಿ ವೈರಲ್ ಆಗಿದೆ.ಕೇವಲ ಆಟೋಟಗಳಲ್ಲಿ ಮಾತ್ರವಲ್ಲದೆ ಓದಿನಲ್ಲೂ ವಿನೇಶ್ ಮುಂದಿದ್ದಾನಂತೆ. ತಂದೆಯಂತೆ ಮಗ ವಿನೀಶ್ ಇದೇ ರೀತಿ ಮತ್ತಷ್ಟು ಸಾಧನೆ ಮಾಡಲಿ ಎನ್ನುವುದು ಎಲ್ಲಾ ದರ್ಶನ್ ಅಭಿಮಾನಿಗಳ ಆಶಯ.ಇನ್ನು ಸ್ವಲ್ಪ ದಿನದಲ್ಲೇ ಅಪ್ಪ ಮಗನನ್ನು ನಾವುಗಳು ತೆರೆ ಮೇಲೆ ಒಟ್ಟಿಗೆ ನೋಡಬಹುದು

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top