fbpx
ಸಮಾಚಾರ

ಅಶೋಕವನದಲ್ಲಿ ಹನುಮಂತನು ನನ್ನ ಭುಜದ ಮೇಲೆ ಕುಳಿತುಕೊಳ್ಳಿ ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿದರು ಸೀತೆ ಬರಲಿಲ್ಲ.ಅದರ ಹಿಂದಿರುವ ಕುತೂಹಕಲಕಾರಿ ಕಾರಣ ಏನ್ ಗೊತ್ತಾ

ಹನುಮಂತನು ಸೀತೆಯನ್ನು ಹುಡುಕುತ್ತಾ ಹೊರಟಾಗ ಲಂಕೆಯಲ್ಲಿ ರಾವಣನ ಭವನದಲ್ಲಿ ಇದ್ದ ಸುಂದರಿಯನ್ನು ಕಂಡು ಅವಳೆ ಇರಬಹುದೆಂದು ಆಲೋಚಿಸಿದನು. ಸೀತೆಯು ರಾವಣನ ಜೊತೆಗೆ ಪ್ರೀತಿಯಿಂದ ಇರಲು ಸಾಧ್ಯವೇ ? ನಾನು ಈ ರೀತಿಯ ಹೆಣ್ಣಿಗಾಗಿ ಇಷ್ಟೆಲ್ಲ ಶ್ರಮ ಪಟ್ಟಿದ್ದು ವ್ಯರ್ಥವಾಯಿತೆಂದು ಮರುಗಿದನು. ಆದರೆ ಸೀತೆಯು ಈ ರೀತಿ ಮಾಡುವುದಿಲ್ಲವೆಂದು ನೆನಪಿಸಿಕೊಂಡು ಸೀತೆಯ ಬಗ್ಗೆ ರಾಮನು ಹೇಳಿದ ಚಿಹ್ನೆಗಳನ್ನು ನೆನಪಿಸಿಕೊಂಡು ಬೇರೆ ಕಡೆ ಸೀತೆಯನ್ನು ಹುಡುಕಲು ಪ್ರಯತ್ನಿಸಿದನು.ಬೇರೆ ಬೇರೆ ಸೌಧಗಳಲ್ಲಿ ಸೀತೆಯನ್ನು ಹುಡುಕಿ ಕಾಣದೆ ಮತ್ತೊಂದು ಅರಮನೆಯನ್ನು ಪ್ರವೇಶಿಸಿದನು. ಅಲ್ಲಿನ ವೈಭವವು ಮೋಹಕವಾಗಿತ್ತು.ವಜ್ರ ವೈಡೂರ್ಯಗಳಿಂದ ತುಂಬಿದ್ದವು. ನವಿಲುಗಳು ನರ್ತನ ಮಾಡುತ್ತಿದ್ದವು. ಗೋಡೆಗಳಲ್ಲಿ ರತ್ನವನ್ನು ಹಾಕಿದ್ದರು. ವಿವಿಧ ಶಸ್ತ್ರಗಳನ್ನು ಸಂಗ್ರಹಿಸಿದ್ದರು. ಹೂವು ಪುಷ್ಪಕ ವಿಮಾನವನ್ನು ನೋಡಿಕೊಂಡು ಸುಂದರವಾಗಿ ಕೆತ್ತಿರುವ ಚಿತ್ರಗಳನ್ನು ನೋಡಿದರೆ ಅಲ್ಲಿಯೂ ಸೀತೆ ಕಾಣದಿದ್ದಾಗ ಅಲ್ಲಿಂದ ದೂರದಲ್ಲಿ ಕಾಣುವ ಅಶೋಕ ವೃಕ್ಷಗಳು ಸಾಲನ್ನು ಕಂಡು ಆ ಕಡೆಗೆ ಹೋದನು.

ಅನೇಕ ಸುಂದರ ವನಗಳನ್ನು ನೋಡುತ್ತಾ ಅಶೋಕವನವನ್ನು ಪ್ರವೇಶಿಸಿದಾಗ ಹನುಮಂತನಿಗೆ ಬಾರಿ ಸಂತಸವಾಯಿತು. ಕೋಗಿಲೆಗಳು ಹಾಡುತ್ತಿದ್ದವು. ಅಶೋಕ ವೃಕ್ಷದ ಕೆಳಗೆ ದುಃಖತಪ್ತಳಾದ ಸಹಜ ಸುಂದರಿ ಕುಳಿತಿರುವುದನ್ನು ಕಂಡಾಗ ಅವಳು ರಾಮ ರಾಮ ಎಂದು ಹೇಳುವುದನ್ನೇ ಗಮನಿಸಿದಾಗ ಆನಂದದಿಂದ ಕುಪ್ಪಳಿಸಿ ರಾಜಕುಮಾರಿಯಾಗಿದ್ದು ಅರಮನೆಯಲ್ಲಿ ಇರಬೇಕಾದವಳು ಈ ರೀತಿ ರಾಕ್ಷಸರ ಬಂಧನದಲ್ಲಿ ವನದಲ್ಲಿರಬೇಕಾಯಿತೆ ? ಎಂದು ದುಃಖಿಸಿದನು.ಸೀತೆಯ ಸುತ್ತಲೂ ರಾಕ್ಷಸಿಯರು ಕಾವಲು ಕಾಯುತ್ತಿದ್ದುದರಿಂದ ಹನುಮಂತನು ಅವರಿಗೆ ಕಾಣದಂತೆ ಅದೇ ಮರವನ್ನೇರಿ ಕುಳಿತನು.

 

 

 

ಆ ರಾಕ್ಷಸಿಯರು ಪ್ರತಿದಿನದಂತೆ ಅಂದೂ ಸಹ ಸೀತೆ ರಾವಣನನ್ನು ಮದುವೆಯಾಗು ಇಲ್ಲದಿದ್ದರೆ ಕೊಂದು ಬಿಡುತ್ತೇನೆ ಎಂದು ಒತ್ತಾಯಿಸಿದರು. ಸೀತೆಯು ಬಿಕ್ಕಿ ಬಿಕ್ಕಿ ಅಳುತ್ತಿದ್ದಳು. ನೀವು ಏನು ಹೇಳಿದರೂ ನಾನು ರಾಮನನ್ನು ಬಿಟ್ಟು ರಾವಣನನ್ನು ಮದುವೆ ಆಗುವುದಿಲ್ಲ ಎಂದಳು. ಹನುಮಂತನಿಗೆ ಆಕೆ ಸೀತೆ ಎಂದು ಅನಿಸಿತ್ತು. ರಾಕ್ಷಸಿಯರು ಆಯಾಸದಿಂದ ನಿದ್ದೆ ಮಾಡಿದಾಗ ಇದೇ ಉತ್ತಮ ಸಮಯವೆಂದು ತಿಳಿದು ಮರದಲ್ಲಿದ್ದವನು ರಾಮನ ಕಥೆಯನ್ನು ಹಾಡಲಾರಂಭಿಸಿದನು.ತನ್ನ ಸನಿಹದಲ್ಲಿದ್ದ ಮರದ ಮೇಲಿಂದ ರಾಮನ ಚರಿತ್ರೆಯನ್ನು ಹಾಡುವುದು ಕೇಳಿದಾಗ ಸೀತೆಗೆ ಆಶ್ಚರ್ಯವಾಯಿತು. ಅವಳಿಗೆ ಕಂಡಿದ್ದು ಒಂದು ಕಪಿ. ಯಾವುದೋ ರಾಕ್ಷಸನು ತನ್ನನ್ನು ವಂಚಿಸಲು ಈ ರೀತಿ ಕಪಿ ವೇಷದಲ್ಲಿ ಬಂದಿರಬಹುದೆಂದು ಸೀತೆಗೆ ಹೆದರಿಕೆಯಾಗಿತ್ತು. ದೇವತೆಗಳನ್ನು ಕುರಿತು ಸೀತೆ ನನ್ನನ್ನು ರಕ್ಷಿಸಿ ಎಂದು ಬೇಡಿಕೊಂಡಳು.

ಹನುಮಂತನು ಸೀತೆಯು ಭಯ ಪಡುವುದನ್ನು ತಿಳಿದು ಅಮ್ಮ ನೀವು ಸೀತಾದೇವಿಯೇ ? ನಮ್ಮ ಪ್ರಭು ಶ್ರೀರಾಮಚಂದ್ರನ ಪತ್ನಿಯೇ ? ಎಂದು ಕೇಳಿದಾಗ ಸೀತೆಗೆ ಅವನ ಭಕ್ತಿಯನ್ನು ತಿಳಿದು ಸಂತಸವಾಯಿತು ಭಯವೂ ದೂರವಾಯಿತು. ಆದರೂ ಹನುಮಂತನು ಅವಳಿಗೆ ಭರವಸೆ ಬರುವುದಕ್ಕಾಗಿ ಶ್ರೀರಾಮನು ಕೊಟ್ಟ ಮುದ್ರೆಯುಂಗುರವನ್ನು ಕೊಟ್ಟನು. ಸೀತೆಯು ಉಂಗುರವನ್ನು ನೋಡಿ ಆನಂದ ಪಟ್ಟಳು. ರಾಮ-ಲಕ್ಷ್ಮಣರ ಆರೋಗ್ಯದ ಬಗ್ಗೆ ವಿಚಾರಿಸಿದಳು.ಹನುಮಂತನು ರಾಮ-ಲಕ್ಷ್ಮಣರು ಸೀತೆಯನ್ನು ಹುಡುಕುತ್ತಾ ಬಂದಾಗ ಶಬರಿಯ ಮುಕ್ತಿ ಜಟಾಯುವಿನ ಮರಣ ಸುಗ್ರೀವನೊಂದಿಗೆ ಸೀತಾನ್ವೇಷಣೆಯ ಪ್ರಯತ್ನ ಸಮುದ್ರ ಲಂಘಿಸಿ ಬಂದದ್ದು ಎಲ್ಲವನ್ನೂ ತಿಳಿಸಿದನು. ಶ್ರೀರಾಮನು ಸೈನ್ಯ ಸಮೇತ ಇಲ್ಲಿಗೆ ಬಂದು ನಿಮ್ಮನ್ನು ಬಂಧನದಿಂದ ಬಿಡಿಸಿಕೊಂಡು ಹೋಗುತ್ತಾನೆ. ನಾನು ದೂತನಾಗಿ ಬಂದಿದ್ದೇನೆ ಎಂದು ಸೀತೆಗೆ ಸಮಾಧಾನ ಪಡಿಸಿದನು. ರಾಮನ ನೆನಪಿನಿಂದಾಗಿ ಸೀತೆ ದುಃಖಿತಳಾದಳು.
ಹನುಮಂತನು ಅಮ್ಮಾ ನನ್ನಲ್ಲಿ ಬಹಳ ಶಕ್ತಿಯಿದೆ. ನಾನೆಷ್ಟು ಬೇಕಾದರೂ ಬೆಳೆಯಬಲ್ಲೆ. ನಿಮ್ಮನ್ನು ಲಂಕೆಯಿಂದ ಕಿಷ್ಕಿಂದೆಗೆ ಒಯ್ಯುತ್ತೇನೆ . ನನ್ನ ಭುಜದ ಮೇಲೆ ಕುಳಿತುಕೊಳ್ಳಿರಿ ಎಂದು ಹೇಳಿದಾಗ ಸೀತೆಯು ಅನ್ಯಾಯ ಮಾಡಿದ ರಾವಣನನ್ನು ರಾಮನೇ ಇಲ್ಲಿಗೆ ಬಂದು ಶಿಕ್ಷಿಸಿ ಅನಂತರ ನನ್ನನ್ನು ಬಿಡಿಸಿಕೊಳ್ಳಬೇಕು.ನಾನು ನಿನ್ನೊಡನೆ ಈಗ ಬರುವುದು ಸರಿಯಲ್ಲ.

 

ನೀನು ರಾಮನಿಗೆ ಇಲ್ಲಿಗೆ ಬೇಗ ಬರುವಂತೆ ತಿಳಿಸು ಎಂದಳು. ಆಗ ಹನುಮಂತನು ನೀವು ನನ್ನನ್ನು ಭೇಟಿಯಾದ ಸಲುವಾಗಿ ಒಂದು ಚಿಹ್ನೆಯನ್ನು ಕೊಡಿರಿ ಎಂದಾಗ ಸೀತೆ ತನ್ನ ಚೂಡಾಮಣಿಯನ್ನು ತೆಗೆದು ಕೊಟ್ಟಳು. ಹನುಮಂತನು ಅದನ್ನು ಭದ್ರಪಡಿಸಿಕೊಂಡು ಸೀತಾದೇವಿಯನ್ನು ಪ್ರದಕ್ಷಿಣೆ ಮಾಡಿ ವಂದಿಸಿದನು. ಸೀತೆಯು ಹನುಮಂತನಲ್ಲಿ ಈ ರೀತಿ ಸಂದೇಶ ಕಳಿಸಿದಳು. “ವಾನರ ಶ್ರೇಷ್ಠನೇ, ಶ್ರೀರಾಮನಿಗೆ ನನ್ನ ವಂದನೆಗಳನ್ನು ತಿಳಿಸು ಲಕ್ಷ್ಮಣನಿಗೆ ಆಶೀರ್ವಾದ ತಿಳಿಸು. ಇನ್ನು ಒಂದು ತಿಂಗಳವರೆಗೆ ಮಾತ್ರ ನಾನು ಕಾಯುತ್ತೇನೆ ಅಷ್ಟರೊಳಗೆ ರಾಮನೂ ಇಲ್ಲಿಗೆ ಬಂದು ಬಿಡಿಸಿಕೊಳ್ಳದಿದ್ದರೆ ರಾವಣಸುರನ ಕಾಟದಿಂದಾಗಿ ಬೆಂಕಿಗೆ ಹಾರುತ್ತೇನೆ” ಎಂದಳು. ಹನುಮಂತನು ಅಮ್ಮಾ, ನೀವು ಚಿಂತಿಸಬೇಡಿರಿ. ಕಪಿಸೈನ್ಯ ರಾಕ್ಷಸ ಸೈನ್ಯವನ್ನು ನಾಶಪಡಿಸುವುದು. ರಾವಣನನ್ನು ಕೊಂದು ಶ್ರೀರಾಮನು ನಿಮ್ಮನ್ನು ಬಿಡಿಸಿಕೊಂಡು ಒಯ್ಯುವನು ಎಂದು ಹೇಳಿ ವಂದಿಸಿ ಹೊರಟನು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top