ಸಮಾಚಾರ

ಗಂಡನಿಂದ ವಿಚ್ಛೇದನ ಪಡೆದು ನಂತರ ಸಾಮಾಜಿಕ ಜಾಲತಾಣದಲ್ಲಿ ಈಕೆ ಮಾಡಿದಾದ್ರು ಏನ್ ಗೊತ್ತಾ

ಕರಿಸ್ಸಾ ಎನ್ನುವ 42 ಮಹಿಳೆ ತನ್ನ ಗಂಡನಿಂದ ವಿಚ್ಛೇದನ ಪಡೆದಿದ್ದಾಳೆ,ಮದುವೆಯಾದ 5 ವರ್ಷಗಳ ಬಳಿಕ ಈ ದಂಪತಿಗಳು ವಿಚ್ಛೇದನ ಪಡೆದಿದ್ದರೆ ,ಮದುವೆಯಾಗಿ ಕೆಲ ವರ್ಷ ಬಾಳಿ ಬಳಿಕ ಕೆಲ‌ ಸಮಸ್ಯೆಯಿಂದ ವಿಚ್ಛೇದನ ಪಡೆಯುವುದು ಹೊಸ ವಿಷಯವಲ್ಲ ,ಆದ್ರೆ ಇಲ್ಲಿ ಇರುವ ಹೊಸ ವಿಷಯ ಏನು ಅಂದ್ರೆ ಈ ಮಹಿಳೆ ವಿಚ್ಛೇದನ ಪಡೆದ ತಕ್ಷಣ ತನ್ನ ಡೈವೋರ್ಸ್ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಸಂಭ್ರಮದಲ್ಲಿ ಮುಳುಗಿದ್ದಾಳೆ ,ಆ ವಿಷ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

ತನ್ನ ಡೈವೋರ್ಸ್ ಪೇಪರ್ ನ್ನು ತನ್ನ ಸ್ವಾತಂತ್ರ್ಯದ ಮಗುವೆಂದು ಬಣ್ಣಿಸಿ, ನವಜಾತ‌ ಶಿಶುವಿಗೆ ಮಾಡುವಂತೆ,‌ ಪಿಂಕ್ ಬಾರ್ಡರ್ ಇರುವ ಬಿಳಿ‌ ಬಟ್ಟೆಯನ್ನು ಸುತ್ತಿ, ಫೋಟೊ ತಗೆದಿದ್ದಾಳೆ. ಬಳಿಕ ಈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಮಹಿಳೆ, “ಸುಂದರ, ಆರೋಗ್ಯಕರ‌ ಹಾಗೂ ನವಜಾತ ಸ್ವಾತಂತ್ರ್ಯ” ಎಂದು ಬರೆದುಕೊಂಡಿದ್ದಾಳೆ. ಇದರೊಂದಿಗೆ ಟವೆಲ್ ನಲ್ಲಿ ಸುತ್ತಿರುವ ಡೈವೋರ್ಸ್ ಪೇಪರ್ ನ ತೂಕ ಮಾಡಿ ಅದನ್ನು ಸಾಮಾಜಿಕ ಜಾಲತಾಣ ಹಂಚಿಕೊಂಡಿದ್ದಾಳೆ.

 

 

 

ಐದು ವರ್ಷದ ಹಿಂದೆ ಮದುವೆಯಾಗಿದ್ದ ಪತಿಯೊಂದಿಗೆ ಸಾಮರಸ್ಯ ಮೂಡದ ಹಿನ್ನಲೆಯಲ್ಲಿ‌ ವಿಚ್ಛೇದನ ಪಡೆದಿರುವ ಮಹಿಳೆ, ನನಗೆ ವಿಚ್ಚೇದನವೇ ಮಗುವಿನ ರೀತಿ. ಆದ್ದರಿಂದ ಈ ಪೋಸ್ಟ್ ಮಾಡಿದ್ದೆ. ನಮ್ಮನ್ನು ನಾವೇ ಖುಷಿಯಾಗಿಟ್ಟುಕೊಳ್ಳಬೇಕು ಎಂದು ಸ್ಥಳೀಯ‌ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾಳೆ

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top