ಮನೋರಂಜನೆ

ರಾಕಿಂಗ್ ಸ್ಟಾರ್ ಇವರನ್ನ ತುಂಬಾ ಮಿಸ್​ ಮಾಡ್ಕೊಳ್ತಾ ಇದ್ದಾರಂತೆ,ಯಾರ್ ಅವ್ರು ಗೊತ್ತಾ

ಕೆಜಿಎಫ್ ಚಿತ್ರಕ್ಕಾಗಿ ರಾಕಿಂಗ್ ಸ್ಟಾರ್ ಯಶ್ ಬಿಟ್ಟಿದ ಮಣಗಟ್ಟಲೆ ಗಡ್ಡಕ್ಕೆ ಕೊನೆಗೂ ಕತ್ತರಿ ಬಿತ್ತು, ಕೆಜಿಎಫ್ ಚಿತ್ರಕ್ಕಾಗಿ ವರ್ಷಗಳ ಕಾಲದಿಂದಲೂ ಶೇವ್ ಮಾಡಿಸದೇ ಗಡ್ಡ ಬೆಳೆಸಿಕೊಂಡು ಬಂದಿದ್ದ ಯಶ್ ಕೆಜಿಎಫ್ ಚಿತ್ರದ ಚಿತ್ರೀಕರಣ ಮುಂದುವರಿದಷ್ಟೂ ಗಡ್ಡ ಬೆಳೆದುಕೊಳ್ಳುತ್ತಿತ್ತು.. ಚಿತ್ರದ ಮೇಲಿನ ನಿರೀಕ್ಷೆ ಯಶ್ ಬಿಟ್ಟಿರೋ ಉದ್ದ ಗಡ್ಡದ ಎಸಳಿನಂತೆಯೇ ದಿನೇ ದಿನೆ ಬೆಳೆದುಕೊಳ್ಳಲಾರಂಭಿಸಿದೆ ಮಾಧ್ಯಮದವರೂ ಒಳಗೊಂಡಂತೆ ಅನೇಕರು ಗಡ್ಡ ಯಾವಾಗ ತೆಗೆಯುತ್ತೀರಾ? ಎಂಬ ಸಾಮಾನ್ಯ ಪ್ರಶ್ನೆಯನ್ನು ಯಶ್’ಗೆ ಪದೇ ಪದೇ ಕೇಳುತ್ತಿದ್ದರು.

 

ತಮ್ಮ ಗಡ್ಡ ಕತ್ತರಿಸುವ ಮೂಲಕ ಅವರೆಲ್ಲಗೂ ಉತ್ತರ ಕೊಟ್ಟೆ ಬಿಟ್ರು ರಾಕಿಂಗ್ ಸ್ಟಾರ್.ಮಡದಿಯ ಆಸೆಯಂತೇ ಸಿನಿಮಾ ಮುಗಿದ ಮೇಲೆ ಯಶ್​ ಗಡ್ಡ ತೆಗಿದಿದ್ದಾರೆ,ಈ ಬಗ್ಗೆ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯೇ ಆಯ್ತು.ಅಂದಹಾಗೇ ಅಂಬಿ ಕೂಡ ಯಶ್​ಗೆ ಗಡ್ಡದ ವಿಚಾರವಾಗಿ ಕಾಲೆಳೆದಿದ್ದೂ ಹೌದು. ಯಶ್​ಗೆ ಮೊದ್ಲು ಗಡ್ಡ ತೆಗಿ ಅಂತಾ ಹೋದ ಕಡೆ ಬಂದ ಕಡೆ ರೇಗಿಸ್ತಾಇದ್ರು. ಅ ಂತೂ ಇಂತೂ ಅವರು ಗಡ್ಡ ತೆಗಿಸಿದ್ದನ್ನ ವಿಡಿಯೋ ಮಾಡಿ ಅದನ್ನು ಸೋಶಿಯಲ್​ ಮಿಡಿಯಾದಲ್ಲಿ ಹರಿಬಿಟ್ಟಿದ್ರು. ಆನಂತರ ಸಿಕ್ಕಾಪಟ್ಟೆ ಫ್ಯಾನ್ಸ್​ ಯಶ್​ ಗಡ್ಡ ತೆಗಿದಿದ್ದನ್ನು ಇಷ್ಟ ಪಟ್ರು.ಈಗ ಕೆಜಿಎಫ್​ ಸಿನಿಮಾ ಸದ್ಯದರಲ್ಲೇ ಬಿಡುಗಡೆಯಾಗೋಕೆ ರೆಡಿಯಾಗಿದೆ.

ತುಂಬಾ ಇಷ್ಟಪಡುವ ಮಡದಿ, ಪ್ರೀತಿಸುವ ಕುಟುಂಬದವರು, ಅಭಿಮಾನ ಇಟ್ಕೊಂಡಿರುವ ಅಭಿಮಾನಿಗಳು, ಜೊತೆಯಲ್ಲಿಯೇ ಇರುವ ಸ್ನೇಹಿತರು ಎಲ್ಲ ಜೊತೆಗೆ ಇದ್ರೂ , ಯಶ್​ ಯಾರನ್ನೋ ಮಿಸ್​ ಮಾಡ್ಕೊಳ್ತಿದ್ದಾರಂತೇ. ದಿನ ಒಂದ್ಸಲಾನಾದ್ರೂ ಅವರನ್ನ ಮಿಸ್​ ಮಾಡ್ಕೋತ್ತಾರಂತೇ. ಎರಡು ವರ್ಷ ಜೊತೆಗಿದ್ದವರು, ಈಗ ನೆನಪಂತೇ . ಯಾರ್ ಅವ್ರು ಗೊತ್ತಾ?ಅವರ ಗಡ್ಡ ಅಂತೇ “ನಾನು ಗಡ್ಡನ ತುಂಬಾನೇಮಿಸ್​ ಮಾಡ್ಕೊತ್ತೀನಿ. ನನಗೆ ಗಡ್ಡ ಅಂದ್ರೆ ತುಂಬಾಇಷ್ಟ. ಸ್ನಾನ ಮಾಡುವಾಗ ಇಷ್ಟು ಬೇಗ ಮುಖ ತೊಳೆದಾಗೋಯ್ತಾ ಅಂತಾ ಬೇಜಾರಾಗುತ್ತೆ, ಹೋದ ಕಡೆ, ಬಂದ ಕಡೆ ಗಡ್ಡ ಸವರಿಕೊಳ್ತಾ ಇದ್ದೆ. ಅದಕ್ಕಾಗಿ ನಾನು ನನ್ನ ಗಡ್ಡವನ್ನ ತುಂಬಾ ಮಿಸ್​ ಮಾಡ್ಕೊಳ್ತೀನಿ”.

 

 

 

ಆ ಗಡ್ಡವನ್ನು ಮತ್ತೆ ಯಶ್​ ಬೆಳಿಸ್ತಾರಂತೆ. ಕೆಜಿಎಫ್​ ಭಾಗ-2 ಸಿನಿಮಾ ಆರಂಭ ಆದಗ ಮತ್ತೆ ಗಡ್ಡ ಬೆಳಿಸ್ತಾರಂತೆ.ಡಿಸೆಂಬರ್​ ಎಂಡ್​ಗೆ ಮಗುವಿನ ನಿರೀಕ್ಷೆ ಇದೆ. ಹಾಗಾಗಿ ಸಿಕ್ಕಾಪಟ್ಟೆ ಥ್ರಿಲ್​ ಆಗ್ತಿದೆ. ಇನ್ನು ನನಗೆ ಹೆಣ್ಣು ಮಗು ಅಂದ್ರೆ ಇಷ್ಟ, ರಾಧಿಕಾಗೆ ಗಂಡು ಮಗು ಅಂದ್ರೆ ಇಷ್ಟ. ಒಟ್ಟಾರೆ ಯಾವುದಾದರೂ ಸರಿಯೇ ಆರೋಗ್ಯವಾಗಿದ್ದರೆ ಓಕೆ ಅಂತಾ ಖುಷಿಯಿಂದ ಹೇಳ್ತಾರೆ ಸ್ಯಾಂಡಲ್​ವುಡ್​ ರಾಕಿಂಗ್ ಸ್ಟಾರ್ .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top