fbpx
ಮನೋರಂಜನೆ

ದುನಿಯಾ ವಿಜಿಗೆ ರೆಬೆಲ್ ಸ್ಟಾರ್ ಅಂಬರೀಷ್ ಕೊಟ್ಟ ಉಪದೇಶ ಏನ್ ಗೊತ್ತಾ?

ಜಿಮ್ ಟ್ರೈನರ್ ಮಾರುತಿ ಗೌಡ ಎಂಬುವವರ ಮೇಲೆ ಹಲ್ಲೆ ಮತ್ತೆ ಕಿಡ್ನಾಪ್ ಪ್ರಕರಣಕ್ಕೆ ಸಂಭಂದಿಸಿದಂತೆ ಒಂದು ವಾರ ಜೈಲಿನಲ್ಲಿಯೇ ಕಾಲ ಕಳೆದು ಜಾಮೀನಿನ ಮೇಲೆ ಹೊರಬಂದಿರುವ ದುನಿಯಾ ವಿಜಯ್​ ಅವರಿಗೆ ಬಹುಭಾಷಾ ನಟ ಪ್ರಕಾಶ್ ರೈ ಉಪದೇಶ ಮಾಡಿದ್ದಾರೆ.. ಜೈಲಿನಿಂದ ಆಚೆ ಬಂದ ನಂತರವೂ ಅವರ ಕುಟುಂಬದ ವಿಚಾರಗಳು ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಲೇ ಇವೆ, ಅಲ್ಲದೇ ಪ್ರಶ್ನೆ ಕೇಳಿದ್ದ ಸುದ್ದಿಗಾರನೊಬ್ಬರ ಮೇಲೂ ದುನಿಯಾ ವಿಜಯ್ ಏಕವಚನದಲ್ಲಿಯೇ ಗದರಿದ್ದರು ಈ ಎಲ್ಲಾ ಘಟನೆಗಳ ಬಗ್ಗೆ ರೆಬೆಲ್ ಸ್ಟಾರ್ ಅಂಬರೀಷ್ ದುನಿಯಾ ವಿಜಿಗೆ ಉಪದೇಶ ಹೇಳಿದ್ದಾರೆ.

 

 

ಮಂಡ್ಯದಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟ ಕುಟುಂಬದವನ್ನು ಭೇಟಿ ಮಾಡಿ ಸಾಂತ್ವಾನ ಹೇಳಲು ಅಂಬರೀಶ್ ಅವರು ಆಗಮಿಸಿದ್ದು, ತಮ್ಮ ಅಭಿಮಾನಿಯನ್ನು ನೆನೆದು ಭಾವುಕರಾಗಿದ್ದರು. ಇದೇ ವೇಳೆ ಮಾತನಾಡಿದ ಅಂಬರೀಷ್ ಸಿನಿಮಾ ಮತ್ತು ರಾಜಕೀಯ ವಿದ್ಯಮಾನಗಳ ಬಗ್ಗೆ ಮಾತನಾಡಿದರು. ಅದರಲ್ಲೂ ಇತ್ತೀಚಿಗೆ ಹೆಚ್ಚು ಸುದ್ದಿಗೆ ಗ್ರಾಸವಾಗಿರೋ ದುನಿಯಾ ವಿಜಿ ಬಗ್ಗೆಯೂ ಮಾತನಾಡಿದರು

ಇದೆ ವೇಳೆ ದುನಿಯಾ ವಿಜಯ್ ಬಗ್ಗೆ ಮಾತನಾಡಿದ ರೆಬಲ್ ಸ್ಟಾರ್ ಅಂಬರೀಶ್ ” ನ್ಯಾಯಧೀಶರೇ ಈಗಾಗಲೇ ಹೇಳಿದ್ದಾರೆ ನೀವು ನಟರು ರೋಲ್ ಮಾಡೆಲ್ ಅಂತಾ. ಜೀವನದಲ್ಲಿ ಈ ತರಹದ ಸಣ್ಣಪುಟ್ಟ ಘಟನೆಗಳು ಬರುತ್ತವೆ ಏನು ಮಾಡಕ್ಕಾಗಲ್ಲ. ಕೆಲವು ಸಂದರ್ಭ, ಸನ್ನಿವೇಶಗಳಲ್ಲಿ ಇಂತಾ ಘಟನೆ ಆಗೋದು ಸಹಜ. ನನ್ನ ಮಾತಿಗೆ ವಿಜಯ್ ಮರ್ಯಾದೆ ಕೊಡುವುದರಿಂದ ನಾವು ಬುದ್ದಿ ಹೇಳುತ್ತೇವೆ. ಹಿರಿಯರನ್ನು ನೋಡಿಕೊಂಡು ನಾವು ಜೀವನ ಏನು ಅಂತಾ ಕಲಿಯುತ್ತಿದ್ದೇವು. ಯುವಕರಲ್ಲಿ ತುಂಟತನ ಇರುತ್ತೆ ಆದರೆ, ಅದು ಜಾಸ್ತಿ ಇರಬಾರದು” ಎಂದು ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top