fbpx
ಸಮಾಚಾರ

ಪಬ್ಲಿಕ್ ಸ್ಥಳದಲ್ಲೇ ಢಗಟಕ ಡಾನ್ಸ್ ಶುರು ಹಚ್ಕೊಂಡ ಆಂಟಿಯರು,ಬೆರಗಾದ ಜನ

55ರ ಹರೆಯದ ಆಂಟಿಯರು ಸಾರ್ವಜನಿಕ ಸ್ಥಳದಲ್ಲೇ ಡಾನ್ಸ್ ಮಾಡಿ ಜನರನ್ನು ಬೆರಗು ಗೊಳಿಸಿದ ಘಟನೆಯೊಂದು ನಡೆದಿದೆ ,ಪಳಪಳ ಹೊಳೆಯುವ ಬಿಳಿ ಕ್ಯಾಪ್ ಮತ್ತು ದೊಡ್ಡ ಗಾತ್ರದ ಸನ್‌ಗ್ಲಾಸ್ ಧರಿಸಿಕೊಂಡ ತುಂಬಾ ಜನ 55ರ ಹರೆಯದ ಆಂಟಿಯರು ಶಾಂಘೈ ಪಾರ್ಕ್‌ನಲ್ಲಿ ಒಟ್ಟುಗೂಡಿದ್ದಾರೆ ,ಇವರೆಲ್ಲ ಸೇರಿ ಚೀನಾದಲ್ಲಿ ರಾಷ್ಟ್ರೀಯ ಕಾಲಕ್ಷೇಪವೆನಿಸಿಕೊಂಡಿರುವ ಸಾರ್ವಜನಿಕ ನೃತ್ಯವಾದ ಜಿಟರ್‌ಬಗ್ ನಡೆಸುತ್ತಾರೆ,ಪ್ರತಿದಿನ ಇವರುಗಳು 10 ಕೋಟಿಗೂ ಹೆಚ್ಚು ಜನರು ಈ ಪಾರ್ಕ್‌ಗಳಲ್ಲಿ ಸೇರುತ್ತಾರೆ, ಅಲ್ಲಿ ಫ್ಲೆಮೆಂಕೋದಿಂದ ಚೀನಾದ ಸಾಂಪ್ರದಾಯಿಕ ನೃತ್ಯ ಹಾಗೂ ಇನ್ನೂ ಅನೇಕ ವಿವಿಧ ನಾಟ್ಯ ಮಾಡುತ್ತಾರಂತೆ.

 

 

 

ಇಲ್ಲಿ ಡಾನ್ಸ್ ಮಾಡುವ 90 % ಜನರ ವಯಸು ಸುಮಾರು 55 ಆಗಿರುವುದರಿಂದ ಇವರನ್ನು ಡ್ಯಾನ್ಸಿಂಗ್ ಆಂಟೀಸ್ ಎಂದು ಕರೆಯಲಾಗುತ್ತದೆ.ಇದು ಹಿರಿಯ ನಾಗರಿಕರ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು ಹಾಗೂ ಪೂರಕವಾಗಿರುವುದರಿಂದ ಸರ್ಕಾರವೂ ಇದನ್ನು ಉತ್ತೇಜಿಸುತ್ತಿದೆ. 24 ಕೋಟಿಗೂ ಹೆಚ್ಚು ಮಂದಿ ಚೀನೀಯರು 60 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದಾರೆ,2050ರ ವೇಳೆಗೆ ಈ ಸಂಖ್ಯೆ ದುಪ್ಪಟ್ಟಾಗುವ ನಿರೀಕ್ಷೆ ಇದೆ. ವೃದ್ಧರ ಆರೋಗ್ಯ ಸೇವೆಯತ್ತ ಹೆಚ್ಚು ಒತ್ತು ನೀಡಲಿದೆ. ಸಕ್ರಿಯ ಜೀವನಶೈಲಿಯನ್ನೂ ಉತ್ತೇಜಿಸಲಿದೆ.“ನಿವೃತ್ತಿಯ ಬಳಿಕ ಕೆಲಸವಿಲ್ಲದೆ ಮನೆಯಲ್ಲೇ ಕುಳಿತ ಮೇಲೆ ಮಧುಮೇಹ, ರಕ್ತದೊತ್ತಡ ಹೆಚ್ಚಳ, ಕೊಲೆಸ್ಟ್ರಾಲ್ ಎಲ್ಲವೂ ಶುರುವಾಗಿತ್ತು. ಇದೀಗ ಡ್ಯಾನ್ಸ್ ಮಾಡಲು ಆರಂಭಿಸಿದ ಮೇಲೆ ನನ್ನ ಆರೋಗ್ಯ ಸುಧಾರಿಸಿದೆ. ಇನ್ನೀಗ ನನಗೆ ಔಷಧಿ ಬೇಕಾಗಿಲ್ಲ ಎಂದು ಇವರುಗಳು ಹೇಳುತ್ತಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top