ಮನೋರಂಜನೆ

ಭರ್ಜರಿ ಹೀರೋಗೆ ಇಂದು ಹುಟ್ಟುಹಬ್ಬದ ಸಂಭ್ರಮ- ‘ಅದ್ದೂರಿ’ಯಾಗಿ ಆಚರಿಸಿಕೊಂಡ ‘ಬಹದ್ದೂರ್’ ಗಂಡು.

ಮಾಡಿದ್ದು ಮೂರೇ ಚಿತ್ರಗಳಾಗಿದ್ದರೂ ಮೂರಕ್ಕೆ ಮೂರನ್ನು ಸೂಪರ್ ಹಿಟ್ ಚಿತ್ರಗಳನಾಗಿಸಿ ಚಂದನವನದ ಯುವ ಸ್ಟಾರ್ ನಟನಾಗಿ ಬೆಳೆದಿರುವಾತ ಆಕ್ಷನ್ ಪ್ರಿನ್ಸ್ ದೃವ ಸರ್ಜಾ. ‘ಅದ್ಧೂರಿ’ಯಾಗಿ ಎಂಟ್ರಿ ಕೊಟ್ಟು ‘ಬಹದ್ದೂರ್’ ಆಗಿ ಜಯಗಳಿಸಿ ‘ಭರ್ಜರಿ’ ಆಗಿ ಮುನ್ನಗ್ಗುತ್ತಿರುವ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 30ನೇ ವಸಂತಕ್ಕೆ ಕಾಲಿಡುತ್ತಿರುವ ದ್ರುವ ಸರ್ಜಾ ತಮ್ಮ ಅಭಿಮಾನಿಗಳ ಜೊತೆ ಅದ್ದೂರಿಯಾಗಿ ಬರ್ತಡೇ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ..

 

 

 

ನೆನ್ನೆ ಮಧ್ಯರಾತ್ರಿಯಿಂದ ಆಗಮಿಸಿದ್ದ ಸಾವಿರಾರು ಅಭಿಮಾನಿಗಳ ಜೊತೆ ಬೆಂಗಳೂರಿನ ಬನಶಂಕರಿಯ ಎರಡನೇ ಹಂತದಲ್ಲಿರುವ ತಮ್ಮ ನಿವಾಸದಲ್ಲಿ ಕೇಟ್ ಕತ್ತರಿಸುವ ಮೂಲಕ ಬರ್ತ್ ಡೇ ಸೆಲೆಬ್ರೇಷನ್ ಮಾಡಿಕೊಂಡಿದ್ದಾರೆ. ರಾತ್ರಿಯಿಂದಲೇ ಅಭಿಮಾನಿಗಳು ಧ್ರುವ ಮನೆ ಮುಂದೆ ಜಮಾಯಿಸಿ ನೆಚ್ಚಿನ ನಟನ ಹುಟ್ಟು ಹಬ್ಬಕ್ಕೆ ಶುಭ ಕೋರಿದರು. ಈ ಸಂದರ್ಭದಲ್ಲಿ ಧ್ರುವ ಸಹೋದರ ಚಿರು ಸಹ ಹಾಜರಿದ್ದರು

ಇನ್ನೂ ಇವತ್ತು ದ್ರುವ ಸರ್ಜಾ ಬರ್ತಡೇ ಪ್ರಯುಕ್ತ ಅವರ ಅಭಿನಯದ ‘ಪೊಗರು’ ಸಿನಿಮಾದ ವಿಶೇಷ ಟೀಸರ್‌ ರಿಲೀಸ್‌ ಆಗಲಿದೆ. ಪೊಗರು ಚಿತ್ರಕ್ಕಾಗಿ ವಿಭಿನ್ನ ಲುಕ್ ನಲ್ಲಿ ಕಾಣಿಸಿಕೊಂಡಿರುವ ಧ್ರುವ ಉದ್ದನೆಯ ಕೂದಲು ಹಾಗೂ ಗಡ್ಡ ಬೆಳೆಸಿಕೊಂಡಿದ್ದಾರೆ.. ಸದ್ಯ ಅಭಿಮಾನಿ ವಲಯದಲ್ಲಿ ‘ಪೊಗರು’ ಸಿನಿಮಾ ವಿಪರೀತ ಕುತೂಹಲ ಮೂಡಿಸಿದೆ. ಈಗಾಗಲೇ ಒಂದು ಹಂತದ ಶೂಟಿಂಗ್ ಮುಗಿಸಿಕೊಂಡಿರುವ ಪೊಗರು ಚಿತ್ರತಂಡ ಸದ್ಯದಲ್ಲೇ ಮುಂದಿನ ಶೆಡ್ಯೂಲ್ ಆರಂಭಿಸಲಿದೆ..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top