ದೇವರು

ಶಾಸ್ತ್ರದಲ್ಲಿ ಹೇಳಿರುವ ಪ್ರಕಾರ ದೇವರ ಪ್ರಾರ್ಥನೆ ಮಾಡುವಾಗ ಅಪ್ಪಿತಪ್ಪಿನೂ ಈ ತಪ್ಪುಗಳನ್ನು ಮಾಡ್ಬಾರದಂತೆ

ಶಾಸ್ತ್ರದಲ್ಲಿ ಹೇಳಿರುವ ಪ್ರಕಾರ ಭಗವಂತನ ಪ್ರಾರ್ಥನೆಯನ್ನು ಮಾಡುವಾಗ ಈ ತಪ್ಪುಗಳನ್ನು ಮಾಡಬಾರದು.
ಇಂದೂ ಧರ್ಮದಲ್ಲಿ ಭಗವಂತನ ಪ್ರಾರ್ಥನೆಗೆ ವಿಶೇಷ ಮಹತ್ವವಿದೆ. ಪ್ರತಿಯೊಬ್ಬ ವ್ಯಕ್ತಿಯು ಪ್ರತಿ ದಿನ ಭಗವಂತನ ಪ್ರಾರ್ಥನೆಯನ್ನು ಮಾಡಬೇಕು ಎನ್ನಲಾಗುತ್ತದೆ. ಸಾಮಾನ್ಯವಾಗಿ ದೇವರ ಮುಂದೆ ಕೈ ಮುಗಿದು ನಿಂತು ಭಕ್ತನಾದವನು ಪ್ರಾರ್ಥನೆ ಮಾಡುತ್ತಾನೆ.ದೇವರ ನಾಮ ಜಪಿಸುವುದರ ಜೊತೆಗೆ ಕಷ್ಟವನ್ನು ಪರಿಹರಿಸುವಂತೆ ಬೇಡಿಕೊಳ್ಳುತ್ತಾನೆ. ಭಕ್ತನು ಮಾಡಿದ ಪ್ರಾರ್ಥನೆ ದೇವರಿಗೆ ತಲುಪಿದರೆ ಎಲ್ಲಾ ಕಷ್ಟಗಳು ನಿವಾರಣೆಯಾದಂತೆ ಎಂಬ ನಂಬಿಕೆ ಇದೆ. ಆದರೆ ಪ್ರಾರ್ಥನೆಯ ವೇಳೆ ಕೆಲವು ನಿಯಮಗಳನ್ನು ನೆನಪಿನಲ್ಲಿ ಇಟ್ಟುಕೊಂಡು ಕಡ್ಡಾಯವಾಗಿ ಅವುಗಳನ್ನು ಪಾಲಿಸಲೇಬೇಕು.

 

 

 

ಭಗವಂತನ ಪ್ರಾರ್ಥನೆ ಮಾಡುವ ವೇಳೆ ಗಮನ ಬೇರೆ ಕಡೆಗೆ ಹೋಗಬಾರದು. ಅನೇಕರು ಕೈಮುಗಿದು ಕಣ್ಣುಮುಚ್ಚಿ ನಿಂತು ಭಗವಂತನ ನಾಮಸ್ಮರಣೆ ಮಾಡುತ್ತಿದ್ದರೂ, ಮನಸ್ಸು ಮಾತ್ರ ಬೇರೆ ಸಂಗತಿಗಳನ್ನು ಯೋಚಿಸುತ್ತಿರುತ್ತದೆ.ಆ ರೀತಿ ಮಾಡಿದರೆ ಆ ಪ್ರಾರ್ಥನೆ ಫಲವನ್ನು ನೀಡುವುದಿಲ್ಲ.ಪ್ರಾರ್ಥನೆ ಮಾಡುವ ವೇಳೆ ಲೋಬಕ್ಕೆ ಒಳಗಾಗಬಾರದು. ಲೋಭವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಪ್ರಾರ್ಥನೆ ಮಾಡಿದರೆ ಭಗವಂತನು ಒಲಿಯುವುದಿಲ್ಲ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.

ಪ್ರಾರ್ಥನೆ ವೇಳೆ ಮಂತ್ರ ಹೇಳುವುದು ಬಹಳ ಮುಖ್ಯ. ಮಂತ್ರವನ್ನು ಹೇಳದೆ ಮಾಡುವ ಪ್ರಾರ್ಥನೆ ಪ್ರಯೋಜನವಿಲ್ಲವೆಂದು ಶಾಸ್ತ್ರದಲ್ಲಿ ಹೇಳಲಾಗಿದೆ.ಪ್ರಾರ್ಥನೆ ವೇಳೆ ಎಲ್ಲರೂ ಅದು ಕೊಡು, ಇದು ಕೊಡು ಎಂದು ಬೇಡಿಕೆಯನ್ನು ದೇವರ ಮುಂದೆ ಇರುತ್ತಾರೆ . ಇದು ತಪ್ಪು. ಯಾವುದೇ ಫಲಾಪೇಕ್ಷೆಯಿಲ್ಲದೆ ಮಾಡಿದ ಪ್ರಾರ್ಥನೆ ಬೇಗನೇ ಫಲ ನೀಡುತ್ತದೆ.“ಸಂಕಟ ಬಂದಾಗ ವೆಂಕಟ ರಮಣ” ಎನ್ನುವ ಗಾದೆ ಮಾತಿನಂತೆ ಅನೇಕ ಜನರು ಕಷ್ಟ ಬಂದಾಗ ಮಾತ್ರ ಭಗವಂತನ ಪ್ರಾರ್ಥನೆ ಮಾಡುತ್ತಾರೆ. ಶಾಸ್ತ್ರಗಳ ಪ್ರಕಾರ ಕಷ್ಟ-ಸುಖ ಎರಡರಲ್ಲೂ ಭಗವಂತನನ್ನು ನೆನೆದವರಿಗೆ ,ಪ್ರಾರ್ಥನೆ ಮಾಡಿದರೆ ಭಗವಂತನು ಕೃಪೆ ತೋರುತ್ತಾನೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top