fbpx
ಮನೋರಂಜನೆ

ಸಿಂಪಲ್ ಹುಡುಗ ರಕ್ಷಿತ್ ಶೆಟ್ಟಿ ಬಗ್ಗೆ ನವರಸನಾಯಕ ಜಗ್ಗೇಶ್ ಈ ಮಾತುಗಳನ್ನಾಡಿದ್ದೇಕೆ?

ಕನ್ನಡದ ಮಟ್ಟಿಗೆ ಟ್ವಿಟರ್’ನಲ್ಲಿ ಅತಿಹೆಚ್ಚು ಸಕ್ರಿಯವಾಗಿರೋ ನಟ ಎಂಬ ಕೀರ್ತಿ ನಿಸ್ಸಂದೇಹವಾಗಿ ಜಗ್ಗೇಶ್ ಅವರಿಗೆ ಸಲ್ಲುತ್ತದೆ. ಆಗಾಗ ಜಗ್ಗೇಶ್ ಮನದ ಮಾತುಗಳನ್ನು ಟ್ವಿಟರ್ ನಲ್ಲೆ ದಾಖಲಿಸುತ್ತಿರುತ್ತಾರೆ..ಓರ್ವ ರಾಜಕಾರಣಿಯಾಗಿ ಅವರ ಬಗ್ಗೆ ನಾನಾ ತಕರಾರುಗಳಿರಬಹುದು ಆದರೆ ಒಂದು ವ್ಯಕ್ತಿಯಾಗಿ ಅವರನ್ನು ಮೆಚ್ಚಿಕೊಳ್ಳದಿರುವವರು ವಿರಳ. ಅದೇನೇ ಸಾಧಿಸಿದರೂ, ಯಾವ ಎತ್ತರ ತಲುಪಿದರೂ ತಮ್ಮ ಅಭಿಮಾನಿಗಳ ಜೊತೆ ಸದಾ ಸಂಪರ್ಕದಲ್ಲಿರೋದನ್ನ ನೋಡೋದೇ ಚೆಂದಾ.

 

 

ವಯಕ್ತಿಕ, ಸಿನಿಮಾ ವಿಚಾರಗಳ ಜೊತೆಗೆ ಸಮಾಜದಲ್ಲಿ ನಡೆಯುವ ಆಗುಹೋಗುಗಳ ಬಗ್ಗೆ ತಮ್ಮ ಟ್ವಿಟರ್ ಅಕೌಂಟ್ ಮೂಲಕವೇ ಪ್ರತಿಕ್ರಿಯಿಸುತ್ತಾ ಸದಾ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರುವವರು ನವರಸ ನಾಯಕ ಜಗ್ಗೇಶ್.. ಇದೀಗ ಇದ್ದಕ್ಕಿದ್ದಂತೆ ಸಿಂಪಲ್ ಹುಡುಗ ರಕ್ಷಿತ್ ಶೆಟ್ಟಿ ಪರವಾಗಿ ಭರ್ಜರಿ ಬ್ಯಾಟಿಂಗ್ ಮಾಡಿದ್ದಾರೆ.. ಇತ್ತೀಚಿನ ದಿನಗಳಲ್ಲಿ ರಕ್ಷಿತ್ ವಯಕ್ತಿಕ ಜೀವನದ ಬಗ್ಗೆ ಆಗುತ್ತಿರುವ ಸುದ್ದಿಗಳ ಬಗ್ಗೆ ಕಾಮೆಂಟ್ ಮಾಡಿದ್ದಾರೆ..

ತಮ್ಮ ಟ್ವಿಟ್​ನಲ್ಲಿ ರಕ್ಷಿತ್​ ಶೆಟ್ಟಿಯ ವ್ಯಕ್ತಿತ್ವ ಗುಣಗಾನ ಮಾಡಿರುವ ಜಗ್ಗೇಶ್ “ನಾನುಕಂಡ ಅದ್ಭುತ ಸಜ್ಜನಿಕೆಯ ಕಲಾಬಂಧು.ಸದಾ ಸಿನಿಮಾಗಾಗಿ ತುಡಿಯುವ ಕಲಾತಪಸ್ವಿ.ಇವನಿಗೆ ದೇವರ ದಯೆಯಿಂದ ಇನ್ನು ಎತ್ತರದ ದಿನಗಳು ಕಾದಿದೆ ಎಂದು ನನ್ನಮನ ಹೇಳಿತು.ನಮ್ಮಯಶಸ್ಸು ಕಬಳಿಸಿ ಮೇಲೆರಲು ಅನೇಕರು ಮುಖವಾಡ ಹಾಕಿ ಬರುತ್ತಾರೆ.ಇದು ಪ್ರಾಪಂಚಿಕ ವಾಮಮಾರ್ಗ ತಂತ್ರ!ಇಂಥವರ ನಗುತ್ತ ಪಕ್ಕತಳ್ಳುವ ಕಲೆ ಕರಗತವಾಗಲಿ ಮುಂದೆ! ಶುಭರಾತ್ರಿ.ಸವಿಗನಸು. ” ಎಂದು ಟ್ವೀಟ್ ಮಾಡಿದ್ದಾರೆ.

ಅಂದಹಾಗೆ ಜಗ್ಗೇಶ್ ಹಾಗೂ ರಕ್ಷಿತ್ ಶೆಟ್ಟಿ ಈ ಹಿಂದೆ 2015ರಲ್ಲಿ ತೆರೆಕಂಡ ಯೋಗರಾಜ್ ಭಟ್ ನಿರ್ದೇಶನದ ‘ವಾಸ್ತು ಪ್ರಕಾರ’ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top