ಆರೋಗ್ಯ

ಉಗುರುಗಳ ಸೌಂದರ್ಯ ಚೆನ್ನಾಗಿರಬೇಕು ಅಂದ್ರೆ ಹೀಗೆ ಮಾಡ್ಬೇಕು , ನೈಲ್ ಪಾಲಿಶಿಂಗ್ ಯಿಂದ ಹಿಡಿದು ನೈಲ್ ಕೇರ್ ವರೆಗೂ ಪೂರ್ತಿ ಗೈಡ್.

ಉಗುರುಗಳ ಸೌಂದರ್ಯ.

ಉಗುರುಗಳಿಗೆ ಬಣ್ಣ ಹಚ್ಚುವುದು ಹೇಗೆಂದು ಗೊತ್ತೇ,ಸಾಮಾನ್ಯವಾಗಿ ಯಾರಿಗೂ ಅಷ್ಟಾಗಿ ತಿಳಿದಿರುವುದಿಲ್ಲ ಆದರೂ ನಾವೂ  ನಮಗೆ ತಿಳಿದ ಹಾಗೆ ಬಣ್ಣ ಹಚ್ಚುತ್ತೇವೆ, ಇಲ್ಲಿ ನಿಮ್ಮ ಉಗುರುಗಳಿಗೆಂದೇ ಕೆಲವು ಸೌಂದರ್ಯ ಸಲಹೆಗಳು ಇವೆ.ಅವುಗಳನ್ನು ಪಾಲಿಸಿ  ನಿಮ್ಮ ಉಗುರುಗಳ ಸೌಂದರ್ಯ ಹೆಚ್ಚಿಸಿಕೊಳ್ಳಿ.

ಉಗುರುಗಳಿಗೆ ಬಣ್ಣ ಹಚ್ಚುವ ಕ್ರಮ:ಎಡಗೈ ಕಿರುಬೆರಳಿನ ಉಗುರಿನಿಂದ ಬಣ್ಣ ಹಚ್ಚಲು ಆರಂಭಿಸಿ,ನಂತರ ಆ ಕೈ ಮುಗಿದ ಮೇಲೆ ಬಲಗೈ ಹೆಬ್ಬೆರಳಿನಿಂದ ಬಣ್ಣ ಹಚ್ಚಲು ಪ್ರಾರಂಭಿಸಬೇಕು.

 

 

 

ಪ್ರತಿಯೊಂದು ಉಗುರಿಗೂ ನೀವು ಅದರ ಮೊದಲ ಮದ್ಯಭಾಗಕ್ಕೆ ಬಣ್ಣ ಹಚ್ಚಿ ನಂತರ ಅಕ್ಕ ಪಕ್ಕದ ಬೆರಳುಗಳಿಗೆ ಬಣ್ಣ ತುಂಬಬೇಕು. ಯಾವಾಗಲೂ  ಬಣ್ಣವನ್ನು ಹಚ್ಚುವುದು ಪೂರ್ತಿ  ಮಾಡುವಾಗ ಉಗುರ ತುದಿಗೆ ತಂದು ಪೂರ್ತಿ ಮಾಡಬೇಕು.ಪಾಲಿಶ ಒಣಗಲು ಬಿಡಿ;ಪುನಃ ಅದರ ಮೇಲೆ ಬಣ್ಣ ಲೇಪಿಸಿ ಒಣಗಲು ಬಿಡಿ.ಕ್ಲಿಯರ ಬೇಸ ಪಾಲಿಷನಿಂದ ಉಗುರು ತುದಿ ಹಾಗೂ ಮೇಲ್ಬಾಗಗಳಿಗೆ ಹಚ್ಚಿ ಸಂಪೂರ್ಣ ಮಾಡಿ.ಇದರಿಂದ ನಿಮ್ಮ ಉಗುರು ತುದಿ ದೃಢವಾಗಿ,ಬಿಗಿಯಾಗಿ, ಕೂರುತ್ತದೆ. ವಾರದ ನಂತರ ನೀವು ಪುನಃ ಕೈಗಳನ್ನು ಅಂದಗೊಳಿಸುವವರೆಗೂ ಇದು ಹೀಗೇ ಇರುತ್ತದೆ.

ಕ್ಲಿಯರ್ ಬೇಸ್ ಕೋಟ್ :ಉಗುರುಗಳ ಆರೋಗ್ಯಕರ ಕಳೆಯನ್ನು ಹೊರಸೂಸುವಂತಾಗಲು ಬೇಸ ಕೋಟ್ ಪಾಲಿಷ್ ಬಹು ಮುಖ್ಯ ಪಾತ್ರ ವಹಿಸುತ್ತದೆ. ಇದು ಉಗುರು ಬಣ್ಣದ ಕಲೆಗಳು ಉಳಿಯದಂತೆ ಅಥವಾ ಅದು ಉಗುರು ಹಾಳಾಗದಂತೆ ತಡೆಯುತ್ತದೆ. ಜೊತೆಗೆ ನೇಲ್ ಪಾಲಿಷ್ ಮಾಡುವುದಕ್ಕೆ ಮುನ್ನ ಹಚ್ಚಲು ಅತ್ಯುತ್ತಮ ತಳಪಾಯ ಅಥವಾ ಬೇಸ ಕೋಟ್ ಆಗಿದೆ.ಇದನ್ನು ಉಗುರು ಬಣ್ಣ ಹಚ್ಚಿದ್ದ ನಂತರ ಬಳಸುವುದರಿಂದ ಬಣ್ಣ ಭದ್ರವಾಗಿರುವಂತೆ ಮಾಡುತ್ತದೆ ಮತ್ತು ಉಗುರುಗಳು ಒಡೆಯದಂತೆ ರಕ್ಷಣೆಯನ್ನು ನೀಡುತ್ತದೆ.

ಸಹಜ ಚೆಲುವಿಗೆ ಉಗುರುಗಳು:ಆಲಿವ್ ತೈಲವನ್ನು ಪ್ರತಿದಿನ ಉಗುರುಗಳಿಗೆ ಹಚ್ಚಿ ಅಥವಾ ಬೆಚ್ಚಗೆ ಮಾಡಿದ ಆಲಿವ್ ಎಣ್ಣೆಯಲ್ಲಿ ಐದು ನಿಮಿಷಗಳ ಕಾಲ ಅದ್ದಿರಿ.ಅಗತ್ಯವಿದ್ದರೆ ಎಚ್ಚರಿಕೆಯಿಂದ ಉಗುರುಗಳಿಗೆ ಪುನಃ ತೆಳುವಾಗಿ ಬಣ್ಣ ಲೇಪಿಸಿ.ಮಲಗುವ ಮುನ್ನ ನಿಮ್ಮ ಉಗುರುಗಳಿಗೆ ಸಮೃದ್ಧ ಕ್ರೀಮಗಳನ್ನು ಹಚ್ಚಿರಿ

ವಾರಕ್ಕೊಮ್ಮೆ ಅನುಸರಿಸುವ ಕ್ರಮ:ಒಂದು ಬೌಲನಲ್ಲಿ ಹಾಲು ತುಂಬಿ ಅದರಲ್ಲಿ 10 ನಿಮಿಷಗಳ ಕಾಲ ನಿಮ್ಮ ಬೆರಳಗಳು ಹಾಗೂ ಮಣಿಕಟ್ಟನ್ನು ಮುಳುಗಿಸಿಟ್ಟುಕೊಳ್ಳಿ. ನಂತರ ಒತ್ತಿ ಒರೆಸಿ.

 

 

 

3 ಟೇಬಲ್ ಚಮಚ ಲೆನಿಲಿನ್ ಗೆ 1 ಟೀ ಚಮಚ ಎಳ್ಳೆಣ್ಣೆ ಬೆರೆಸಿದ ಕ್ರೀಮನ್ನು ನಿಮ್ಮ ಬೆರಳು ಹಾಗೂ ಮಣಿಕಟ್ಟಿಗೆ ಲೇಪಿಸಿ,ಹತ್ತಿಯ ಕೈ ವಸ್ತುಗಳನ್ನು ಬಳಸಿ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top