fbpx
ಮನೋರಂಜನೆ

ಅಂಬರೀಷ್ ಹೀರೋಯಿನ್ ಮುದ್ದು ಸಂಪಿಗೆ ನಿರೋಶಾ ಈಗ ಎಲ್ಲಿದ್ದಾರೆ ಹಾಗೂ ಏನ್ ಮಾಡ್ಕೊಂಡಿದ್ದಾರೆ ಗೊತ್ತಾ

ಮಿಡಿದ ಹೃದಯಗಳು ಚಿತ್ರದ ಮುದ್ದು ಸಂಪಿಗೆ ನಿರೋಶಾ ಈಗ ಏನ್ ಮಾಡ್ಕೊಂಡಿದ್ದಾರೆ ಗೊತ್ತಾ
‘ಇಬ್ಬರು ಹೆಂಡ್ತೀರ ಮುದ್ದಿನ ಪೊಲೀಸ್’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಗ್ರ್ಯಾಂಡ್ ಎಂಟ್ರಿಯನ್ನು ಕೊಟ್ಟ ಪೊಲೀಸ್ ಕಾನ್ ಸ್ಟೇಬಲ್ ಶಶಿಕುಮಾರ್ ಅವರ ಪತ್ನಿ ನಿರೋಶಾ ತನ್ನ ಮುದ್ದು ಮುಖದೊಂದಿಗೆ ಎಲ್ಲರನ್ನು ಮೋಡಿ ಮಾಡಿದ್ದರು ಶಶಿಕುಮಾರ್ ಹಾಗೂ ತಾರಾ ಅವರೊಂದಿಗೆ ಎರಡನೇ ಹೆಂಡತಿಯಾಗಿ ಅಭಿನಯ ಮಾಡಿದ್ದ ನಿರೋಶಾ ಆ ನಂತರ ಹತ್ತಾರು ಕನ್ನಡ ಚಲನಚಿತ್ರಗಳಲ್ಲಿ ಅಭಿನಯಿಸಿದ್ದರು.

ಅಂಬರೀಷ್ ಅವರೊಂದಿಗೆ ‘ಮಿಡಿದ ಹೃದಯಗಳು’ ಚಿತ್ರದಲ್ಲಿ ಹೀರೋಯಿನ್ ಆಗಿ ಅಭಿನಯಿಸಿದ್ದ ನಿರೋಶಾ ಅವರಿಗೆ ಸಂಪಿಗೆ ಪಾತ್ರವೂ ಜನಮಾನಸದಲ್ಲಿ ಬಹಳ ಒಳ್ಳೆಯ ಹೆಸರನ್ನು ತಂದುಕೊಟ್ಟಿತ್ತು , ಆ ನಂತರ ದೇವರಾಜ್ ಅವರೊಂದಿಗೆ ನಟಿಯಾಗಿ ‘ಲಾಕಪ್ ಡೆತ್’ ಚಿತ್ರದಲ್ಲಿ ಕೂಡ ನಟಿಸಿದ್ದರು ಆ ಚಿತ್ರದಲ್ಲಿನ ‘ಪುಟ್ಟ ನಂಜಿ’ ಹಾಡು ಬಹಳ ಫೇಮಸ್ ಆಗಿತ್ತು , ಗಂಡಗುಲಿ , ಮದರ್ ಇಂಡಿಯಾ, ಓಹೋ, ಎಮರ್ಜೆನ್ಸಿ , ಶಿವ ,ಪಾಳೇಗಾರ , ಬೃಂದಾವನ ಚಿತ್ರಗಳಲ್ಲೂ ಅಭಿನಯ ಮಾಡಿದ್ದಾರೆ ನಿರೋಶಾ.1995 ರ ಬಳಿಕ ಮಿಂಚಿ ಮರೆಯಾಗಿದ್ದರೂ ಆಕೆ ಈಗ ಏನುಮಾಡ್ತಾ ಇದ್ದಾರೆ ಗೊತ್ತಾ .

 

 

 

ಯಾರೀ ನಿರೋಶಾ ?
ಈವರೆಗೂ ಕನ್ನಡ ತೆಲುಗು ತಮಿಳು ಮಲಯಾಳಂ ಹೀಗೆ ದಕ್ಷಿಣ ಭಾರತದ ಚಿತ್ರರಂಗವನ್ನೇ ಆಳಿದ್ದ ನಿರೋಷಾ ಮೂಲತಃ ಶ್ರೀಲಂಕಾದವರು, ಆಕೆ ಚಿತ್ರರಂಗವನ್ನು ಪ್ರವೇಶ ಮಾಡಿದ್ದು ಮಣಿರತ್ನಂ ಅವರ ಅಗ್ನಿ ನಕ್ಷತ್ರಂ ಎನ್ನುವ ಚಿತ್ರದ ಮೂಲಕ 1988 ರಲ್ಲಿ ಬಿಡುಗಡೆಯಾದ ಈ ಚಿತ್ರ ಆಕೆಗೆ ಭಾರೀ ಯಶಸ್ಸನ್ನು ತಂದುಕೊಟ್ಟಿತ್ತು 1988 ರಿಂದ 1995 ರವರೆಗೆ ಆಕೆ ಹೀರೋಯಿನ್ ಆಗಿ ಅಭಿನಯಿಸಿದ್ದರು ಆ ನಂತರ ನಟ ರಾಮಕೃಷ್ಣ ಅವರನ್ನು ಮದುವೆಯಾಗಿ ಲೈಫ್ನಲ್ಲಿ ಸೆಟ್ಲ್ ಆಗಿದ್ದರೂ ಇದಾದ ಬಳಿಕ ಆಕೆ ಯಾವುದೇ ಚಲನಚಿತ್ರಗಳಲ್ಲಿ ಕಾಣಿಸಿಕೊಳ್ಳಲಿಲ್ಲ .

2003 ರಿಂದ ಮತ್ತೆ ತನ್ನ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ ನಿರೋಶಾ ಅನೇಕ ಸೀರಿಯಲ್ಗಳು ಹಾಗೂ ಚಲನ ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಮಾಡುತ್ತಾ
ಯಶಸ್ವಿಯಾದರು ಆದರೆ ಆಕೆ ಬಯಸಿದ ಹಾಗೆ ಮತ್ತೆ ಆಕೆಗೆ ಹೀರೋಯಿನ್ ಪಾತ್ರಗಳು ದೊರೆಯಲಿಲ್ಲ .

ನಿರೋಷಾ ತಂದೆ ಒಬ್ಬ ದೊಡ್ಡ ತಮಿಳು ನಟ
ನಿರೋಶಾ ತಮಿಳಿನ ಖ್ಯಾತ ನಟ ಎಂ .ಆರ್ ರಾಧಾ ಅಲಿಯಾಸ್ ಮೋಹನ್ ರಾಜಗೋಪಾಲ ರಾಧಾಕೃಷ್ಣನ್ ನಾಯ್ಡು ಅವರ ಕೊನೆಯ ಪುತ್ರಿ ಈಕೆ ಬೇರಾರೂ ಅಲ್ಲ ನಟಿ ರಾಧಿಕಾ ಶರತ್ ಕುಮಾರ್ ಅವರ ತಂಗಿ , ಅಕ್ಕ ರಾಧಿಕಾ ಕೂಡ ತಮಿಳಿನ ಖ್ಯಾತ ನಟಿಯರಲ್ಲಿ ಒಬ್ಬರು .

ನಿರೋಷಾ ರಹಸ್ಯ ಮದುವೆ

 

 

1995 ರಲ್ಲಿ ನಿರೋಶಾ ಖ್ಯಾತ ತಮಿಳು ನಟ ರಾಮಕೃಷ್ಣ ಅಲಿಯಾಸ್ ರಾಮ್ಕಿ ಅವರನ್ನು ರಹಸ್ಯ ಮದುವೆ ಮಾಡಿಕೊಂಡಿದ್ದರು ಆದರೆ ಈ ರಹಸ್ಯ ಮದುವೆಯ ಬಗ್ಗೆ ಅವರ ಪ್ರೀತಿಯ ಬಗ್ಗೆ ಅವರ ಕುಟುಂಬದಲ್ಲಿ ಯಾರಿಗೂ ಹೇಳಿಕೊಂಡಿರಲಿಲ್ಲ.ಇದಾದ ಬಳಿಕ ಮೂರು ವರ್ಷದ ನಂತರ ಅವರ ರಹಸ್ಯ ಮದುವೆಗೆ ಒಂದು ಬ್ರೇಕ್ ಬಿದ್ದಿತ್ತು ತಮ್ಮ ಅಭಿಮಾನಿ ಹಾಗೂ ಕುಟುಂಬದವರಿಗೂ ಸಹ ತಮ್ಮ ಮದುವೆಯ ಬಗ್ಗೆ ತಿಳಿಸಿದ್ದರು ಈಗ ಸದ್ಯಕ್ಕೆ ನಿರೋಷಾ ಹಾಗೂ ಅವರ ಪತಿ ತಮಿಳಿನ ಸೀರಿಯಲ್ಗಳಲ್ಲಿ ಅಭಿನಯ ಮಾಡುತ್ತಿದ್ದಾರೆ ಈ ದಂಪತಿಗಳಿಗೆ ಮಕ್ಕಳಿಲ್ಲ .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top