ಮನೋರಂಜನೆ

ಚಂದನವನದ ಎಲ್ಲ ನಿರ್ಮಾಪಕರಿಗೆ ರಿಯಲ್ ಹೀರೋ ಆದ ‘ದಿ ವಿಲನ್’.

ಕನ್ನಡ ಚಿತ್ರರಂಗದಲ್ಲಿ ವಿಪರೀತ ಕ್ರೆಜ್ ಹುಟ್ಟುಹಾಕಿರುವ ‘ದಿ ವಿಲನ್’ ಚಿತ್ರ ಬಿಡುಗಡೆಯಾಗೋ ದಿನಾಂಕ ಪಕ್ಕಾ ಆಗಿದ್ದು ಅಕ್ಟೋಬರ್ ಹದಿನೆಂಟನೇ ತಾರೀಕಿನಂದು ತೆರೆಗೆ ಅಪ್ಪಳಿಸಲಿದೆ..ಸೆಟ್ಟೇರಿ ಎರಡು ವರ್ಷಗಳೇ ಕಳೆಯುತ್ತಾ ಬಂದಿದ್ದರೂ ಪ್ರೇಕ್ಷಕರ ವಲಯದಲ್ಲಿ ವಿಪರೀತ ಕುತೂಹಲ ಕ್ರಿಯೇಟ್ ಮೆಂಟೇನ್ ಮಾಡಿಕೊಂಡು ಬಂದಿರೋ ಪ್ರೇಮ್ ನಿರ್ದೇಶನದ ‘ದಿ ವಿಲನ್’ ಸಿನಿಮಾ ಸುದೀಪ್ ಮತ್ತು ಶಿವಣ್ಣ ಒಟ್ಟಾಗಿ ನಟಿಸಿರುವುದರಿಂದ ಈ ಪಾಟಿ ಸಂಚಲನ ಸೃಷ್ಟಿಸುತ್ತಿದೆ.. ಈಗಾಗಲೇ ಬಿಡುಗಡೆಯಾಗಿರೋ ಟೀಸರ್ ಮತ್ತು ಮೂರು ಹಾಡುಗಳ ಅಬ್ಬರವನ್ನು ಕಂಡು ಇಡೀ ಗಾಂಧಿನಗರವೇ ಬೆಚ್ಚಿಬಿದ್ದಾರೆ.

 

 

ಇಂಥಾ ಬಹುನಿರೀಕ್ಷಿತ ‘ದಿ ವಿಲನ್’ ಸಿನಿಮಾ ಚಂದನವನದ ಎಲ್ಲ ನಿರ್ಮಾಪಕರ ಪಾಲಿಗೆ ರಿಯಲ್ ಹೀರೊ ಆಗಲು ಹೊರಟಿದೆ. ಹೌದು, ಒಂದು ಚಿತ್ರದಿಂದ ಬರುವ ಲಾಭದಲ್ಲಿ ನಿರ್ಮಾಪಕರು ಹಾಗೂ ಮಲ್ಟಿಪ್ಲೆಕ್ಸ್​ ಮಾಲೀಕರು 50:50 ಪ್ರಮಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದರಿಂದ ಮಲ್ಟಿಪ್ಲೆಕ್ಸ್ ಮಾಲೀಕರಿಗೆ ಜಾಸ್ತಿ ಲಾಭ ಆಗುತ್ತಿದ್ದು ಕೋಟಿಗಟ್ಟಲೆ ಖರ್ಚು ಮಾಡಿದ ನಿರ್ಮಾಪಕರಿಗೆ ನಷ್ಟವೇ ಆಗುತ್ತಿದೆ. ಆದ್ದರಿಂದ ಮಲ್ಟಿಪ್ಲೆಕ್ಸ್​​ಗಳಿಂದ ಬರುವ ಲಾಭದಲ್ಲಿ ಶೇಕಡ 50 ಕ್ಕಿಂತಲೂ ಹೆಚ್ಚು ನಿರ್ಮಾಪಕರಿಗೆ ನೀಡಬೇಕೆಂದು ‘ದಿ ವಿಲನ್’ ಚಿತ್ರದ ನಿರ್ದೇಶಕ ಪ್ರೇಮ್​ ಒತ್ತಾಯಿಸಿದ್ದಾರೆ. ಅದಕ್ಕೆ ಸಂಭಂದಿಸಿದಂತೆ ವಾಣಿಜ್ಯ ಮಂಡಳಿಯಲ್ಲಿ ಮನವಿಯನ್ನೂ ಸಲ್ಲಿಸಿದ್ದಾರೆ..

ಹಾಗೇನಾದರೂ ಪ್ರೇಮ್ ಅವರ ಮನವಿ ಪುರಸ್ಕಾರ ಗೊಂಡರೆ ಕೇವಲ ದಿ ವಿಲನ್ ಚಿತ್ರದ ನಿರ್ಮಾಪಕರಿಗೆ ಮಾತ್ರವಲ್ಲದೆ ಎಲ್ಲಾ ಕನ್ನಡ ಸಿನಿಮಾಗಳ ನಿರ್ಮಾಪಕರಿಗೂ ಪ್ರಯೋಜನವಾಗಲಿದೆ. ಈ ವಿಚಾರವನ್ನು ತಮ್ಮ ಟ್ವಿಟ್ಟರ್​ನಲ್ಲಿ ಹಂಚಿಕೊಂಡಿರುವ “ಪ್ರೇಮ್ ಮಲ್ಟಿಪ್ಲೆಕ್ಸ್‌ಗಳಿಂದ ನಿರ್ಮಾಪಕರಿಗೆ ಶೇಕಡ 50%ಗಿಂತ ಹೆಚ್ಚಿನ ಶೇರ್‌ ಕೊಡಬೇಕೆಂದು ವಿನಂತಿಸುತ್ತೇನೆ. ಇಲ್ಲವಾದಲ್ಲಿ ದೊಡ್ಡ ಚಿತ್ರ ಮಾಡಿರೋ ನಿರ್ಮಾಪಕರಿಗೆ ನಷ್ಟವಾಗುತ್ತೆ. ಈ ಬಗ್ಗೆ ನಮ್ಮ ದಿ ವಿಲನ್‌ ಟೀಮ್‌ನಿಂದ ವಾಣಿಜ್ಯ ಮಂಡಳಿಗೆ ಇವತ್ತು ಮನವಿ ಸಲ್ಲಿಸಿದ್ದೇವೆ. ಆ ನಿರ್ಧಾರ ನಿರ್ಮಾಪಕರ ಪರವಾಗಿರಲಿ” ಎಂದು ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top