ಮನೋರಂಜನೆ

‘ದಿ ವಿಲನ್’ ಹೀರೋಯಿನ್ ಆಮಿ ಜಾಕ್ಸನ್ ಮೇಲೆ ನಿರ್ದೇಶಕ ಪ್ರೇಮ್ಸ್ ಬೇಸರಗೊಂಡಿರುವುದು ಯಾಕೆ?

‘ದಿ ವಿಲನ್’ ಸದ್ಯ ಗಾಂಧಿನಗರದ ಗಲ್ಲಿ ಗಲ್ಲಿಯಲ್ಲೂ ಹವಾ ಎಬ್ಬಿಸಿರೋ ಸಿನಿಮಾ., ಆರು ವರ್ಷಗಳ ನಂತರ ನಿರ್ದೇಶನಕ್ಕೆ ಮರಳಿರುವ ಪ್ರೇಮ್ ‘ದಿ ವಿಲನ್’ ಸಿನಿಮಾ ಮೇಲಿನ ನಿರೀಕ್ಷೆಯನ್ನು ದಿನೇ ದಿನೇ ಹೆಚ್ಚಿಸುತ್ತಲೇ ಇದ್ದಾರೆ.. ಈಗಾಗಲೇ ಬಿಡುಗಡೆಯಾಗಿರೋ ಟೀಸರ್ ಮತ್ತು ಹಾಡುಗಳ ಅಬ್ಬರ ಕಂಡು ಅನೇಕರು ಬೆಚ್ಚಿಬಿದ್ದಿದ್ದಾರೆ.. ಸೆಟ್ಟೇರಿದಾಗಿನಿಂದಲೂ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಾಗುತ್ತಲೇ ಇರುವ ವಿಲನ್ ಚಿತ್ರ ಇದೆ ತಿಂಗಳ 18ರಂದು ತೆರೆಕಾಣಿಯುತ್ತಿದೆ. ಇನ್ನು 11ರಿಂದ ಚಿತ್ರದ ಟಿಕೆಟ್ ಗಳು ಕೂಡ ಥಿಯೇಟರ್ ಗಳಲ್ಲಿ ದೊರೆಯಲಿವೆ..

 

 

ಇಂಥಾ ಬಹುನಿರೀಕ್ಷಿತ ‘ದಿ ವಿಲನ್’ ಸಿನಿಮಾ ನಿರ್ದೇಶನ ಮಾಡಿರುವ ಪ್ರೇಮ್ ಇದೀಗ ಚಿತ್ರದ ನಾಯಕಿ ಬ್ರಿಟಿಷ್ ಬ್ಯುಟಿ ಆಮಿ ಜಾಕ್ಸನ್ ಮೇಲೆ ಕೋಪಗೊಂಡಿದ್ದಾರಂತೆ. ಆಮಿ ಜಾಕ್ಸನ್ ಪ್ರಚಾರಕ್ಕೆ ಬರುತ್ತಿಲ್ಲ ಎನ್ನುವ ಕಾರಣಕ್ಕೆ ಪ್ರೇಮ್ ಬೇಸರಗೊಂಡಿದ್ದಾರಂತೆ.. ಈ ಚಿತ್ರದ ಟೀಸರ್ ಲಾಂಚ್ ವೇಳೆ
ಆಮಿ ಜಾಕ್ಸನ್ ಹಾಜರಿರುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಅವರು ಬಂದಿರಲಿಲ್ಲ,, ಚಿತ್ರದ ಸ್ಟಾರ್ ನಟರೇ ಪ್ರಚಾರದಲ್ಲಿ ಭಾಗಿಯಾಗುತ್ತಿರುವಾಗ ಈಕೆ ಮಾತ್ರ ಏಕೆ ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ, ಪ್ರತಿಕ್ರಿಯೆಗೂ ಸಿಗುತ್ತಿಲ್ಲ ಎಂದು ನಿರ್ದೇಶಕರನ್ನು ಎಲ್ಲರೂ ಕೇಳುತ್ತಿದ್ದು ಇದು ನಿರ್ದೇಶಕ ಪ್ರೇಮ್ ಗೆ ಇರಿಸುಮುರುಸು ತಂದಿದೆ ಎನ್ನಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಪ್ರೇಮ್, ”ನನಗೆ ಆಮಿ ಜಾಕ್ಸನ್ ಕೆಲಸದ ಮೇಲೆ ಗೌರವವಿದೆ. ಚಿತ್ರದಲ್ಲಿ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಅವರಿಗೆ ಕನ್ನಡ ಭಾಷೆ ಗೊತ್ತಿಲ್ಲದಿರುವುದರಿಂದ ಮಾತನಾಡಲು ಕಷ್ಟವಾಗುತ್ತಿದೆ. ಲಂಡನ್ ನಿಂದ ಇಲ್ಲಿಗೆ ಬರಲು ಸಮಯ ಹಿಡಿಯುತ್ತದೆ” ಎನ್ನುತ್ತಾರೆ.

ಅಂದಹಾಗೆ ಸಿನಿಮಾದ ಅಡ್ವಾನ್ಸ್ ಬುಕಿಂಗ್ಸ್ ಅಕ್ಟೋಬರ್ 11ರಿಂದ ಆರಂಭಗೊಳ್ಳಲಿದೆ. ಚಿತ್ರ ಬಿಡುಗಡೆಯಾಗಲು ಎರಡು ವಾರಗಳು ಬಾಕಿ ಇದ್ದರೂ ಕೂಡಾ ಅಭಿಮಾನಿಗಳೆಲ್ಲ ಈಗಾಗಲೇ ತಯಾರಿ ಆರಂಭಿಸಿದ್ದಾರೆ. ಮುಖ್ಯವಾದ ಥೇಟರುಗಳು ಸೇರಿದಂತೆ ಎಲ್ಲ ಕಡೆಗಳಲ್ಲಿಯೂ ‘ದಿ ವಿಲನ್’ ಚಿತ್ರಕ್ಕೆ ಅದ್ದೂರಿ ಸ್ವಾಗತ ಕೋರಲು ತಯಾರಿಗಳು ಭರದಿಂದ ಸಾಗುತ್ತಿವೆ. ಇದಕ್ಕಾಗಿ ಭಾರೀಗಾತ್ರದ ಕಟೌಟುಗಳೂ ಸೇರಿದಂತೆ ಡಿಫರೆಂಟಾದ ಬ್ಯಾನರುಗಳೂ ಸಿದ್ಧಗೊಳ್ಳುತ್ತಿವೆ.

ದಿ ವಿಲನ್ ಬಗ್ಗೆ ಹೇಳ್ಬೇಕಂದ್ರೆ ಚಿತ್ರದಲ್ಲಿ ಕಿಚ್ಚ ಸುದೀಪ್ ಮತ್ತು ಶಿವಣ್ಣನಿಗೆ ನಾಯಕಿಯಾಗಿ ಬ್ರಿಟಿಷ್ ಬ್ಯೂಟಿ ಆಮಿ ಜಾಕ್ಸನ್ ನಟಿಸುತ್ತಿದ್ದಾರೆ,,ಚಿತ್ರಕ್ಕೆ ಸಿ.ಮನೋಹರ್ ಬಂಡವಾಳ ಹಾಕಿದ್ದು ಅರ್ಜುನ್ಯ ಜನ್ಯರವರು ಸಂಗೀತ ಸಂಯೋಜನೆ ಮಾಡಿದ್ದಾರೆ…ಉಳಿದಂತೆ ಗಿರಿಗೌಡ ಅವರ ಕ್ಯಾಮರಾ ಕೈಚಳಕ ಚಿತ್ರಕ್ಕಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top