ಮನೋರಂಜನೆ

12 ವರ್ಷಗಳ ಬಳಿಕ ದರ್ಶನ್‌ಗೆ ನಾಯಕಿಯಾಗಲಿರುವ ಸ್ಯಾಂಡಲ್‍ವುಡ್ ಕ್ವೀನ್ ರಮ್ಯಾ.

ಟಾಪ್ ನಟಿಯಾಗಿದ್ದ ಸಂಧರ್ಭದಲ್ಲೇ ಚಿತ್ರರಂಗದಿಂದ ದೂರವಾಗಿ ರಾಜಕೀಯದಲ್ಲಿ ಸಕ್ರಿಯವಾಗಿರುವ ಮೋಹಕತಾರೆ ರಮ್ಯಾ ಪಾಲಿಟಿಕ್ಸ್ ಅಂತ ಬ್ಯುಸಿಯಾದ ಮೇಲೆ ಸ್ಯಾಂಡಲ್‌ವುಡ್‌ಗೆ ಮತ್ತೆ ವಾಪಸ್ ಬರ‍್ತಾರಾ ಅಥವಾ ಇಲ್ವಾ ಅನ್ನೋ ಚರ್ಚೆ ಸಾಕಷ್ಟು ದಿನಗಳಿಂದ ನಡೆಯುತ್ತಲೇ ಇದೆ. ಈ ವಾದ ವಿವಾದಗಳ ನಡುವೆ ಸ್ಯಾಂಡಲ್‌ವುಡ್ ಕ್ವೀನ್ ಮತ್ತೆ ಸಿನಿಮಾದಲ್ಲಿ ನಟಿಸೋದು ಕನ್ಪರ್ಮ್ ಎಂಬ ಸುದ್ದಿಯಿದ್ದು ರಮ್ಯಾ ಮತ್ತೆ ಬಣ್ಣಹಚ್ಚಬಹುದೆಂಬ ನಿರೀಕ್ಷೆಯಿಂದ ಧ್ಯಾನಿಸುತ್ತಾ ಸಿಕ್ಕಾಪಟ್ಟೆ ಬೇಸರ ಮಾಡಿಕೊಂಡಿದ್ದೋರಿಗೊಂದು ಸ್ವೀಟ್ ನ್ಯೂಸ್…

ವಿಶೇಷ ಅಂದ್ರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ರಮ್ಯಾ ಈಗ ನಟಿಸುತ್ತಾರೆ ಎನ್ನುವ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಈ ಹಿಂದೆ ‘ದತ್ತ’ ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ ಈ ಜೋಡಿ 12 ವರ್ಷಗಳ ನಂತರ ಮತ್ತೆ ಒಂದೇ ಸಿನಿಮಾದಲ್ಲಿ ಒಂದಾಗುತ್ತಾರೆ ಎನ್ನಲಾಗುತ್ತಿದೆ.

 

 

ಅಂದಹಾಗೆ ದರ್ಶನ್‌ಗೆ ರಮ್ಯಾ ನಾಯಕಿಯಾಗುತ್ತಿರುವುದು ‘ಗಂಡುಗಲಿ ಮದಕರಿ ನಾಯಕ’ ಎನ್ನುವ ಚಿತ್ರಕ್ಕೆ ಎಂಬುದು ಸದ್ಯದ ಸುದ್ದಿ. ರಾಕ್‌ಲೈನ್ ವೆಂಕಟೇಶ್ ನಿರ್ಮಿಸಿ, ರಾಜೇಂದ್ರಸಿಂಗ್ ಬಾಬು ನಿರ್ದೇಶನ ಮಾಡಲಿರುವ ಈ ಚಿತ್ರಕ್ಕೆ ದರ್ಶನ್ ಅವರೇ ನಾಯಕ ಎಂಬುದು ಈಗಾಗಲೇ ಗೊತ್ತು ಪಡಿಸಲಾಗಿದೆ. ಇದರ ಜತೆಗೆ ಈ ಚಿತ್ರಕ್ಕೆ ರಮ್ಯಾ ನಾಯಕಿ ಆಗುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ.. ಹಾಗೇನಾದರೂ ಈ ಸುದ್ದಿ ನಿಜವೇ ಆದರೆ ರಮ್ಯಾ ಮತ್ತೆ ಅವರನ್ನು ಬೆಳ್ಳಿತೆರೆ ಮೇಲೆ ಮತ್ತೆ ನೋಡಬೇಕು ಎಂದು ಹಂಬಲಿಸಿದ್ದ ಜೀವಗಳಿಗೆ ಇದು ಸಿಹಿ ಸಮಾಚಾರವೇ ಸರಿ.

‘ಗಂಡುಗಲಿ ವೀರಮದಕರಿ ನಾಯಕ’ ಚಿತ್ರ 2019ರ ಜನವರಿ 15 ರಂದು ಸೆಟ್ಟೇರಲಿದೆ. ‘ಗಂಡುಗಲಿ ಮದಕರಿ ನಾಯಕ’ ಬಿಎಲ್ ವೇಣು ಅವರೇ ಬರೆದಿರುವ ಕಾದಂಬರಿಯಾಗಿದ್ದು, ಇದಕ್ಕೆ ಅವರೇ ಚಿತ್ರಕಥೆ ಹಾಗೂ ಸಂಭಾಷಣೆ ಬರೆಯುತ್ತಿದ್ದಾರೆ. ದರ್ಶನ್ ಅವರನ್ನೇ ಮನಸ್ಸಿನಲ್ಲಿಟ್ಟುಕೊಂಡು ಮದಕರಿ ನಾಯಕನಿಗೆ ಸಂಭಾಷಣೆ ಬರೆಯುತ್ತಿದ್ದಾರೆ ಬಿ ಎಲ್ ವೇಣು..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top