ಮನೋರಂಜನೆ

ಗಂಡುಗಲಿ ವೀರಮದಕರಿಗೆ ನಾಯಕಿಯಾಗಲಿದ್ದಾರೆ ಸ್ಯಾಂಡಲ್‍ವುಡ್ ಕ್ವೀನ್ ರಮ್ಯಾ.

ರಾಜಕಾರಣದ ಗುಂಗಿಗೆ ಬಿದ್ದು ಚಿತ್ರ ರಂಗದಿಂದ ಮರೆಯಾಗಿದ್ದ ರಮ್ಯಾರನ್ನ ಅಭಿಮಾನಿಗಳು ಮಿಸ್ ಮಾಡಿಕಳ್ತಲೇ ಇದ್ದಾರೆ. ಆದರೆ ರಮ್ಯಾ ಮತ್ತೆ ಬಣ್ಣಹಚ್ಚಬಹುದೆಂಬ ನಿರೀಕ್ಷೆ ಕೂಡಾ ಇತ್ತಿತ್ತಲಾಗಿ ಮಂಕಾಗಿತ್ತು. ಆದರೆ ಸ್ಯಾಂಡಲ್‌ವುಡ್‌ಗೆ ಮತ್ತೆ ರಮ್ಯಾ ವಾಪಸ್ ಬರ‍್ತಾರಾ ಅಥವಾ ಇಲ್ವಾ ಅನ್ನೋ ಚರ್ಚೆ ಸಾಕಷ್ಟು ದಿನಗಳಿಂದ ನಡೆಯುತ್ತಲೇ ಇದೆ. ಈ ವಾದ ವಿವಾದಗಳ ನಡುವೆ ಸ್ಯಾಂಡಲ್‌ವುಡ್ ಕ್ವೀನ್ ಮತ್ತೆ ಸಿನಿಮಾದಲ್ಲಿ ನಟಿಸೋದು ಕನ್ಪರ್ಮ್ ಎಂಬ ಸುದ್ದಿಯಿದೆ. ಅದೂ ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ಅನ್ನೋದೇ ಇಂಟ್‌ರೆಸ್ಟಿಂಗ್ ಸಂಗತಿ.

ಕಳೆದ ವರ್ಷ ಈ ಜೋಡಿ ಖಾಸಗಿ ವಾಹಿನಿಯೊಂದರ ಶೋವೊಂದರಲ್ಲಿ ಒಟ್ಟಾಗಿ ಕಾಣಿಸಿಕೊಂಡಿತ್ತು. ಆಗಲೇ ಇವರಿಬ್ಬರು ಮತ್ತೆ ಜೊತೆಯಾಗಿ ನಟಿಸಿದ್ರೆ ಹೇಗೆ ಅಂತ ಅಭಿಮಾನಿಗಳು ಮಾತನಾಡಿಕೊಂಡಿದ್ರು. ಇದೀಗ ಅವರ ಆಸೆ ನೆರವೇರೋ ಲಕ್ಷಣಗಳು ಗೋಚರಿಸುತ್ತಿದೆ.

 

 

ಈ ಹಿಂದೆ ದತ್ತಾ ಸಿನಿಮಾದಲ್ಲಿ ದರ್ಶನ್ ಮತ್ತು ರಮ್ಯಾ ಒಂದಾಗಿ ಅಭಿನಯಿಸಿದ್ರು. ಈ ಸಿನಿಮಾ ಕೂಡ ಒಂದು ಮಟ್ಟಿಗೆ ಸಕ್ಸಸ್ ಕಂಡಿತ್ತು. ಆನಂತರ ಇವರಿಬ್ಬರು ಜೊತೆಯಾಗಿ ನಟಿಸಲೇ ಇಲ್ಲ. ಆದರೆ, ಇವರನ್ನ ತೆರೆಮೇಲೆ ನೋಡ್ಬೇಕು ಅನ್ನೋ ಅಭಿಮಾನಿಗಳ ಆಸೆ ಕಡಿಮೆಯಾಗಿಲ್ಲ. ಇದೀಗ ದರ್ಶನ್ ಮತ್ತು ರಮ್ಯಾ 12 ವರ್ಷಗಳ ನಂತರ ಮತ್ತೆ ಒಂದಾಗಿ ನಟಿಸ್ತಾರೆ ಅನ್ನೋ ಸುದ್ದಿ ನಿಧಾನವಾಗಿ ಗಾಂಧಿನಗರದ ಗಲ್ಲಿಗಳಲ್ಲಿ ಹರಿದಾಡ್ತಿದೆ.

ಅಂದಹಾಗೆ ದರ್ಶನ್‌ಗೆ ರಮ್ಯಾ ನಾಯಕಿಯಾಗುತ್ತಿರುವುದು ‘ಗಂಡುಗಲಿ ಮದಕರಿ ನಾಯಕ’ ಎನ್ನುವ ಚಿತ್ರಕ್ಕೆ ಎಂಬುದು ಸದ್ಯದ ಸುದ್ದಿ. ರಾಕ್‌ಲೈನ್ ವೆಂಕಟೇಶ್ ನಿರ್ಮಿಸಿ, ರಾಜೇಂದ್ರಸಿಂಗ್ ಬಾಬು ನಿರ್ದೇಶನ ಮಾಡಲಿರುವ ಈ ಚಿತ್ರಕ್ಕೆ ದರ್ಶನ್ ಅವರೇ ನಾಯಕ ಎಂಬುದು ಈಗಾಗಲೇ ಗೊತ್ತು ಪಡಿಸಲಾಗಿದೆ. ಇದರ ಜತೆಗೆ ಈ ಚಿತ್ರಕ್ಕೆ ರಮ್ಯಾ ನಾಯಕಿ ಆಗುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ.. ಹಾಗೇನಾದರೂ ಈ ಸುದ್ದಿ ನಿಜವೇ ಆದರೆ ರಮ್ಯಾ ಮತ್ತೆ ಅವರನ್ನು ಬೆಳ್ಳಿತೆರೆ ಮೇಲೆ ಮತ್ತೆ ನೋಡಬೇಕು ಎಂದು ಹಂಬಲಿಸಿದ್ದ ಜೀವಗಳಿಗೆ ಇದು ಸಿಹಿ ಸಮಾಚಾರವೇ ಸರಿ.

‘ಗಂಡುಗಲಿ ವೀರಮದಕರಿ ನಾಯಕ’ ಚಿತ್ರ 2019ರ ಜನವರಿ 15 ರಂದು ಸೆಟ್ಟೇರಲಿದೆ. ‘ಗಂಡುಗಲಿ ಮದಕರಿ ನಾಯಕ’ ಬಿಎಲ್ ವೇಣು ಅವರೇ ಬರೆದಿರುವ ಕಾದಂಬರಿಯಾಗಿದ್ದು, ಇದಕ್ಕೆ ಅವರೇ ಚಿತ್ರಕಥೆ ಹಾಗೂ ಸಂಭಾಷಣೆ ಬರೆಯುತ್ತಿದ್ದಾರೆ. ದರ್ಶನ್ ಅವರನ್ನೇ ಮನಸ್ಸಿನಲ್ಲಿಟ್ಟುಕೊಂಡು ಮದಕರಿ ನಾಯಕನಿಗೆ ಸಂಭಾಷಣೆ ಬರೆಯುತ್ತಿದ್ದಾರೆ ಬಿ ಎಲ್ ವೇಣು..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top