fbpx
ಸಮಾಚಾರ

ಫಿಕ್ಸ್ ಆಯ್ತು ಸಾಹೋ ಚಿತ್ರದ ರಿಲೀಸ್ ಡೇಟ್- ಅದೃಷ್ಟದ ದಿನದಂದೇ ಪ್ರತ್ಯಕ್ಷವಾಗಲಿರುವ ಪ್ರಭಾಸ್

ತೆಲುಗು, ತಮಿಳು ಮತ್ತು ಹಿಂದಿಯಲ್ಲಿ ಏಕಕಾಲದಲ್ಲಿ ನಿರ್ಮಾಣವಾಗುತ್ತಿರುವ ಸಾಹೂ ಚಿತ್ರದ ಬಗ್ಗೆ ದೇಶ ವಿದೇಶಗಳಲ್ಲಿಯೂ ನಿರೀಕ್ಷೆಗಳಿದ್ದಾವೆ. ಬಾಹುಬಲಿಯಂಥಾ ಹಿಟ್ ಚಿತ್ರದ ಬಳಿಕ ಮೊದಲ ಸಲ ಪ್ರಭಾಸ್ ಈ ಚಿತ್ರದ ಮೂಲಕ ಮತ್ತೆ ಪ್ರೇಕ್ಷಕರನ್ನು ಮುಖಾಮುಖಿಯಾಗಲಿದ್ದಾರೆ. ಈ ಚಿತ್ರದ ಬಗ್ಗೆ ಏರಿಕೊಂಡಿರುವ ಕುತೂಹಲವನ್ನು ಇಮ್ಮಡಿಸುವಂಥಾ ವಿಚಾರಗಳೇ ಸದ್ಯ ಚಿತ್ರತಂಡದಿಂದ ಸಾಲು ಸಾಲಾಗಿ ಹೊರ ಬೀಳುತ್ತಿವೆ! ಹಾಲಿವುಡ್ ರೇಂಜಿನಲ್ಲಿ ಸಿನಿಮಾ ತಯಾರು ಮಾಡಲಾಗಿದ್ದು ಚಿತ್ರಕ್ಕಾಗಿ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ..ಹೀಗಿರುವಾಗಲೇ ಚಿತ್ರತಂಡದಿಂದ ಸುದ್ದಿಯೊಂದು ಹೊರಬಿದ್ದಿದೆ.

 

 

ಬಾಹುಬಲಿ ಚಿತ್ರ ಬಂದು ವರ್ಷಗಳೇ ಕಳೆಯುತ್ತಾ ಬಂದರೂ ಪ್ರಭಾಸ್‌ನನ್ನು ಮತ್ತೊಂದು ಚಿತ್ರದಲ್ಲಿ ತೆರೆ ಮೇಲೆ ನೋಡದೆ ಅಭಿಮಾನಿಗಳು ಕಂಗಾಲಾಗಿದ್ದಾರೆ. ಅಂಥವರೆಲ್ಲರೂ ಆಸೆಗಣ್ಣಿನಿಂದ ಕಾಯುತ್ತಿದ್ದದ್ದು ಸಾಹೂ ಚಿತ್ರವನ್ನು. ಕಳೆದ ವರ್ಷವೇ ಆರಂಭವಾಗಿದ್ದ ಈ ಚಿತ್ರ ಈ ವರ್ಷ ತೆರೆ ಕಾಣುತ್ತದೆ ಎಂಬ ನಿರೀಕ್ಷೆ ಇತ್ತು. ಈ ಕ್ಷಣಕ್ಕೂ ಕೂಡಾ ಪ್ರಭಾಸ್ ಅಭಿಮಾನಿಗಳು ಅದನ್ನೇ ನಂಬಿ ಕಾಯುತ್ತಾ ಕೂತಿದ್ದರು. ಆದರೆ ಚಿತ್ರ ಮಾತ್ರ ಕಾರಣಾಂತರಗಳಿಂದ ಕುಂಟುತ್ತಲೇ ಸಾಗುತ್ತಿದೆ.

ಟಾಲಿವುಡ್ ಮೂಲಗಳ ಪ್ರಕಾರ ಸಾಹೋ ಚಿತ್ರ 2019ರ ಏಪ್ರಿಲ್ ತಿಂಗಳಲ್ಲಿ ತೆರೆಕಾಣಲಿದೆಯಂತೆ. ಇದನ್ನು ಸಿಹಿ ಸಮಾಚಾರ ಎನ್ನಬೇಕೋ? ಇಲ್ಲ ಕೆಟ್ಟ ಸೆಮಾಚಾರ ಎನ್ನಬೇಕೋ? ಅವರವರ ಆಲೋಚನೆಗೆ ಬಿಟ್ಟದ್ದು. ಯಾಕೆಂದರೆ ಅದೇನೇ ಆಗಲಿ ಸಾಹೋ ಸಿನಿಮಾ ಇದೇ ವರ್ಷ ತೆರೆಕಾಣುತ್ತದೆ ಎಂದು ನಿರೀಕ್ಷಿಸುತ್ತಿದ್ದ ಅಭಿಮಾನಿಗಳಿಗೆ ಒಂದು ನಿರಾಸೆಯಾಗಿದ್ದರೇ ಮತ್ತೊಂದೆಡೆ ತಡವಾದರೂ ಸರಿ ಸಿನಿಮಾ ರಿಲೀಸ್ ಡೇಟ್ ಫಿಕ್ಸ್ ಆಯ್ತಲ್ಲ ಎಂದು ಒಳಗೊಳಗೇ ಖುಷಿಪಡುತ್ತಿದ್ದಾರೆ.

ಸಾಹೋ ಚಿತ್ರದ ಬಗ್ಗೆ ಹೇಳಬೇಕೆಂದರೆ ಇದು 150 ಕೋಟಿಗೂ ಹೆಚ್ಚು ಬಜೆಟ್ ನಲ್ಲಿ ತಯಾರಾಗುತ್ತಿದ್ದು ಸುಜೀತ್ ಎನ್ನುವವರು ನಿರ್ದೇಶನ ಮಾಡುತ್ತಿದ್ದಾರೆ. UV Creations and T-Series ಸಂಸ್ಥೆಗಳು ಚಿತ್ರಕ್ಕೆ ಹಣ ಹೂಡಿಕೆ ಮಾಡಿವೆ. ಉಳಿದಂತೆ ಚಿತ್ರದಲ್ಲಿ ಪ್ರಭಾಸ್’ಗೆ ನಾಯಕಿಯಾಗಿ ಬಾಲಿವುಡ್ ಬ್ಯುಟಿ ಶ್ರದ್ದಾ ಕಪೂರ್ ನಟಿಸಿದ್ದಾಳೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top