ಮನೋರಂಜನೆ

ಬೆಟ್ಟಿಂಗ್’ಗೋಸ್ಕರ ತನ್ನ ಜೊತೆ ಪ್ರೀತಿಯ ನಾಟಕವಾಡಿ ಕೈಕೊಟ್ಟವನ ಬಗ್ಗೆ ಹೇಳಿದ ಶಿಲ್ಪಾ ಶೆಟ್ಟಿ.

ಸಿನಿಮಾ ಮಾಡಿದರೂ, ತನ್ನ ಪಾಡಿಗೆ ತಾನು ಮನೆಯಲ್ಲೇ ಇದ್ದರೂ ಬಾಲಿವುಡ್ ಪಾಲಿಗೆ ಎವರ್‌ಗ್ರೀನ್ ಫಿಟ್ನೆಸ್ ಮಾಡೆಲ್ ಅಂದರೆ ಶಿಲ್ಪಾ ಶೆಟ್ಟಿ. ಮೂಲತಃ ಮಂಗಳೂರಿನವಳಾಗಿರುವ ಕನ್ನಡತಿ ಶಿಲ್ಪಾ ಶೆಟ್ಟಿ ಅವರು ಬಾಲಿವುಡ್ ನಲ್ಲಿ ತಮ್ಮದೇ ಆದ ಛಾಪನ್ನ ಮೂಡಿಸಿದ್ದಾರೆ.. ಇಂಥಾ ಶಿಲ್ಪಾ ಅವರಿಗೆ ಹುಡುಗನೊಬ್ಬ ಪ್ರೀತಿ ಹೆಸರಲ್ಲಿ ನಾಟಕ ಮಾಡಿ ಕೈಕೊಟ್ಟಿದ್ದನಂತೆ. ಈ ಮಾತನ್ನ ನಾವು ಹೇಳ್ತಿಲ್ಲ ಬದಲಾಗಿ ಅವರೇ ಕಾರ್ಯಕ್ರಮವೊಂದಲ್ಲಿ ತಮ್ಮ ಜೊತೆ ಪ್ರೀತಿಯ ನಾಟಕವಾಡಿ ಕೈಕೊಟ್ಟ ಹುಡುಗನ ಕುರಿತು ಬಹಿರಂಗಪಡಿಸಿದ್ದಾರೆ.

ಖಾಸಗಿ ವಾಹಿನಿಯೊಂದರ ಸಂದರ್ಶನದಲ್ಲಿ ಪಾಲ್ಗೊಂಡಿದ್ದ ಶಿಲ್ಪಾ ಶೆಟ್ಟಿ “ಕೇವಲ ಬೆಟ್ಟಿಂಗ್ ಗೋಸ್ಕರ ಯುವಕನೊಬ್ಬ ನನ್ನೊಂದಿಗೆ ಸಂಬಂಧ ಬೆಳೆಸಿದ್ದ” ಎಂಬ ವಿಷಯವನ್ನು ಶಿಲ್ಪಾ ಶೆಟ್ಟಿ ಹಂಚಿಕೊಂಡಿದ್ದಾರೆ..

“ನನ್ನೊಂದಿಗೆ ಸಂಬಂಧ ಬೆಳೆಸುವಂತೆ ಹುಡುಗನೊಬ್ಬನಿಗೆ ನನ್ನ ಸ್ನೇಹಿತೆಯರು ಬೆಟ್ಟಿಂಗ್ ಮಾಡಿದ್ದರು. ಆತ ನನ್ನೊಂದಿಗೆ ಸಲುಗೆಯಿಂದ ವರ್ತಿಸಲು ಶುರು ಮಾಡಿದ. ನಂತರ ಅದು ನಿಜವಾದ ಪ್ರೀತಿಗೆ ತಿರುಗಿತ್ತು. ನಾನು ಸೀರಿಯಸ್ ಆಗಿ ಪ್ರೀತಿಸಲು ಶುರು ಮಾಡಿದ್ದೆ, ಆದರೆ ಕೊನೆಯಲ್ಲಿ ಬೆಟ್ಟಿಂಗ್ ನಲ್ಲಿ ಗೆಲ್ಲುವ ಉದ್ದೇಶದಿಂದ ಸಂಬಂಧ ಬೆಳೆಸಿದೆ” ಎಂದು ಹೇಳಿ ಆತ ಪ್ರೀತಿಗೆ ಕೊನೆಯಾಡಿದ ಎಂದರು.

“ಆತನ ಮಾತುಗಳು ಕೇಳಿ ನಾನು ಖಿನ್ನತೆಗೆ ಒಳಗಾದೆ, ಮನಸ್ಸಿಗೆ ಏನೋ ಒಂಥರಾ ಬೇಸರವಾದಂತೆ ಆಗುತ್ತಿತ್ತು” ಎಂದು ಹಳೆ ಘಟನೆಯನ್ನು ಮೆಲುಕು ಹಾಕಿದ ಶಿಲ್ಪಾ “ನನ್ನ ಬಾಳಲ್ಲಿ ರಾಜ್ ಕುಂದ್ರಾ ಬಂದರು. ಅವರನ್ನು ಮದುವೆಯಾಗಿ ನಾನು ಸಂತೋಷದಿಂದಿದ್ದೇನೆ” ಎಂದು ಹೇಳಿದರು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top