ಸಮಾಚಾರ

ಮಾಜಿ ಸಿಎಂ ಸಿದ್ದು ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದ ಹೆಂಗಳೆಯರು

ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ರವರಿಗೆ ಸೆಲ್ಫಿ ಕ್ರೇಜ್ ಹೊಸದೇನಲ್ಲ ,ಸಿದ್ಧರಾಮಯ್ಯ ಎಲ್ಹೋದ್ರು ಅವರ ಹಿಂದೆ ಹೋಗಿ ಸೆಲ್ಫಿ ತೆಗಿದುಕೊಳ್ಳುವವರ ಸಂಖ್ಯೆನು ಏನ್ ಕಮ್ಮಿ ಇಲ್ಲ ಅದ್ರಲ್ಲೂ ಹೆಣ್ಮಕ್ಳ ಸೆಲ್ಫಿಯೇ ಫಾಲೋಯಿಂಗ್ ತುಂಬಾನೇ ಇದೆ .

ಇವತ್ತು ವಸಂತನಗರದ ದೇವರಾಜು ಅರಸು ಸಭಾಂಗಣದಲ್ಲಿ ಕರ್ನಾಟಕ ಅಹಲ್ಯ ಬಾಯಿ ಹೋಳ್ಕರ್ ಮಹಿಳಾ ಸಂಘ ಹಾಗೂ ಕರ್ನಾಟಕ ಪ್ರದೇಶ ಕುರುಬರ ಸಂಘದ ವತಿಯಿಂದ ಮಹಿಳಾ ಜಾಗೃತಿ ಸಮಾವೇಶವನ್ನು ಏರ್ಪಡಿಸಿ ಆ ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರವರನ್ನು ಅತಿಥಿಯಾಗಿ ಆಗಮಿಸುತ್ತಿದ್ದರು ,ಆ ಕಾರ್ಯಕ್ರಮಕ್ಕೆ ಸಿದ್ಧು ಆಗಮಿಸುತ್ತಿದಂತೇ ಮಹಿಳೆಯರು ಸೆಲ್ಫಿಗಾಗಿ ನಾ ಮುಂದು ತಾ ಮುಂದು ಎಂದು ಮುಗಿಬಿದ್ದ ಘಟನೆ ಒಂದು ನಡೆದಿದೆ .ಸಿದ್ದರಾಮಯ್ಯ ಕೂತಿದ್ದ ಕಡೆಗೆ ಹೋಗಿ ಸರ್ ಒಂದು ಸೆಲ್ಫಿ ಪ್ಲೀಸ್ಎಂದು ನೂಕುನುಗ್ಗಲಿನಂತೆ ಅವರ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ

 

 

 

ಸಿದ್ದರಾಮಯ್ಯ ನವರು ಕಣ್ಣಿನ ನೋವಿನಿಂದ ಬಳಲುತ್ತಿದ್ದ ಕಾರಣ ಕಪ್ಪು ಕನ್ನಡಕ ಧರಿಸಿ ಕಾರ್ಯಕ್ರಮಕ್ಕೆ ಆಗಮಿಸಿದ್ದರು,ಅಷ್ಟು ಕಣ್ಣು ನೋವಿದ್ದರೂ ಫೋಟೋ ಕೇಳಿದ ತಕ್ಷಣ ಅಭಿಮಾನದಿಂದ ಸೆಲ್ಫಿ ಗೆ ಪೋಸ್ ಕೊಟ್ಟಿದ್ದಾರೆ ಸಿದ್ಧರಾಮಯ್ಯ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top