ಮನೋರಂಜನೆ

ತೆಲುಗು ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆಗೆ ನಿಂತ ಕಿರಗೂರಿನ ಗಯ್ಯಾಳಿ

ಕಿರಗೂರಿನ ಗಯ್ಯಾಳಿ ಸಿನಿಮಾದಲ್ಲಿ ಹಳ್ಳಿಯ ಗಯ್ಯಾಳಿ ಹೆಣ್ಣುಮಗಳ ರೀತಿಯಲ್ಲೇ ತನ್ನದೇ ಆದ ಅಭಿನಯದಿಂದ ಹೊಸದಾದ ಛಾಪನ್ನು ಮೂಡಿಸಿ ಸಿನಿ ರಸಿಕರ ಮನ ಗೆದ್ದು ನಂತರ ಬಿಗ್ ಬಾಸ್ ಪ್ರವೇಶ ಮಾಡಿ ಸ್ವಲ್ಪ ಮಟ್ಟಿಗೆ ಹೆಸರು ಮಡಿದ ಚೆಲುವೆ ಸುಕೃತಾ ವಾಗ್ಲೆ.ಮೇಘಾ ಅಲಿಯಾಸ್ ಮ್ಯಾಗಿ ಸಿನಿಮಾದಲ್ಲೂ ನಟಿಸಿದ್ದ ಸುಕೃತಾ ಜಟ್ಟ ಸಿನಿಮಾದಲ್ಲಿ ದಿಟ್ಟ ಅಭಿನಯ ತೋರಿ ಸಿನಿಪ್ರೇಮಿಗಳನ್ನು ದಂಗಾಗಿಸಿದ್ದ ಸುಕೃತ ವಾಗ್ಲೆ ತಮ್ಮ ಫೇಸ್ಬುಕ್ ಖಾತೆಯಲ್ಲಿ ಹಾಕಿದ್ದ ಫೋಟೋವೊಂದು ದೊಡ್ಡ ಮಟ್ಟದಲ್ಲಿ ವೈರಲ್‌ ಆಗಿ ದೊಡ್ಡ ಕಾಂಟ್ರವರ್ಸಿಯನ್ನೇ ಸೃಷ್ಟಿ ಮಾಡಿತ್ತು.

 

 

 

ಕನ್ನಡ ಸಿನಿಮಾಗಳಲ್ಲಿ ವಿಭಿನ್ನ ಕಥೆ ಹಾಗೂ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಈ ಸುಂದರಿ ಈಗ ತನ್ನ ಅದೃಷ್ಟ ಕಂಡುಕೊಳ್ಳಲು ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ ಈ ಕಾರಣಕ್ಕಾಗಿ ಒಂದು ಫೊಟೋಶೂಟ್ ಕೂಡಾ ಮಾಡಿಸಿದ್ದಾರೆ,ಇನ್ನುಹೆಸರಿಡದ ತೆಲುಗು ಸಿನಿಮಾವೊಂದರಲ್ಲಿ ಸುಕೃತಾ ನಟಿಸುತ್ತಿದ್ದಾರೆ.ಇದಕ್ಕಾಗಿ 4-5 ಸ್ಟೈಲಿಶ್ ಕಾಸ್ಟ್ಯೂಮ್​​ನಲ್ಲಿ ಡಿಫರೆಂಟ್ ಆಗಿ ಫೋಟೋಶೂಟ್​​ ಮಾಡಿಸಿದ್ದಾರೆ.

ಸದಾ ವಿಭಿನ್ನತೆಯ ಪಾತ್ರ ಮಾಡಲು ಬಯಸುವ ಈಕೆಗೆ ಹಿಂದಿಯಲ್ಲಿ ಅಮಿತಾಬ್​ ಬಚ್ಚನ್ ನಟನೆಯ ‘ಪಾ’ ಹಾಗೂ ಪ್ರಿಯಾಂಕ ಚೋಪ್ರಾ ಅಭಿನಯಿಸಿದ ‘ಬರ್ಫಿ’ ಚಿತ್ರದಂತ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕು ಎಂಬ ಆಸೆ ಹಾಗೂ ಕನಸಂತೆ.ನಮ್ಮ ಕನ್ನಡದ ಹುಡುಗಿ ತೆಲುಗಿನಲ್ಲೂ ಮಿಂಚಿ ಹೆಸರು ಮಾಡಿ ನಮ್ಮ ಕರ್ನಾಟಕದ ಹೆಸರು ಉಳಿಸಲಿ ಎಂದು ನಾವು ಆಶಿಸೋಣ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top