ಮನೋರಂಜನೆ

ಕಿರುತೆರೆ ಧಾರಾವಾಹಿಯಲ್ಲಿ ‘ರ‍್ಯಾಂಬೋ ರಾಣಿ’ ಸುಂದರಿ ಆಶಿಕಾ ರಂಗನಾಥ್.

ಶರಣ್ ನಟನೆಯ ರ‍್ಯಾಂಬೋ ೨ ಸಿನಿಮಾದಲ್ಲಿ ಪೂರ್ಣ ಪ್ರಮಾಣದ ಹೀರೋಯಿನ್ ಆಗಿ ಕಾಣಿಸಿಕೊಳ್ಳೋ ಅದೃಷ್ಟ ಖುಲಾಯಿಸಿಕೊಂಡ ಸುಂದರಿ ಆಶಿಕಾ ರಂಗನಾಥ್. ಮುಗುಳುನಗೆ ಮತ್ತು ರಾಜು ಕನ್ನಡ ಮೀಡಿಯಮ್ ಸಿನಿಮಾಗಳಲ್ಲಿ ಈಕೆ ಹೀರೋಯಿನ್ ಅನಿಸಿಕೊಂಡಿದ್ದರೂ ಜೊತೆಗೆ ಇನ್ನೂ ಇಬ್ಬಿಬ್ಬರು ಹುಡುಗಿಯರಿದ್ದಿದ್ದರಿಂದ ಸೋಲೋ ಹೀರೋಯಿನ್ ಅನಿಸಿಕೊಳ್ಳಲು ಆಗಿರಲಿಲ್ಲ ಆದರೆ ರ‍್ಯಾಂಬೋ ೨ ಸಿನಿಮಾ ಮೂಲಕ ಚಂದನವನದ ಭರವಸೆಯ ನಟಿಯಾಗಿ ಆಶಿಕಾ ಹೊರಹೊಮ್ಮಿದ್ದಾಳೆ.

 

 

ಸದ್ಯ ಅಜಯ್ ಅಭಿನಯದ ‘ತಾಯಿಗೆ ತಕ್ಕಮಗ’ ಸಿನಿಮಾದಲ್ಲೂ ನಾಯಕಿಯಾಗಿ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಮುಂದಾಗಿರುವ ಆಶಿಕಾ ರಂಗನಾಥ್ ಇದೀಗ ಇದ್ದಕ್ಕಿದ್ದಂತೆ ಕಿರುತೆರೆಯತ್ತ ಮುಖ ಮಾಡಿದ್ದಾಳಂತೆ. ಹೌದು, ಆಶಿಕಾ ಸಿನಿಮಾಗಳ ಮಧ್ಯೆ ದಾರಾವಾಹಿಯಲ್ಲೂ ನಟಿಸಿದ್ದಾಳೆ..

ಹಾಗಂತ ಆಶಿಕಾ ರಂಗನಾಥ್ ಯಾವುದೇ ಧಾರಾವಾಹಿಯಲ್ಲಿ ಪೂರ್ಣ ಪ್ರಮಾಣದಲ್ಲಿ ನಟಿಸುತ್ತಿಲ್ಲ ಬದಲಿಗೆ ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹೌದು, ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ‘ಸರ್ವಮಂಗಳ ಮಾಂಗಲ್ಯೆ’ ಎನ್ನುವ ಧಾರಾವಾಹಿಯಲ್ಲಿ ಆಶಿಕಾ ಅಥಿತಿ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.. ಈಗಾಗಲೇ ಚಿತ್ರೀಕರಣ ಕೂಡ ಮುಗಿದಿದ್ದು ದಸರ ಹಬ್ಬದ ಪ್ರಯುಕ್ತ ಈ ಸಂಚಿಕೆ ಪ್ರಸಾರ ಆಗಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top