ಸಮಾಚಾರ

ಏಕಕಾಲದಲ್ಲಿ ಪಂಚ ಭಾಷೆಗಳಲ್ಲಿ ತೆರೆಗೆ ಬರಲಿದ್ದಾನೆ ‘ಅವನೇ ಶ್ರೀಮನ್ನಾರಾಯಣ’.

ಪ್ರತೀ ಚಿತ್ರದಲ್ಲೂ ವಿಭಿನ್ನತೆ ಕಾಯ್ದುಕೊಂಡು ಯುವ ಸಮುದಾಯದ ಪ್ರಾತಿನಿಧಿಕ ಕಥೆಯೆಂಬಂಥಾ ಸಿನಿಮಾಗಳ ಮೂಲಕವೇ ಸ್ಟಾರ್ ನಟನಾಗಿ ಹೊರ ಹೊಮ್ಮಿರುವಾತ ರಕ್ಷಿತ್ ಶೆಟ್ಟಿ.. ಸಿಂಪಲ್ ಸ್ಟಾರ್ ಸದ್ಯ ಅವನೇ ಶ್ರೀಮನ್ನಾರಾಯಣ ಚಿತ್ರದಲ್ಲಿ ಬ್ಯುಸಿಯಾಗಿದ್ದು ಈ ಚಿತ್ರತಂಡದಿಂದ ಸೆನ್ಸೇಷನ್ ನ್ಯೂಸ್ ಒಂದು ಹೊರಬಿದ್ದಿದೆ.

ಅದೇನೆಂದರೆ ಚಿತ್ರವು ಏಕಕಾಲದಲ್ಲಿ ಪಂಚ ಭಾಷೆಗಳಲ್ಲಿ ತೆರೆಗೆ ಬರಲಿದೆಯಂತೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ತೆರೆ ಕಾಣಲಿದೆ. ಯಾವ ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆಯೋ ಅದೆಲಾ ಭಾಷೆಗಳ ಟ್ರೈಲರ್ ಗಳನ್ನು ಚಿತ್ರ ಬಿಡುಗಡೆಗೆ ಮುನ್ನವೇ ಬಿಡುಗಡೆ ಮಾಡಲಾಗುತ್ತದೆ.

 

 

ಈ ಹಿಂದೆ ಯಾವ ಚಿತ್ರಗಳಲ್ಲಿಯೂ ಕಾಣಿಸಿಕೊಳ್ಳದ ರೀತಿಯಲ್ಲಿ ರಕ್ಷಿತ್ ಅವನೇ ಶ್ರೀಮನ್ನಾರಾಯಣ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ರಕ್ಷಿತ್ ಶೆಟ್ಟಿಗೆ ನಾಯಕಿಯಾಗಿ ಶಾನ್ವಿ ಶ್ರೀವಾತ್ಸವ್ ಕಾಣಿಸಿಕೊಳ್ಳಲಿದ್ದಾರೆ. ಚಿತ್ರಕ್ಕೆ ನವ ನಿರ್ದೇಶಕ ಸಚಿನ್ ಆಕ್ಷನ್ ಕಟ್ ಹೇಳ್ತಿದ್ದು ಪುಷ್ಕರ್ ಸಿನಿಮಾಸ್ ಹಾಗೂ ಪರಂವಾ ಸ್ಟುಡಿಯೋಸ್ ಬ್ಯಾನರ್ ನಲ್ಲಿ ಈ ಚಿತ್ರ ಮೂಡಿ ಬರುತ್ತಿದೆ. ಉಳಿದಂತೆ ಚರಣ್ ರಾಜ್ ಸಂಗೀತ ಸಂಯೋಜಿಸುತ್ತಿದ್ದಾರೆ.

ಕಿರಿಕ್ ಪಾರ್ಟಿ’ ಚಿತ್ರದ ಬಳಿಕ ನಟ ರಕ್ಷಿತ್ ಶೆಟ್ಟಿಯ ಯಾವ ಚಿತ್ರ ಕೂಡ ಕಳೆದ ವರ್ಷ ಬಿಡುಗಡೆಯಾಗಿಲ್ಲವಾದ್ದರಿಂದ ರಕ್ಷಿತ್ ಅಭಿಮಾನಿಗಳು ಚಿತ್ರಕ್ಕಾಗಿ ಕಾದು ಕುಳಿತಿದ್ದಾರೆ. ಚಿತ್ರ ಮುಂದಿನ ವರ್ಷ ಮಾರ್ಚ್ ಅಥವಾ ಏಪ್ರಿಲ್ ಗೆ ಬಿಡುಗಡೆ ಮಾಡುವ ನಿಟ್ಟಿನಲ್ಲಿ ಚಿತ್ರತಂಡ ಕೆಲಸ ಮಾಡುತ್ತಿದೆ. ಅಂದಹಾಗೆ ಈ ಚಿತ್ರ ಉತ್ತರ ಕರ್ನಾಟಕದಲ್ಲಿ ಅಮರಾವತಿ ಎಂಬ ಕಾಲ್ಪನಿಕ ಪಟ್ಟಣದಲ್ಲಿರುವ ಭ್ರಷ್ಟ ಪೊಲೀಸ್ ಆಫೀಸರ್ ಒಬ್ಬರ ಕತೆಯಿಂದ ಪ್ರೇರಿತರಾಗಿದೆಯಂತೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top