fbpx
ಭವಿಷ್ಯ

ಈ 7 ಜನರನ್ನ ಕಾಲಿಂದ ಒದೆಯುವುದಾಗಲಿ ಅಥವಾ ಪಾದದಿಂದ ಸ್ಪರ್ಶ ಮಾಡೋದಾಗ್ಲಿ ಮಾಡಿದ್ರೆ ಅಷ್ಟ ಪಾಪಗಳು ಸುತ್ತುಕೊಳ್ಳುವುದು ಎನ್ನುತ್ತೆ ಚಾಣಕ್ಯನ ನೀತಿ

ಚಾಣಕ್ಯನ ನೀತಿ ಪ್ರಕಾರ ಈ 7 ಜನರನ್ನ ಕಾಲಿಂದ ಒದೆಯುವುದಾಗಲಿ ಅಥವಾ ಪಾದದಿಂದ ಸ್ಪರ್ಶಮಾಡೋದಾಗ್ಲಿ ಮಾಡಿದ್ರೆ ಅಷ್ಟ ಪಾಪಗಳು ಸುತ್ತ್ಕೊಳ್ತಾವಂತೆ

ಬೆಂಕಿ:ದೇವರಿಗೆ ಬೆಂಕಿಯು ಪವಿತ್ರವಾದದ್ದು ಎಂದು ಪರಿಗಣಿಸಲಾಗಿದೆ. ಆದ್ದರಿಂದ ಬೆಂಕಿಯನ್ನು ಕಾಲಿನ ಪಾದಗಳಿಂದ ಮುಟ್ಟುವುದು ಅಥವಾ ಉರಿಯುತ್ತಿರುವ ಬೆಂಕಿಗೆ ಕಾಲಿನಿಂದ ಸೌದೆಗಳನ್ನು ಒದೆಯುವುದು ಸಹ ದುರಾದೃಷ್ಟದ ಸಂಕೇತವೆಂದು   ಪರಿಗಣಿಸಲಾಗಿದೆ.

ಗುರುಗಳು  ಅಥವಾ ಶಿಕ್ಷಕರು:ನಿಮ್ಮ ಗುರುಗಳು ಅಥವಾ ಶಿಕ್ಷಕರನ್ನು ಎಂದಿಗೂ ಪಾದಗಳಿಂದ ಮುಟ್ಟಬೇಡಿ. ಇದು ಅತ್ಯಂತ ಘೋರವಾದ ಮಹಾ ಪಾಪವಾಗಿದೆ. ಗುರು ನಿಮಗೆ ಜ್ಞಾನವನ್ನು ದಯಪಾಲಿಸುವರು. ಅವರು ಯಾವಾಗಲೂ ನಿಮ್ಮನ್ನು ಸರಿಯಾದ ದಾರಿಯಲ್ಲಿ ನಿಮ್ಮ ಗುರಿ ಮುಟ್ಟಲು ಸಹಾಯ ಮಾಡುತ್ತಾರೆ. ಯಾವಾಗಲೂ ನಿಮ್ಮ ಶಿಕ್ಷಕರನ್ನು ಅಥವಾ ಗುರುಗಳನ್ನು ಗೌರವಿಸಿ.

ಬ್ರಾಹ್ಮಣರು ಮತ್ತು ಪಂಡಿತರು:ಪ್ರತಿಯೊಬ್ಬರೂ ಸಹ ಬ್ರಾಹ್ಮಣರನ್ನು ಗೌರವಿಸಬೇಕು. ಅವರು ಸ್ವಯಂ ಶಿಸ್ತು ಬದ್ಧರಾಗಿರುತ್ತಾರೆ  ಅವರಿಗೆ ನಾಲ್ಕು ವೇದಗಳ ಬಗ್ಗೆಯೂ ತಿಳಿದಿದೆ. ಬ್ರಾಹ್ಮಣರು ಪ್ರತಿದಿನ ಪೂಜೆಗಳನ್ನು ಮಾಡುತ್ತಾರೆ ಮತ್ತು ವೇದದಲ್ಲಿರುವ ಎಲ್ಲ ನಿಯಮಗಳನ್ನು ಅವರು ಪಾಲಿಸುತ್ತಾರೆ. ಅವರನ್ನು ಯಾರೂ ಕೂಡ ಪಾದಗಳಿಂದ ಸ್ಪರ್ಶಿಸಬಾರದು ಅಥವಾ ಕಾಲಿನಿಂದ ಒದೆಯಬಾರದು.

 

 

 

ಹಸು ಅಥವಾ ಕಾಮಧೇನು:ಕಾಮಧೇನು ಅಥವಾ ಗೋ ಮಾತೆಯನ್ನು ಹಿಂದೂ ಧರ್ಮದಲ್ಲಿ ಪವಿತ್ರವಾದ ಪ್ರಾಣಿ ಎಂದು ಪರಿಗಣಿಸಲಾಗಿದೆ. ಎಲ್ಲ ದೇವಾನುದೇವತೆಗಳು ಕೂಡ ಈ ಗೋ ಮಾತೆಯಲ್ಲಿ ನಡೆಸಿರುತ್ತಾರೆ. ಯಾರೂ ಕೂಡ ಹಸುವಿಗೆ ಅಗೌರವವನ್ನು ಸೂಚಿಸಬಾರದು ಅಥವಾ ಕಾಲಿನಿಂದ ಒದೆಯಬಾರದು.

ಮಗು ಅಥವಾ ಬಾಲಕ:ಮಕ್ಕಳು ಯಾವಾಗಲೂ ದೇವರು ಕೊಟ್ಟ ವರ ಎಂದು ಪರಿಗಣಿಸಲಾಗಿದೆ. ಆದ್ದರಿಂದ ಅವರನ್ನು ಪಾದಗಳಿಂದ ಮುಟ್ಟಬಾರದು.

ಕನ್ಯೆ,ಕುವರಿ ಅಥವಾ  ಕುಮಾರಿ:ಕನ್ಯೆ, ಕುವರಿ ಅಥವಾ ಕುಮಾರಿಯು ಮನೆಯನ್ನು ಕೆಟ್ಟ ಕಣ್ಣಿನ ದೃಷ್ಟಿಯಿಂದ ಮತ್ತು ದುಷ್ಟ ಶಕ್ತಿಗಳಿಂದ ರಕ್ಷಿಸುತ್ತಾಳೆ .ಅವರನ್ನು ಸದಾ ಗೌರವಿಸಿ ಮತ್ತು ಅವರನ್ನು ಎಂದಿಗೂ ಸಹ ಕಾಲಿನ ಪಾದಗಳಿಂದ ಸ್ಪರ್ಷಿಸಬೇಡಿ.

ವೃದ್ಧರು:ಚಾಣಕ್ಯರು ಹೇಳಿದ್ದಾರೆ ವೃದ್ಧರನ್ನು ಎಂದಿಗೂ ಸಹ ಪಾದಗಳಿಂದ ಒದೆಯುವುದಾಗಲಿ,  ನಿಮ್ಮ ಪಾದಗಳಿಂದ ಸ್ಪರ್ಷಿಸುವುದಾಗಲಿ ಮಾಡಬೇಡಿ. ಹೀಗೆ ಮಾಡುವುದರಿಂದ ನೀವು ಸತ್ತ ನಂತರ ನರಕಕ್ಕೆ ಹೋಗುತ್ತೀರಿ. ವೃದ್ದರಿಂದ  ಆಶೀರ್ವಾದವನ್ನು ಪಡೆಯಿರಿ. ವೃದ್ಧರು ಶಾಪ ನೀಡುವುದು, ಕೆಲವೊಂದು ಬಾರಿ ಅದು ಅವರ ಕೊನೆಯ ಆಸೆ ಎಂದು ಯಮನು ಪರಿಗಣಿಸುತ್ತಾನೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top