ಮನೋರಂಜನೆ

ರಾಜ್‌ ಕುಟುಂಬದ ಮತ್ತೊಂದು ಕುಡಿ ಚಿತ್ರರಂಗಕ್ಕೆ- ಧೀರೇನ್ ರಾಮ್ ಚಿತ್ರಕ್ಕೆ ನಿರ್ದೇಶಕ ಫೈನಲ್.

ಡಾ. ರಾಜ್‌ಕುಮಾರ್ ಕುಟುಂಬದ ಮತ್ತೊಂದು ಕುಡಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುವ ಕಾಲ ಸನ್ನಿಹಿತವಾಗಿದೆ. ರಾಜ್ ಕುಮಾರ್ ಪುತ್ರಿ ಪೂರ್ಣಿಮಾ ಅವರ ಮಗ ಧೀರೇನ್ ರಾಮ್ ನಟನಾಗಲು ಸಾಕಷ್ಟು ವರ್ಷಗಳಿಂದ ಎಲ್ಲಾ ತಯಾರಿಗಳನ್ನು ಮುಗಿಸಿಕೊಂಡು ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಅವರ ಮೊದಲ ಚಿತ್ರದ ಬಗ್ಗೆ ಸಂಪೂರ್ಣ ಮಾಹಿತಿ ಜಾಹೀರಾಗಲಿದೆ.

ಕಳೆದ ವರ್ಷವೇ ಧೀರೇನ್ ಚಿತ್ರರಂಗಕ್ಕೆ ಎಂಟ್ರಿಕೊಡುತ್ತಾರೆ ಎಂಬ ಸುದ್ದಿಗಳು ಕೇಳಿಬಂದಿದ್ದವು ಆದರೆ ಇಲ್ಲಿಯವರೆಗೂ ಯಾವ ಚಿತ್ರವೂ ಸೆಟ್ಟೇರಿರಲಿಲ್ಲ ಆದರೀಗ ಅವರ ಚೊಚ್ಚಲ ಚಿತ್ರಕ್ಕೆ ಕಥೆ ಫೈನಲ್ ಆಗಿದ್ದು ಸಿನಿಮಾ ಅನೌನ್ಸ್ ಮೆಂಟ್ ಗಾಗಿ ಕಾಯುತ್ತಿರುವುದಾಗಿ ಧೀರೇನ್ ತಿಳಿಸಿದ್ದಾರೆ. ಅಂತಿಮವಾಗಿ ಅನಿಲ್ ಕುಮಾರ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಚಿತ್ರದಲ್ಲಿ ನಟಿಸಲು ಅವಕಾಶ ಗಿಟ್ಟಿಸಿದ್ದಾರೆ.

 

 

ರ್ಯಾಂಬೋ 2, ಯಶ್ ಅಭಿನಯದ ಮೈ ನೇಮ್ ಈಸ್ ಕಿರಾತಕ ಚಿತ್ರಗಳ ನಿರ್ದೇಶಕರಾದ ಅನಿಲ್ ಧೀರೆನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಾರೆ. ಸೂರಿ ಹಾಗೂ ಜಯಣ್ಣ ಈ ಚಿತ್ರಕ್ಕೆ ಬಂಡವಾಳ ತೊಡಗಿಸಲಿದ್ದಾರೆ . ಯಶ್ ಅಭಿಮಾನಯದ ಮೈ ನೇಮ್ ಇಸ್ ಕಿರಾತಕ ಸಿನಿಮಾದ ಕೆಲಸಗಳು ಮುಗಿದ ಕೂಡಲೇ ಧೀರನ್ ರಾಮ್ ಚಿತ್ರ ಸೆಟ್ಟೇರಲಿದೆ.

ಕಾಲೇಜು ವಿದ್ಯಾರ್ಥಿಯಂತ ರೊಟಿನ್ ಪಾತ್ರಗಳಲ್ಲಿ ನಟಿಸಲು ಆಸಕ್ತಿಯನ್ನು ಸ್ವಲ್ಪ ಕಡಿಮೆಹೊಂದಿರುವ ಧೀರೇನ್ ಚಾಲೆಂಜಿಂಗ್ ಪಾತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿಯಾಗಬೇಕು ಎಂಬ ಆಸೆಯನ್ನು ಹೊಂದಿದ್ದಾರೆ. ಅದಕ್ಕಾಗಿ ಸಾಕಷ್ಟು ತಯಾರಿಗಳನ್ನು ಧೀರೇನ್ ಮಾಡಿಕೊಂಡಿದ್ದಾರೆ ಅಪ್ಪ ರಾಮ್ ಕುಮಾರ್, ಮಾವಂದಿರಾದ ಶಿವಣ್ಣ, ರಾಘಣ್ಣ ಮತ್ತು ಪುನೀತ್ ರಾಜಕುಮಾರ್ ಬಳಿ ಕೆಲವೊಂದು ಟಿಪ್ಸ್ ಪಡೆದುಕೊಳ್ಳುತ್ತಿದ್ದಾರಂತೆ. ಈಗಾಗಲೇ ಕೇಳಿರುವ ಮೂರ್ನಾಲ್ಕು ಕಥೆಗಳಲ್ಲಿ ಒಂದು ಕಥೆ ಅವರಿಗೆ ತುಂಬಾ ಇಷ್ಟವಾಗಿದೆಯಂತೆ ಅದನ್ನೇ ಸಿನಿಮಾ ಮಾಡಲು ಇಚ್ಛಿಸಿದ್ದಾರೆ ರಾಜ್ ಮೊಮ್ಮಗ ಧೀರೇನ್.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top