ಮನೋರಂಜನೆ

ನನಗೆ ಬಾಸ್ ಅಂದ್ರೆ ಒಬ್ಬರೇ, ‘ದರ್ಶನ್ ಅವರಿಗೆ ನನ್ನನ್ನು ಹೋಲಿಸಬೇಡಿ’- ಧ್ರುವ ಸರ್ಜಾ.

ಮಾಡಿದ್ದು ಮೂರೇ ಚಿತ್ರಗಳಾಗಿದ್ದರೂ ಮೂರಕ್ಕೆ ಮೂರನ್ನು ಸೂಪರ್ ಹಿಟ್ ಚಿತ್ರಗಳನಾಗಿಸಿ ಚಂದನವನದ ಯುವ ಸ್ಟಾರ್ ನಟನಾಗಿ ಬೆಳೆದಿರುವಾತ ಆಕ್ಷನ್ ಪ್ರಿನ್ಸ್ ದೃವ ಸರ್ಜಾ. ಅದ್ದೂರಿ, ಬಹುದ್ದೂರ್, ಭರ್ಜರಿಗಳಂತಹ ಬ್ಲಾಕ್ ಬಸ್ಟರ್ ಚಿತ್ರಗಳನ್ನು ನೀಡಿರೋ ದೃವ ಸರ್ಜಾ ಸದ್ಯ ನಂದಕಿಶೋರ್ ನಿರ್ದೇಶಿಸುತ್ತಿರುವ ‘ಪೊಗರು’ ಚಿತ್ರದ ಶೂಟಿಂಗಿನಲ್ಲಿ ಬ್ಯುಸಿಯಾಗಿದ್ದು ಅತಿ ಕಡಿಮೆ ಅವಧಿಯಲ್ಲಿಯೇ ಟಾಪ್ ಸ್ಟಾರ್’ಗಳ ಪಟ್ಟಿಯಲ್ಲಿ ಸೇರಿಕೊಂಡಿದ್ದಾರೆ.,

 

 

ಇಂಥಾ ದ್ರುವ ಸರ್ಜಾ ಅವರು ತಮಗೆ ‘ಬಾಸ್’ ಪಟ್ಟದ ಮೇಲೆ ನಂಬಿಕೆ ಇಲ್ಲ, ಅದು ಇಷ್ಟವೂ ಇಲ್ಲ ಎಂದು ಹೇಳಿದ್ದಾರೆ. ಹೌದು, ಇತ್ತೀಚೆಗೆ ತಮ್ಮ ಹುಟ್ಟಹಬ್ಬ ಆಚರಿಸಿಕೊಂಡ ಧ್ರುವ ಸರ್ಜಾಗೆ, ಅಭಿಮಾನಿಗಳು ಕೇಕ್ ತಂದಿದ್ದರು. ಕೆಲವು ಅಭಿಮಾನಿಗಳು ಕೇಕ್ ಮೇಲೆ ಹ್ಯಾಪಿ ‘ಬರ್ತ್ ಡೇ ಡಿ-ಬಾಸ್’ ಎಂದು ಬರೆದಿದ್ದರು..
ಹಿಂದಿನಿಂದಲೂ ದರ್ಶನ್ ಅಭಿಮಾನಿಗಳು ತಮ್ಮ ಪ್ರೀತಿಯ ನಟನಿಗೆ ‘ಡಿ ಬಾಸ್’ ಎಂತಲೇ ಕರೆಯುತ್ತಿದ್ದರು ಈಗ ದ್ರುವ ಅಭಿಮಾನಿಗಳು ಕೂಡ ಧ್ರುವ ಅವರನ್ನ ‘ಡಿ ಬಾಸ್’ ಎಂದೇ ಕರೆಯಲು ಪ್ರಾರಂಭಿಸಿದ್ದಾರೆ. ಈ ಬಗ್ಗೆ ಸ್ವತಃ ಧ್ರುವ ಸರ್ಜಾ ಪ್ರತಿಕ್ರಿಯೆ ಕೊಟ್ಟಿದ್ದಾರೆ.

”ನನ್ನ ಪಾಲಿಗೆ ಬಾಸ್ ಅಂತ ಇರೋದು ಒಬ್ಬರೇ ಅದು ಆಂಜನೇಯ ಸ್ವಾಮಿ.. ‘ಬಾಸ್’ ಪಟ್ಟದ ಮೇಲೆ ನಂಬಿಕೆ ಇಲ್ಲ, ಅದು ಇಷ್ಟವೂ ಇಲ್ಲ, ಇನ್ನು ದರ್ಶನ್ ಸರ್ ಓರ್ವ ಹಿರಿಯ ಕಲಾವಿದರು. ಅವರ ಜೊತೆ ಹೋಲಿಕೆ ಸರಿಯಲ್ಲ. ಅವರ ಅಭಿಮಾನಿಗಳಲ್ಲಿ ನಾನೂ ಒಬ್ಬ” ಎಂದು ಹೇಳುವ ಮೂಲಕ ದ್ರುವ ಸರ್ಜಾ ಅಭಿಮಾನಿಗಳ ಮನಗೆದ್ದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top