ಸಮಾಚಾರ

ಮುಂದಿನ ವರ್ಷವೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಧ್ರುವ ಸರ್ಜಾ.

ಮಾಡಿದ್ದು ಮೂರೇ ಚಿತ್ರಗಳಾಗಿದ್ದರೂ ಮೂರಕ್ಕೆ ಮೂರನ್ನು ಸೂಪರ್ ಹಿಟ್ ಚಿತ್ರಗಳನಾಗಿಸಿ ಚಂದನವನದ ಯುವ ಸ್ಟಾರ್ ನಟನಾಗಿ ಬೆಳೆದಿರುವಾತ ಆಕ್ಷನ್ ಪ್ರಿನ್ಸ್ ದೃವ ಸರ್ಜಾ. ಅದ್ದೂರಿ, ಬಹುದ್ದೂರ್, ಭರ್ಜರಿಗಳಂತಹ ಬ್ಲಾಕ್ ಬಸ್ಟರ್ ಚಿತ್ರಗಳನ್ನು ನೀಡಿರೋ ದೃವ ಸರ್ಜಾ ಸದ್ಯ ನಂದಕಿಶೋರ್ ನಿರ್ದೇಶಿಸುತ್ತಿರುವ ‘ಪೊಗರು’ ಚಿತ್ರದ ಶೂಟಿಂಗಿನಲ್ಲಿ ಬ್ಯುಸಿಯಾಗಿದ್ದಾರೆ..

 

 

ಮೊನ್ನೆ ತಾನೇ ಮೂವತ್ತನೇ ವರ್ಷಕ್ಕೆ ಕಾಲಿಟ್ಟ ದ್ರುವ ಸರ್ಜಾ ತಮ್ಮ ಹುಟ್ಟುಹಬ್ಬದ ದಿನದಂದೇ ವಿಶೇಷ ಸುದ್ದಿಯನ್ನೂ ಬಹಿರಂಗಪಡಿಸಿದ್ದಾರೆ. ಅದೇನೆಂದರೆ ದೃವಾ ಸರ್ಜಾ ಅವರು ಮುಂದಿನ ವರ್ಷದಲ್ಲಿ ತಮ್ಮ ಬ್ಯಾಚುಲರ್‌ ಲೈಫಿಂದ ಗೃಹಸ್ಥ ಸ್ಥಾನಕ್ಕೆ ಬಡ್ತಿ ಪಡೆಯುವುದಾಗಿ ಹೇಳಿಕೊಂಡಿದ್ದಾರೆ.. ಇನ್ನೊಂದು ವರ್ಷದೊಷ್ಟೊತ್ತಿಗೆಲ್ಲಾ ಮದುವೆಯಾಗಲು ನಿರ್ಧರಿಸಿರುವ ದ್ರುವ ಲವ್​​ ಮ್ಯಾರೇಜೇ ಆಗ್ತಾರಂತೆ ಹಾಗಂತ ಸ್ವತಃ ಅವರೇ ಹೇಳಿಕೊಂಡಿದ್ದಾರೆ.

ಈ ಹಿಂದೆ ಅಣ್ಣನ ಮದುವೆಯ ನಂತರ ತಾನು ಆಗುವುದಾಗಿ ಹೇಳಿದ್ದರು. ಇದೀಗ ಮದುವೆಯನ್ನು ಮುಂದಿನ ವರ್ಷವೇ ಆಗುವುದಾಗಿ ಸುಳಿವು ನೀಡಿದ್ದಾರೆ. ತನ್ನ ಮದುವೆ ಬಗ್ಗೆ ಸುಳಿವು ನೀಡಿರುವ ಧ್ರುವ ಮಾತ್ರ ತಾನು ಮೆಚ್ಚಿರುವ ಹುಡುಗಿ ಯಾರು? ಸಿನಿಮಾ ಹೀರೋಯಿನ್ನಾ, ಧ್ರುವ ಸರ್ಜಾ ಅಭಿಮಾನಿನಾ, ಅಥವಾ ಬಾಲ್ಯದ ಗೆಳತಿಯ ಎಂಬುವುದಾಗಿ ಇದುವರೆಗೆ ಎಲ್ಲಿಯೂ ಸುಳಿವು ನೀಡಿಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top