ದೇವರು

ವಿಗ್ನವಿನಾಶಕ ಗಣಪನ 32 ಅವತಾರಗಳು ಯಾವುವು ಹಾಗೂ ಗಣೇಶನನ್ನು ಪೂಜೆ ಮಾಡಿ ನೀರಿಗೆ ಯಾಕೆ ಬಿಡುತ್ತಾರೆ ಗೊತ್ತಾ,ಇದರ ಹಿಂದೆ ಇದೆ ಒಂದು ಕುತೂಹಲಕಾರಿ ಕಾರಣ

ಗಣಪತಿಯನ್ನು 32 ಹೆಸರುಗಳು ಮತ್ತು ಗಣಪತಿಯನ್ನು ಪೂಜೆ ಮಾಡಿ ನೀರಿಗೆ ಯಾಕೆ ಬಿಡುತ್ತಾರೆ.ಗಣಪತಿಯ 32 ಅವತಾರಗಳು ಯಾವುವು ? ಎಂದು ತಿಳಿದುಕೊಳ್ಳೋಣ ಬನ್ನಿ
ಬಾಲ ಗಣಪತಿ, ತೋರಣ ಗಣಪತಿ, ಭಕ್ತಿ ಗಣಪತಿ, ಧೀರ ಗಣಪತಿ, ಶಕ್ತಿ ಗಣಪತಿ, ದ್ವಿಜ ಗಣಪತಿ, ಸಿದ್ದಿ ಗಣಪತಿ, ಉಚ್ಚಿಷ್ಟ ಗಣಪತಿ, ವಿಘ್ನ ಗಣಪತಿ, ಹೇರಂಬ ಗಣಪತಿ, ಲಕ್ಷ್ಮಿ ವಲ್ಲಭ ಗಣಪತಿ, ಊರ್ದ್ವ ಗಣಪತಿ,ಏಕಾಕ್ಷರ ಗಣಪತಿ, ಪ್ರಸನ್ನ ಗಣಪತಿ, ಹರಿದ್ರಾ ಗಣಪತಿ, ತ್ರಯಾಕ್ಷರ ಗಣಪತಿ, ಏಕದಂತ ಗಣಪತಿ ,ಸೃಷ್ಟಿ ಗಣಪತಿ, ದ್ವಿಮುಖ ಗಣಪತಿ, ತ್ರಿಮುಖ ಗಣಪತಿ, ಯೋಗ ಗಣಪತಿ, ದುರ್ಗಾ ಗಣಪತಿ, ಮುಕುಟ ಹರ ಗಣಪತಿ, ವರಸಿದ್ಧಿ ಗಣಪತಿ, ಗಗ್ಗಾರ ಗಣಪತಿ, ತ್ರಯಾಕ್ಷರ ಗಣಪತಿ, ಪಂಚಮುಖಿ ಗಣಪತಿ, ಋಣ ವಿಮೋಚನ ಗಣಪತಿ, ವಿಘ್ನಹರ ಗಣಪತಿ, ವಿದ್ಯಾ ಗಣಪತಿ,ಜಲ ಗಣಪತಿ.

 

 

 

ಗಣಪತಿಯ ಅಷ್ಟೋತ್ತರ 108, ಗಣಪತಿಯ ಸಹಸ್ರನಾಮ 1000,ತಿಥಿಗಳಲ್ಲಿ ನಾಲ್ಕನೆಯ ಪಾದವಾದ ಚೌತಿ ಎಂದರೆ ಗಣಪತಿಗೆ ಬಲುಪ್ರಿಯ. ಏಕೆಂದರೆ ಸೃಷ್ಟಿಯ ಆರಂಭದಲ್ಲಿ ಬ್ರಹ್ಮದೇವನಿಗೆ ಎದುರಾದ ವಿಘ್ನಗಳನ್ನು ನಿವಾರಿಸಲು ಪ್ರಣವ ಸ್ವರೂಪನಾಗಿ ವಕ್ರತುಂಡನ ಆಕೃತಿಯಲ್ಲಿ, ಪ್ರತ್ಯಕ್ಷನಾಗಿ ಇದೇ ದಿನವೆಂದು ಆದ್ದರಿಂದ ಚೌತಿ ತಿಥಿ ಎಂದರೆ ಗಣಪತಿ ಬಲು ಪ್ರೀತಿ.ಶನಿ ದೋಷಕ್ಕೆ ಪರಿಹಾರ ಗಣಪತಿ ಪೂಜೆ.ಶನೈಶ್ಚರ ದೇವನು ತ್ರಿಮೂರ್ತಿಗಳನ್ನು ಬಿಡದೆ ಎಲ್ಲಾ ದೇವಾನು ದೇವತೆಗಳನ್ನು ಕಾಡಿರುವವನು, ಆದರೆ ಗಣಪತಿ ಮತ್ತು ಆಂಜನೇಯನನ್ನು ಮಾತ್ರ ಹಿಡಿಯಲು ಆಗಲಿಲ್ಲವಂತೆ. ಆದ್ದರಿಂದ ಸಾಡೆಸಾತ್ ಶನಿ, ಶನಿ ದೋಷ, ಪಂಚಮ ಶನಿ ತೊಂದರೆ ಇರುವವರು ಗಣಪತಿಯನ್ನು ಹೆಚ್ಚು ಆರಾಧಿಸಿದರೆ ಉತ್ತಮ. ಆಗ ಮನಸ್ಸಿಗೆ ನೆಮ್ಮದಿ, ಶಾಂತಿ ಸಿಗುತ್ತದೆ.

ಗಣಪತಿಯನ್ನು ಪೂಜೆ ಮಾಡಿ ನಂತರ ನೀರಿಗೆ ಯಾಕೆ ಬಿಡುತ್ತಾರೆ:ಆನೆಗೆ ನೀರು ಎಂದರೆ ಬಹಳ ಪ್ರಿಯ, ಹಾಗೆ ಗಣಪತಿಗೂ ನೀರು ಎಂದರೆ ಬಲು ಇಷ್ಟ. ವಿಷ್ಣು ಅಲಂಕಾರ ಪ್ರಿಯ, ಶಿವ ಭಕ್ತಿ ಪ್ರಿಯ, ಹಾಗೆ ಗಣಪತಿ ತರ್ಪಣ ಪ್ರಿಯ , ಈ ಕಾರಣಕ್ಕಾಗಿಯೇ ಗಣಪತಿಯನ್ನು ನೀರಿನಲ್ಲಿ ಬಿಡುತ್ತಾರೆ. ಆ ಸಮಯದಲ್ಲಿ ಭಕ್ತರು ಚಿಕ್ಕ ಚಿಕ್ಕ ಮಕ್ಕಳು “ಚಿಕ್ಕ ಕೆರೆಯಲ್ಲಿ ಬಿದ್ದ, ದೊಡ್ಡ ಕೆರೆಯಲ್ಲಿ ಎದ್ದ” ಎನ್ನುತ್ತಾ ಸಂತೋಷ ಪಡುತ್ತಾರೆ.ಇದರ ಒಳ ಅರ್ಥ ದೊಡ್ಡ ಕೆರೆ ಎಂದರೆ ಸಪ್ತಸಮುದ್ರಗಳ ವೈಶಾಲ್ಯದಂತೆ ಇರುವ ಮಾನವನ ಹೃದಯ ಅಂದರೆ ಮತ್ತೆ ಹೇಳಲಿ ಎದ್ದು ರಾಷ್ಟ್ರಕ್ಕೆ ಸಮಾಜಕ್ಕೆ ರಕ್ಷಣೆ ನೀಡಲಿ. ಹಾಗೂ ತೊಂದರೆಗಳನ್ನು ಪರಿಹರಿಸಿ ಶುಭವನ್ನು ನೀಡಲಿ ಎಂದರ್ಥ.

ಗಣಪತಿ ಪದದ ಒಳಆರ್ಥ:ಗಣಪತಿ ಪದದ ಒಳ ಅರ್ಥ ‘ಗ’ ಎಂದರೆ ಬುದ್ಧಿ, ‘ನ’ ಎಂದರೆ ಜ್ಞಾನ, ‘ಪತಿ’ ಎಂದರೆ ಹಿಡಿತ ಸಾಧಿಸುವನು. ಅಂದರೆ ಯಾರು ಬುದ್ದಿ ಮತ್ತು ಜ್ಞಾನದ ಮೇಲೆ ಹಿಡಿತ ಸಾಧಿಸುತ್ತಾನೆ ಅವನೇ ಗಣಪತಿ.ಜಲತತ್ವ ರಾಶಿಯಾದ ಕಟಕ, ವೃಶ್ಚಿಕ ಮತ್ತು ಮೀನ ರಾಶಿಯವರು ಹೆಚ್ಚು ಗಣಪತಿಯನ್ನು ಪೂಜಿಸುತ್ತಾರೆ. ಗಣಪತಿಯದ್ದು ಕನ್ಯಾ ರಾಶಿ, ಈ ರಾಶಿಯವರು ಸಹ ಹೆಚ್ಚಾಗಿ ಗಣಪತಿಯನ್ನು ಪೂಜಿಸುತ್ತಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top