ಉಪಯುಕ್ತ ಮಾಹಿತಿ

ಪ್ರತಿ ತಿಂಗಳು ಬರೋ ಗ್ಯಾಸ್ ಸಿಲಿಂಡರ್ ನ ಉಪಯೋಗ ಮಾಡೋ ಮುಂಚೆ ಇದನ್ನ ಚೆಕ್ ಮಾಡ್ಕೊಳ್ಳಿ ,ಇಲ್ಲ ಅಂದ್ರೆ ಗ್ಯಾಸ್ ಸೋರಿಕೆಯಾಗಿ ಬ್ಲಾಸ್ಟ್ ಆಗಿ ಅನಾಹುತ ಆಗೋದು ಖಂಡಿತಾ

ತಿಂಗಳ ತಿಂಗಳ ಬರೋ ಗ್ಯಾಸ್ ಸಿಲಿಂಡರ್ ಉಪಯೋಗಿಸೋಕೆ ಮುಂಚೆ ಇದನ್ನ ಚೆಕ್ ಮಾಡ್ಕೊಳ್ಲಿಲ್ಲ ಅಂದ್ರೆ ಗ್ಯಾಸ್ ಸೋರಿಕೆಯಾಗಿ ಬ್ಲಾಸ್ಟ್ ಆಗುತ್ತೆ ಹುಷಾರು 
ಅಡುಗೆ ತಯಾರಿಸಲು ಒಂದು ಕಾಲದಲ್ಲಿ ಕಟ್ಟಿಗೆ ಒಲೆಗಳನ್ನು ಉಪಯೋಗಿಸುತ್ತಿದ್ದರು…. ಈಗ ಕಾಲ ಬದಲಾಗಿದೆ. ಕುಗ್ರಾಮಗಳಲ್ಲೂ ಸಹ ಬಹಳ ಸುಲಭವಾಗಿ ಅಡುಗೆ ಅನಿಲ ಸಿಲಿಂಡರ್ ಗಳನ್ನು ಉಪಯೋಗಿಸಿ ಅಡುಗೆ ಮಾಡುವುದನ್ನು ನಮ್ಮ ಗ್ರಾಮೀಣ ಪ್ರಜೆಗಳು ಕಲಿತುಕೊಂಡಿದ್ದಾರೆ.ಲಿಕ್ವಿಫೈಡ್ ಪೆಟ್ರೋಲಿಯಂ ಗ್ಯಾಸ್ (LPG) ಸಿಲಿಂಡರ್ ನಮ್ಮ ಅಡುಗೆಮನೆಯಲ್ಲಿ ಮುಖ್ಯವಾಗಿ ಬಳಸುವ ವಸ್ತುವಾಗಿದೆ . ಮಾರುಕಟ್ಟೆಯಲ್ಲಿ ಸುಲಭವಾಗಿ ಲಭ್ಯವಾಗುವ ಕಾರಣ ಪ್ರತಿಯೊಂದು ಮನೆಯೂ ಅದರ ಮೇಲೆ ಅವಲಂಬಿತವಾಗಿದೆ, ಮರುಬಳಕೆ ಮಾಡುವ ಮೂಲಕ ಎಲ್ಪಿಜಿ ಸಿಲಿಂಡರ್ ಅನ್ನು ಮತ್ತಷ್ಟು ಬಳಸಬಹುದು ಆದರೆ ನಮ್ಮ ಮನೆಗಳಲ್ಲಿ ನಾವು ಬಳಸುತ್ತಿರುವ ಎಲ್ಪಿಜಿಗೂ ಒಂದು ಎಕ್ಸ್ಪೈರಿ ದಿನಾಂಕ ವಿರುತ್ತದೆ ಆದರೆ ತುಂಬಾ ಜನರಿಗೆ ಇದು ಗೊತ್ತಿಲ್ಲ ,ತಿಳಿದುಕೊಳ್ಳಲು ಇದನ್ನು ಓದಿ.

ಎಲ್ಪಿಜಿ ಸಿಲಿಂಡರ್ ಅನ್ನು ಅದರ ಅವಧಿ ಮುಗಿದ ನಂತರ ಉಪಯೋಗಿಸುವುದರಿಂದ ಗ್ಯಾಸ್ ಸೋರಿಕೆಯಾಗಿ ಸ್ಫೋಟಕ್ಕೆ ಕಾರಣವಾಗುತ್ತದೆ. ಸಿಲಿಂಡರ್ ಅವಧಿ ಮುಗಿದ ನಂತರ, ಅದನ್ನು ಬಳಸುವುದನ್ನು ನಿಲ್ಲಿಸಬೇಕು. ಆದರೆ ಹೆಚ್ಚಿನ ಜನರಿಗೆ ಎಕ್ಸ್ಪೈರಿ ದಿನಾಂಕವನ್ನು ಪರಿಶೀಲಿಸುವುದು ಹೇಗೆ ಎಂದು ತಿಳಿದಿಲ್ಲ. ಎಕ್ಸ್ಪೈರಿ ದಿನಾಂಕವನ್ನು ಪರಿಶೀಲಿಸುವ ಹಂತಗಳು ತುಂಬಾ ಸರಳ.

 

ಎಲ್ಪಿಜಿ ಸಿಲಿಂಡರ್- ಎಕ್ಸ್ಪೈರಿ ದಿನಾಂಕವನ್ನು ಪರಿಶೀಲಿಸುವುದು ಹೇಗೆ?
ಎಲ್ಪಿಜಿ ಸಿಲಿಂಡರ್ನ ಎಕ್ಸ್ಪೈರಿ ದಿನಾಂಕವನ್ನು ಗ್ಯಾಸ್ ಸಿಲಿಂಡರ್ನ ಲೋಹದ ಪಟ್ಟಿಯ ಮೇಲ್ಬಾಗದಲ್ಲಿ (ಹ್ಯಾಂಡಲ್ )ಗಳ ಅಡಿಯಲ್ಲಿ ಉಲ್ಲೇಖಿಸಲಾಗಿರುತ್ತದೆ. “A” ಯಿಂದ “D” ವರ್ಣಮಾಲೆಯ ಯಾವುದೇ ಸಂಖ್ಯೆಯ ಜೊತೆಗೆ ಚಿತ್ರಿಸಿದ ಯಾವುದೇ ವರ್ಣಮಾಲೆಗಳನ್ನು ಹೊಂದಿರುತ್ತದೆ. ಈ ವರ್ಣಮಾಲೆಯು ಎಕ್ಸ್ಪೈರಿ ತಿಂಗಳನ್ನು ಪ್ರತಿನಿಧಿಸುತ್ತದೆ ಹಾಗು ಸಂಖ್ಯೆಯು ಎಕ್ಸ್ಪೈರಿ ವರ್ಷವನ್ನು ಸೂಚಿಸುತ್ತದೆ. ಒಂದು ವರ್ಷವನ್ನು ನಾಲ್ಕು ತ್ರೈಮಾಸಿಕಗಳಾಗಿ ವಿಂಗಡಿಸಲಾಗಿದೆ –ಎ – ಜನವರಿ ಯಿಂದ ಮಾರ್ಚ್,ಬಿ – ಏಪ್ರಿಲ್ ನಿಂದ ಜೂನ್ ,ಸಿ – ಜುಲೈ ನಿಂದ ಸೆಪ್ಟೆಂಬರ್ ,ಡಿ – ಅಕ್ಟೋಬರ್ ನಿಂದ ಡಿಸೆಂಬರ್

 

 

 

ಉದಾಹರಣೆಗೆ:ನಿಮ್ಮ ಗ್ಯಾಸ್ ಸಿಲಿಂಡರ್ನ ಲೋಹದ ಪಟ್ಟಿಯ ಮೇಲ್ಬಾಗದಲ್ಲಿ (ಹ್ಯಾಂಡಲ್ )ಗಳ ಅಡಿಯಲ್ಲಿ ‘A 18’ ಎಂದು ಉಲ್ಲೇಖಿಸಲಾಗಿದ್ದರೆ . ವರ್ಣಮಾಲೆಯು “A” ಮಾರ್ಚ್ ತಿಂಗಳನ್ನು ಪ್ರತಿನಿಧಿಸುತ್ತದೆ, ಮತ್ತು “18” 2018 ವರ್ಷವನ್ನು ಸೂಚಿಸುತ್ತದೆ. ಆದ್ದರಿಂದ A 18 ಅನ್ನು ಹೊಂದಿರುವ ಸಿಲಿಂಡರ್ ಮಾರ್ಚ್ 2018 ರಂದು ಎಕ್ಸ್ಪೈರಿಗೊಳ್ಳಲಿದೆ ಎಂದರ್ಥ ಅಲ್ಲಿಯ ವರೆಗೂ ಆ ಸಿಲಿಂಡರನ್ನು ಯಾವುದೇ ಹೆದರಿಕೆಯಿಲ್ಲದೆ ಉಪಯೋಗಿಸಬಹುದು. ಆ ದಿನಾಂಕ ಮುಗಿದನಂತರ ಅದನ್ನು ಉಪಯೋಗಿಸಬಾರದು.

ಒಂದು ವೇಳೆ ಹಾಗೆ ಮಾಡಿದರೆ, ಅಧಿಕ ಪ್ರಮಾಣದಲ್ಲಿರುವ ಒತ್ತಡದಿಂದ ಆ ಸಿಲಿಂಡರ್ ಒಡೆದುಹೋಗುವ ಅವಕಾಶವಿರುತ್ತದೆ. ಆದುದರಿಂದ ಇನ್ನು ಮುಂದೆ ನೀವು ಗ್ಯಾಸ್ ಸಿಲಿಂಡರನ್ನು ಕೊಂಡುಕೊಳ್ಳುವಾಗ ಅದರ ದಿನಾಂಕವನ್ನೊಮ್ಮೆ ಗಮನಿಸುವುದನ್ನು ಮರೆಯಬೇಡಿ.ವಿತರಕರು ಅವಧಿ ಮುಗಿಯುವ ದಿನಾಂಕವನ್ನು ಮೀರಿ ಗ್ಯಾಸ್ ಸಿಲಿಂಡರ್ ಗಳನ್ನು ವಿತರಿಸುತ್ತಾರೆ ಆದ್ದರಿಂದ ನೀವು ಸಿಲಿಂಡರ್ ಅನ್ನು ಮುಂದಿನ ಬಾರಿಗೆ ಸ್ವೀಕರಿಸುವಾಗ ಎಕ್ಸ್ಪೈರಿ ದಿನಾಂಕವನ್ನು ಪರಿಶೀಲಿಸಿ

ಇದನ್ನ ಆದಷ್ಟು ನಿಮ್ಮ ಫ್ರೆಂಡ್ಸ್ ಜೊತೆ ಹಂಚಿಕೊಳ್ಳಿ ಮತ್ತು ಸುರಕ್ಷಿತವಾಗಿರಿ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top