ಮನೋರಂಜನೆ

ಬಾಲಿವುಡ್ ಕ್ವೀನ್‍ಗೆ ದೈಹಿಕ ಕಿರುಕುಳ ಕೊಟ್ಟಿದ್ದನೇ ಸ್ಟಾರ್ ಡೈರೆಕ್ಟರ್?

ಸಿನಿಮಾಗಳಲ್ಲಿ ನಟಿಸಲು ಅವಕಾಶ ಕೊಟ್ಟು ನಟಿಯರನ್ನು ಮಂಚಕ್ಕೆ ಕರೆಯುವ ಕಾಯಿಲೆ ಎಲ್ಲ ಚಿತ್ರರಂಗಗಳಿಗೂ ಸಾಂಕ್ರಾಮಿಕವಾಗಿ ಹರಡಿಕೊಂಡಂತಿದೆ. ತಮಿಳು ಚಿತ್ರರಂಗದಲ್ಲಿ ಇಂಥಾದ್ದರ ವಿರುದ್ಧ ಹೋರಾಡಲಾರದೆ ಅನೇಕ ನಟಿಯರು ಸವನ್ನು ಅಪ್ಪಿಕೊಂಡಿದ್ದಾರೆ. ಕೆಲವರು ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದಾರೆ. ಇತ್ತೀಚೆಗೆ ಬಾಲಿವುಡ್ ಸೇರಿದಂತೆ ಬೇರೆ ಬೇರೆ ಭಾಷಿಗಳಲ್ಲಿ ನಟಿಸುತ್ತಿರೋ ಪ್ರಸಿದ್ಧ ಯುವ ನಟಿಯರನೇಕರು ತಾವು ಅನುಭವಿಸಿದ್ದ ಕಾಸ್ಟಿಂಗ್ ಕೌಚ್ ಮನೋ ವ್ಯಾಕುಲವನ್ನು ಸಾಂದರ್ಭಿಕವಾಗಿ ಬಿಚ್ಚಿಟ್ಟಿದ್ದಾರೆ.

ಇತ್ತೀಚಿಗಷ್ಟೇ ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ವಿರುದ್ಧ ನಟಿ ತನುಶ್ರೀ ದತ್ತ ಲೈಂಗಿಕ ಕಿರುಕುಳದ ಆರೋಪ ಮಾಡಿ ನಟ-ನಟಿಯರಿಂದ ಈ ಬಗ್ಗೆ ಪ್ರತಿಕ್ರಿಯೆ ವ್ಯಕ್ತವಾಗಿರುವ ಬೆನ್ನಲ್ಲೇ, ಹಿಂದಿ ಚಿತ್ರರಂಗದ ವಿವಾದಿತ ನಟಿಯೆಂದೇ ಹೆಸರಾಗಿರುವ ಕಂಗನಾ ರನಾವತ್ ಕ್ವೀನ್ ಚಿತ್ರದ ನಿರ್ದೇಶಕ ವಿಕಾಸ್ ಬಹ್ಲ್ ವಿರುದ್ದ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ.

ಬಾಲಿವುಡ್‌ನಲ್ಲಿ ಬೋಲ್ಡ್ ಆಂಡ್ ಬ್ಯೂಟಿಫುಲ್ ಎಂದೇ ಹೆಸರಾಗಿರುವಾಕೆ ಕಂಗನಾ ರನಾತ್. ಯಾರಿಗೂ ಕೇರು ಮಾಡದ ಸ್ವಭಾವದ ಈ ಹುಡುಗಿಯೇ ಕಾಸ್ಟಿಂಗ್ ಕೌಚ್ ವ್ಯಾಕುಲವನ್ನು ಎದುರಿಸಿದ್ದಳಂತೆ. ‘ಕ್ವೀನ್‌’ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದ ನಟಿ ಕಂಗನಾ ರನೌತ್‌, ‘ಚಿತ್ರದ ನಿರ್ದೇಶಕ ವಿಕಾಸ್‌ ಬಹ್ಲ ನನಗೆ ಲೈಂಗಿಕ ಕಿರುಕುಳ’ ನೀಡಿದ್ದರು ಎಂದು ಆರೋಪಿಸಿದ್ದಾರೆ.

‘ಕ್ವೀನ್’ ಚಿತ್ರದ ವೇಳೆ ನನ್ನನ್ನು ಹಲವು ಬಾರಿ ಬಿಗಿಯಾಗಿ ತಬ್ಬಿಕೊಂಡಿದ್ದರು. ನನ್ನ ಕೇಶರಾಶಿಯ ಪರಿಮಳವನ್ನು ಆಘ್ರಾಣಿಸಿದ್ರು. ನಿನ್ನ ಸ್ಮೆಲ್ ನನಗೆ ತುಂಬಾ ಇಷ್ಟ ಎನ್ನುತ್ತಿದ್ದರು. ಅವರಿಂದ ಬಿಡಿಸಿಕೊಳ್ಳಲು ತುಂಬಾ ಕಷ್ಟ ಪಡ್ತಿದ್ದೆ. ಅವರಲ್ಲಿ ಏನೋ ಸಮಸ್ಯೆ ಇದೆ” ಎಂದು ಹೇಳಿಕೊಂಡಿದ್ದಾರೆ.

ಸದ್ಯ ಇಂತಹ ಲೈಂಗಿಕ ದೌರ್ಜನ್ಯದ ಕುರಿತು ‘ಮೀಟೂ’ ಅಭಿಯಾನವನ್ನು ಬಾಲಿವುಡ್ ನಲ್ಲಿ ನಟಿಯರು ನಡೆಸುತ್ತಿದ್ದಾರೆ. ಇದರ ಸ್ಫೂರ್ತಿಯಿಂದ ಎಲ್ಲ ಭಾಷೆಗಳ ನಟಿಯರೂ ಕಾಸ್ಟ್ ಕೌಚಿಂಗ್ ವಿರುದ್ಧ ಸಮರ ಸಾರಿದರೆ ಈ ಕಾಯಿಲೆಯನ್ನು ಕೊಂಚ ಮಟ್ಟಿಗಾದರೂ ವಾಸಿ ಮಾಡಲಾದೀತು!

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top