ಮನೋರಂಜನೆ

ಪೋಲೆಂಡ್​​​ ಪೋರನ ಕನ್ನಡ ಸಿಂಗಿಂಗ್, ಹಾಡು ಕೇಳಿ ಫುಲ್ ಫಿದಾ ಆದ ಗೋಲ್ಡನ್ ಸ್ಟಾರ್ ,ಆಮೇಲೆ ಆಗಿದಾದ್ರು ಏನು .ವಿಡಿಯೋ ಒಳಗಿದೆ

ಕನ್ನಡ ಹಾಡುಗಳನ್ನು ಇಷ್ಟಪಡೋದು ಹಾಗೂ ಆ ಹಾಡುಗಳನ್ನು ಹಾಡೋದು ನಮ್ಮ ಕರ್ನಾಟಕ ಹಾಗೂ ಕನ್ನಡ ಭಾಷೆಗೆ ಒಂದು ದೊಡ್ಡ ಹಿರಿಮೆ ,ಅದು ನಮ್ಮ ಭಾಷೆಯನ್ನು ವಿದೇಶಿದ ವರಿಗೂ ಪಸರಿಸುತ್ತದೆ ,ವಿದೇಶಿಯರು ನಮ್ಮ ಭಾಷೆ ಹಾಗೂ ನಮ್ಮ ಕನ್ನಡ ಚಿತ್ರಗಳನ್ನೂ ನೋಡಿ ಪ್ರೋತ್ಸಹ ನೀಡಿದ ಎಷ್ಟೋ ಉದಾಹರಣೆಗಳು ಇವೆ ಹಿಂದೆ ಪುನೀತ್ ರಾಜಕುಮಾರ್ ರವರ ಗೊಂಬೆ ಹೇಳುತೈತೆ ಹಾಡನ್ನ ವಿದೇಶಿ ಕಾರು ಡ್ರೈವರ್ ಹಾಡಿದ್ರು.ಈಗ ಗೋಲ್ಡನ್ ಸ್ಟಾರ್ ಗಣೇಶ್ ಸರದಿ ಕಾಮಿಡಿ ಟೈಮ್ ಗಣೇಶ್ರನ್ನು ಗೋಲ್ಡನ್ ಸ್ಟಾರ್ ಗಣೇಶ ಆಗಿ ಪರಿವರ್ತನೆ ಮಾಡಿದ ಸಿನಿಮಾ ಮುಂಗಾರು ಮಳೆ ,ಆ ಟೈಂನಲ್ಲಿ ಆ ಸಿನಿಮಾ ಸಿನಿರಸಿಕರನ್ನು ಹುಚ್ಚ್ಯಾದು ಕುಣಿಸುವಂತೆ ಮಾಡಿತ್ತು .

ಅಂತ ಸೂಪರ್ ಡೂಪರ್ ಚಿತ್ರ ಮುಂಗಾರು ಮಳೆ ಚಿತ್ರದ ಟೈಟಲ್ ಹಾಡನ್ನ ಪೋಲೆಂಡ್ ದೇಶದ ಜೀಬಿಂಗ್ ಎಂಬ ಪುಟಾಣಿ ಹಾಡಿ ಗಮನ ಸೆಳೆದಿದ್ದಾನೆ. ಗಾಯಕ ಸೋನು ನಿಗಮ್ ಧ್ವನಿಗೆ ಹಾಗೂ ಗಣೇಶ್ ಆಕ್ಟಿಂಗ್ ಬೋಲ್ಡ್ ಆಗಿರುವ ಜೀಬಿಂಗ್ ಈ ಹಾಡನ್ನ ಹಾಡಿರೋದು ವಿಶೇಷ.ಜೀಬಿಂಗ್ ಮುಂಗಾರುಮಳೆ ಹಾಡನ್ನು ಹಾಡಿ ವಿಡಿಯೋ ಮಾಡಿ ಅದನ್ನು ತನ್ನ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿ ಹೀಗೆ ಬರೆದುಕೊಂಡಿದ್ದಾನೆ “ಮುಂಗಾರು ಮಳೆ ಕೇಳಿದ ತಕ್ಷಣ ನಂಗೆ ಈ ಹಾಡು ತುಂಬಾ ಇಷ್ಟ ಆಯಿತು ,ಇದು ನನ್ನ ಮೊದಲನೇ ಕನ್ನಡ ಸಾಂಗ್ ,ತುಂಬಾ ಧನ್ಯವಾದಗಳು ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಸೋನು ನಿಗಮ್ ಸರ್ ,ಕೊನೆಗೆ ನಾನು ಹಾಡಿದ ಈ ವಿಡಿಯೋ ಸಾಂಗ್ ನಿಮಗೆ ತಲುಪಿದ್ದಾರೆ ತಪ್ಪದೆ ನಿಮ್ಮ ಅಭಿಪ್ರಾಯ ತಿಳಿಸಿ ಎಂದು ಬರೆದುಕೊಂಡಿದ್ದಾನೆ”

 

(ವಿಡಿಯೋಗಾಗಿ ಈ ಮೇಲಿನ ಲಿಂಕ್ ಕ್ಲಿಕ್ ಮಾಡಿ)ಈ ಹಾಡನ್ನ ನೋಡಿದ ಗೋಲ್ಡನ್ ಸ್ಟಾರ್ ಗಣೇಶ್ ಮನಸೋತಿದ್ದು, ಅದ್ಭುತವಾಗಿ ಹಾಡಿರುವುದಾಗಿ ಸ್ವತಃ ಗಣಿ ಟ್ವೀಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸದ್ಯ ಗಣಿ ಚಿತ್ರದ ಹಾಡನ್ನು ಹಾಡಿರುವ ಈತ ಮುಂದಿನ ದಿನಗಳಲ್ಲಿ ಇನ್ನಷ್ಟು ಕನ್ನಡದ ಹಾಡನ್ನು ಹಾಡಲು ಪ್ರಯತ್ನಿಸುವುದಾಗಿ ಹೇಳಿ ಕನ್ನಡಾಭಿಮಾನ ಮೆರೆದಿದ್ದಾನೆ.ನಮ್ಮ ಕನ್ನಡದ ಹಾಡು ವಿದೇಶದಲ್ಲಿ ಹೆಸರು ಮಾಡುವುದು ನಮ್ಮ ಕನ್ನಡ ಭಾಷೆಗೆ ಒಂದು ಗೌರವ ,ಇನ್ನು ಹೇಗೆ ಕನ್ನಡ ಎಲ್ಲ ಕಡೆ ಪಸರಿಸಲಿ ಎಂದು ನಾವು ಆಶಿಸೋಣ

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top