ಮನೋರಂಜನೆ

ಸನ್ನಿ ಲಿಯೋನಿ ಫೋಟೋಗೆ ಚಪ್ಪಲಿ ಸೇವೆ- ಸನ್ನಿ ವಿರುದ್ದದ ಪ್ರತಿಭಟನೆಗೆ ಕಾರಣವೇನು ಗೊತ್ತಾ?

ಬಾಲಿವುಡ್ ನಟಿ ಸನ್ನಿ ಲಿಯೊನಿ ವಿರುದ್ಧ ಬೆಂಗಳೂರಿನಲ್ಲಿ ಮತ್ತೊಂದು ಸುತ್ತಿನ ಪ್ರತಿಭಟನೆ ಶುರುವಾಗಿದೆ.. ವೀರ ಮಹಾದೇವಿ ಚಿತ್ರದಲ್ಲಿ ಸನ್ನಿ ಲಿಯೋನ್ ನಟಿಸಬಾರದು ಎಂದು ಸನ್ನಿ ಲಿಯೋನೀ ಮತ್ತು ಚಿತ್ರ ನಿರ್ಮಾಪಕ ಡಿ.ಸಿ ವಾಡಿ ಉದಯನ್ ವಿರುದ್ಧ ಕೆಲ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಿವೆ.

 

 

“ವೀರ ಮಹಾದೇವಿ ಐತಿಹಾಸಿಕ ಚಿತ್ರವಾಗಿದ್ದು ಇದರಲ್ಲಿ ಸನ್ನಿ ಲಿಯೋನ್ ನಟಿಸಬಾರದು.. ಇದು ನಮ್ಮ ಸಂಸ್ಕೃತಿ ವಿಚಾರ. ಹೀಗಾಗಿ ನಾವು ಅದನ್ನ ವಿರೋಧಿಸ್ತೀವಿ.” ಎಂದು ಪ್ರತಿಭಟಿಸಿರುವ ಕಾರ್ಯಕರ್ತರು “ಸನ್ನಿ ಲಿಯೋನ್ ಇಲ್ಲಿಗೆ ಬರಲು ನಾವು ಬಿಡುವುದಿಲ್ಲ” ಎಂದು ಹೇಳಿದ್ದಾರೆ. ಪ್ರತಿಭಟನೆಯಲ್ಲಿ ಸನ್ನಿಲಿಯೋನ್ ಭಾವಚಿತ್ರಕ್ಕೆ ಚಪ್ಪಲಿ ಸೇವೆ ಮಾಡಿ ಕಾರ್ಯಕರ್ತರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.. ಅಂದಹಾಗೆ ವೀರ ಮಹಾದೇವಿ ಚಿತ್ರ ಐದು ಭಾಷೆಗಳಲ್ಲಿ ತಯಾರಾಗುತ್ತಿದ್ದು, ಒಟ್ಟು 100 ಕೋಟಿ ಬಜೆಟ್ ನಲ್ಲಿ ತಯಾರಾಗುತ್ತಿದೆ.

ಅಂದಹಾಗೆ ಈ ಹಿಂದೆ ಕಳೆದ ಹೊಸ ವರ್ಷ ಆಚರಣೆಗೆ ಬೆಂಗಳೂರಿಗೆ ಸನ್ನಿ ಲಿಯೊನಿ ಅವರು ಬರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ದರು. ಪರಿಣಾಮ ಸನ್ನಿ ಆಗಮನಕ್ಕೆ ಸರಕಾರ ನಿಷೇಧ ಹೇರಿತ್ತು., ಇತ್ತೀಚೆಗಷ್ಟೇ ಮತ್ತೆ ಸನ್ನಿ ಬೆಂಗಳೂರಿನ ಕಾರ್ಯಕ್ರಮವೊಂದಕ್ಕೆ ಬರಲಿದ್ದಾರೆ ಎಂಬ ಸುದ್ದಿಯಾಗುತ್ತಿದ್ದಂತೆ ಅವರ ಆಗಮನಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು.

ನವೆಂಬರ್ 3 ರಂದು ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್ ನಲ್ಲಿ ಸನ್ನಿ ನೈಟ್ ಹೆಸರಿನಲ್ಲಿ ಕಾರ್ಯಕ್ರಮವೊಂದನ್ನು ಆಯೋಜನೆ ಮಾಡಲಾಗಿದ್ದು ಈ ಕಾರ್ಯಕ್ರಮದಲ್ಲಿ ಕನ್ನಡ ಹಾಡುಗಳಿಗೆ ಸನ್ನಿ ಹೆಜ್ಜೆ ಹಾಕಲಿದ್ದಾರೆ.,

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top