ಮನೋರಂಜನೆ

“ಅವಕಾಶಗಳಿಗಾಗಿ 4 ವರ್ಷ ಅಲೆದಾಡಿದ್ದೇನೆ. ಈ ಸಮಯದಲ್ಲಿ ಎಷ್ಟು ಚಪ್ಪಲಿ ಸವೆದಿದಿಯೋ ಗೊತ್ತಿಲ್ಲ”ಶನಿ ಧಾರಾವಾಹಿಯ ಸೂರ್ಯದೇವ ಅಲಿಯಾಸ್ ರಂಜಿತ್‍ಕುಮಾರ್.

ಶನಿ ಧಾರಾವಾಹಿಯ ಸೂರ್ಯದೇವ ಅಲಿಯಾಸ್ ರಂಜಿತ್‍ಕುಮಾರ್ ಬದುಕಿನ ಸುತ್ತ ಒಂದು ನೋಟ

ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಶನಿ ಧಾರಾವಾಹಿ ನೋಡದವರು ಬಹುಶ ಯಾರು ಇಲ್ಲ ,ಎಲ್ಲ ವಯಸ್ಸಿನ ಅಂದ್ರೆ ಚಿಕ್ಕ ವಯಸ್ಸಿನ ಮಕ್ಕಳಿಂದ ಹಿಡಿದು ದೊಡ್ಡ ವಯಸ್ಸಿನರು ಇಷ್ಟ ಪಟ್ಟು ನೋಡುವ ಧಾರವಾಹಿ ಶನಿ ,ಕಿರುತೆರೆಯ ಜಗತ್ತಿನಲ್ಲಿ ಹೊಸದೊಂದು ಪ್ರಯೋಗ ಈ ಶನಿ ಧಾರವಾಹಿ ,ಈ ಧಾರವಾಹಿಯ ಪ್ರತಿಯೊಂದು ಪಾತ್ರವು ತನ್ನದೇ ಆದ ಪ್ರಾಮುಖ್ಯತೆಯ ಜೊತೆಗೆ ಜನರ ಮನಸಲ್ಲಿ ಕೂತು ಬಿಡುತ್ತವೆ.ಈ ಧಾರಾವಾಹಿಯ ಪ್ರಮುಖ ಪಾತ್ರ ಸೂರ್ಯ ದೇವನ ಪಾತ್ರ ವಹಿಸುತ್ತಿರುವ ರಂಜಿತ್‍ಕುಮಾರ್ ,ಸೂರ್ಯ ದೇವನೇ ಭೂಮಿಗೆ ಬಂದಿದ್ದಾನೆ ಎಂದು ಕೊಳ್ಳುವ ಮಟ್ಟಿಗೆ ತನ್ನ ಪಾತ್ರವನ್ನು ಅಮೋಘವಾಗಿ ನಟಿಸಿದ್ದಾರೆ ರಂಜಿತ್.ರಂಜಿತ್ ಅಸೂರ್ಯ ದೇವನ ಪಾತ್ರಕ್ಕೆ ಜೀವವೇ ತುಂಬಿದ್ದಾರೆ .

 

 

 

ಒಂದು ಖಾಸಗಿ ವಾಹಿನಿಗೆ ಕೊಟ್ಟ ಸಂದರ್ಶನದಲ್ಲಿ ಸೂರ್ಯದೇವ ಅಲಿಯಾಸ್ ರಂಜಿತ್‍ಕುಮಾರ್ ಅವರ ಮನದ ಮಾತುಗಳನ್ನು ಹಂಚಿಕೊಂಡಿದ್ದಾರೆ ,ರಂಜಿತ್‍ಕುಮಾರ್ ತೆರೆಯ ಮೇಲೆ ಸೂರ್ಯದೇವನಾಗಿ ನಿಲ್ಲುವುದಕ್ಕೆ ತುಂಬಾ ಕಷ್ಟ ಪಟ್ಟಿದ್ದಾರಂತೆ .ನಟನೆಗೆ ಬೇಕಾದ ಎಲ್ಲ ಟ್ಯಾಲೆಂಟ್ ಇದ್ರೂ ರಂಜಿತ್‍ಕುಮಾರ್ ಗೆ ಅವಕಾಶಗಳು ಸಿಗುತ್ತಿರಲಿಲ್ಲವಂತೆ.ಹಾಗಂತ ರಂಜಿತ್‍ಕುಮಾರ್ ಹುಟ್ಟಿದು ತೀರಾ ಬಡತನದ ಕುಟುಂಬದಲ್ಲಿ ಅಲ್ಲ ,ಈ ಬಣ್ಣದ ಲೋಕಕ್ಕೆ ಬರುವುದಕ್ಕೆ ಮುಂಚೆ ರಂಜಿತ್ ಇಂಡಿಗೋ ಏರ್ ಲೈನ್ಸ್ ಕಂಪನಿಯಲ್ಲಿ ಒಳ್ಳೆಯ ಕೆಲಸ ಮಾಡುತ್ತಿದ್ದರಂತೆ,ಆದ್ರೆ ಎಲ್ಲೋ ಮನಸಿನ ಒಂದು ಮೂಲೆಯಲ್ಲಿ ತಾನು ಅಭಿನಯ ಮಾಡುವ ಕನಸಿತ್ತಂತೆ.

ಚಿಕ್ಕ ವಯಸ್ಸಿನಿಂದ ರಂಜಿತ್ ಕರಾಟೆ ಕಲಿಯುತಿದ್ರಂತೆ ಆದ್ರೆ ಅವಾಗ ಇವರಿಗೆ ಸಿನಿಮಾದಲ್ಲಿ ಮಾಡಬೇಕೆಂದು ಆಸೆ ಇರಲಿಲ್ಲವಂತೆ ಅವರಿಗೆ ಮೊದಲಿದ ಏರ್ ಲೈನ್ಸ್ ನಲ್ಲಿ ಕೆಲಸ ಮಾಡಬೇಕೆಂಬ ಆಸೆ ಇತ್ತಂತೆ ಅದೇ ರೀತಿ ಅವರ ಆಸೆಯಂತೆ ಇಂಡಿಗೋ ಏರ್ ಲೈನ್ಸ್ ಕಂಪನಿಯಲ್ಲಿ ಕೆಲಸ ಸಿಕ್ಕಿ. ಎರಡು ವರ್ಷ ಕೆಲಸ ಮಾಡಿದ್ದಾರೆ ರಂಜಿತ್ .ರಂಜಿತ್ ರವರ ಅಕ್ಕ ನಟಿ ಮಾಲಾಶ್ರೀ ಅವರಿಗೆ ಬೌನ್ಸರ್ಸ್ ಆಗಿ ಕೆಲಸ ಮಾಡುತ್ತಿದ್ದರು.ಮಾಲಾಶ್ರೀ ಯವರು ಒಂದು ಸಲ ರಂಜಿತಾ ರವರನ್ನು ನೋಡಿ ಒಳ್ಳೆಯ ಪರ್ಸನಾಲಿಟಿ ಇದೆ ಸಿನಿಮಾದಲ್ಲಿ ಅಭಿನಯಿಸು ಎಂದು ಹೇಳಿದರಂತೆ,ಆ ಮಾಲಾಶ್ರೀ ಯವರ ಮಾತು ರಂಜಿತ್ಗೆ ಸ್ಪೂರ್ತಿ ಯಾಯಿತಂತೆ ನಂತರ ಕೆಲಸ ಬಿಟ್ಟು ಸಿನಿಮಾದಲ್ಲಿ ಚಾನ್ಸ್ ಕ್ಕಾಗಿ ತುಂಬಾ ಕಷ್ಟ ಪಟ್ಟಿದರಂತೆ . ಬೆಳಗ್ಗೆ ಗಾಂಧಿನಗರಕ್ಕೆ ಹೋದರೆ ಸಂಜೆವರೆಗೂ ಕಾಯುತ್ತಿದ್ದರಂತೆ ಕೊನೆಗೆ ಯಾರು ಸಿಗುತ್ತಿರಲಿಲ್ಲವಂತೆ , ಎಲ್ಲರು ಹೈಟ್, ಪರ್ಸನಾಲಿಟಿ ಇದೆ ಸಿನಿಮಾದಲ್ಲಿ ಮಾಡಿ ಎಂದು ಹೇಳುತ್ತಿದ್ದರು. ಆದ್ದರಿಂದ ನಾನು ಸಿನಿಮಾದಲ್ಲಿ ಮಾಡಬೇಕು ಎಂದು ಪ್ರಯತ್ನ ಪಟ್ಟರಂತೆ . ಕೊನೆಗೆ ಸತತ ನಾಲ್ಕು ವರ್ಷ ಅಲೆದಾಡಿದ್ದೇನೆ. ಈ ಸಮಯದಲ್ಲಿ ಎಷ್ಟು ಚಪ್ಪಲಿ ಸವೆದಿದಿಯೋ ಗೊತ್ತಿಲ್ಲ ಎಂದು ಹೇಳುತ್ತಾ ಅವರ ಜೀವನದ ಕಷ್ಟದ ದಿನವನ್ನು ನೆನೆದರು ರಂಜಿತ್.

 

 

 

ಸಿನಿಮಾಗಳಲ್ಲಿ ಚಾನ್ಸ್ ಗಿಟ್ಟಿಸಿಕೊಳ್ಳಲು ರಂಜಿತ್ ಸಿನಿಮಾ ನಟರಿಗೆ ನಾನು ಬೌನ್ಸರ್ಸ್ ಆಗು ಕೂಡ ಕೆಲಸ ಮಾಡಿದ್ದರಂತೆ ,ರಂಜಿತ್ ನಟಿ ಮಾಲಾಶ್ರೀ ಅವರಿಂದ ಸಿನಿಮಾಗೆ ಬಂದರಂತೆ ,ರಂಜಿತ್ ಇವರಿಗೆ ‘ಪೊರ್ಕಿ,ಅಣ್ಣಾಬಾಂಡ್, ಜಾಕಿ ಮತ್ತು ತಮಸ್ಸು ಚಿತ್ರಗಲ್ಲಿ ಕಾಣಿಸಿಕೊಂಡಿದ್ದಾರೆ ,ಡಾ. ರಾಜ್ ಕುಮಾರ್ ಅವರನ್ನು ನೋಡಿ ಕಮರ್ಷಿಯಲ್ ಸಿನಿಮಾಗಳಿಗಿಂತ ಪೌರಾಣಿಕ ಪಾತ್ರಗಳನ್ನ ಮಾಡಿ ಸೈ ಎನಿಸಿಕೊಳ್ಳಬೇಕು ಎಂಬ ಮಹದಾಸೆ ಇಟ್ಟುಕೊಂಡಿದ್ದ ರಂಜಿತ್ ರವರಿಗೆ ಶನಿ ಆಫರ್ ಬಂದ ತಕ್ಷಣ ನಿಮಾದ ಅವಕಾಶಗಳನ್ನು ಬಿಟ್ಟು ಈ ಧಾರಾವಾಹಿಯನ್ನು ಒಪ್ಪಿಕೊಂಡರಂತೆ .ಇಷ್ಟು ಕಷ್ಟ ಪಟ್ಟು ಈ ಮಟ್ಟಕ್ಕೆ ಬಂದ ರಂಜಿತ್ ಗೆ ಎಲ್ಲ ಒಳ್ಳೆಯದಾಗಲಿ ,ಇನ್ನು ಸಿನಿಮಾ ರಂಗದಲ್ಲಿ ತುಂಬಾ ಮೇಲಕ್ಕೆ ಹೋಗಿ ಹೆಸರು ಮಾಡಲ್ಲಿ ಎಂದು ನಾವು ಆಶಿಸೋಣ

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top