ಸಮಾಚಾರ

“ಬ್ರೇಕಪ್ ಆಗಿರೋದು ನಿಜ” ಕಡ್ಡಿತುಂಡಾದಂತೆ ಉತ್ತರ ಕೊಟ್ಟಳು ರಶ್ಮಿಕಾ.

ಸ್ಯಾಂಡಲ್ ವುಡ್’ನಲ್ಲಿ ಹಾಟೆಸ್ಟ್ ಜೋಡಿ ಎಂತಲೇ ಹೆಸರು ಪಡೆದಿದ್ದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಮತ್ತು ಕಿರಿಕ್ ಹುಡುಗಿ ರಶ್ಮಿಕಾ ಮಂದಣ್ಣ ಜೋಡಿ ಈಗ ಬ್ರೇಕಪ್ ಸಂಕಟದಲ್ಲಿದ್ದಾರೆ. ಈ ಬಗ್ಗೆ ಕ್ಷಣಕ್ಕೊಂದರಂತೆ ಹೊರ ಬೀಳುತ್ತಿರೋ ರೂಮರ್‌ಗಳು, ಸಾಮಾಜಿಕ ಜಾಲತಾಣಗಳಲ್ಲಿನ ಟ್ರೋಲ್‌ಗಳು ಇಬ್ಬರನ್ನೂ ಹೈರಾಣಾಗಿಸಿದೆ.. ರಕ್ಷಿತ್ ಮತ್ತು ರಶ್ಮಿಕಾ ಬ್ರೇಕಪ್ ವಿಚಾರವಾಗಿ ದೃಶ್ಯ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪುಂಖಾನುಪುಂಖವಾಗಿ ಸುದ್ದಿಗಳು ಪ್ರಸಾರವಾಗುತ್ತಿದ್ದರೂ ಯಾರೊಬ್ಬರೂ ಅಧಿಕೃತವಾಗಿ ಹೇಳಿಕೊಂಡಿರಲಿಲ್ಲ.. ಆದರೆ ಕಿರಿಕ್ ಹುಡುಗಿ ರಶ್ಮಿಕಾ ಮಂದಣ್ಣ ಇದಕ್ಕೆ ತೆರೆ ಎಳೆದಿದ್ದಾಳೆ.

 

 

ತಮ್ಮಿಬ್ಬರ ಬ್ರೇಕಪ್ ಕಥೆಯನ್ನು​ ತೆಲುಗು ಮಾಧ್ಯಮದ ಎದುರು ರಶ್ಮಿಕಾ ಅಫೀಶಿಯಲ್​ ಅನೌನ್ಸ್​ಮೆಂಟ್ ಕೊಟ್ಟಿದ್ದಾರೆ. “ಈಗ ನನ್ನ ಗಮನವೇನಿದ್ದರೂ ವೃತ್ತಿ ಜೀವನದ ಮೇಲಿದೆ. ಈ ಸಮಯದಲ್ಲಿ ಅದನ್ನು ಬಿಟ್ಟು ಬೇರೆ ಯಾವ ವಿಷಯವನ್ನು ಕೇಳಬೇಡಿ. ರಕ್ಷಿತ್​ ಶೆಟ್ಟಿ ಜೊತೆಗಿನ ನನ್ನ ಸಂಬಂಧ ಮುಗಿದ ಅಧ್ಯಾಯ. ರಕ್ಷಿತ್​ ಈಗ ಮುಗಿದ ಅಧ್ಯಾಯ. ಈ ಬಗ್ಗೆ ನಾನು ಈಗಾಗಲೇ ಸ್ಪಷ್ಟನೆ ಕೂಡ ನೀಡಿದ್ದೇನೆ. ಇದೇ ವಿಷಯದ ಬಗ್ಗೆ ಪದೇ ಪದೇ ನನಗೆ ಮಾತನಾಡಲು ಇಷ್ಟವಿಲ್ಲ” ಎಂದಿದ್ದಾರೆ.

“ಕಿರಿಕ್ ಪಾರ್ಟಿ ಸಿನಿಮಾದ ಶೂಟಿಂಗ್ನಲ್ಲಿ ರಕ್ಷಿತ್ ಪರಿಚಯವಾಗಿ ಸ್ನೇಹಿತರಾದೆವು. ಈ ಸ್ನೇಹ ಪ್ರೀತಿಗೆ ತಿರುಗಿತು. ಇದನ್ನು ಅಮ್ಮನಿಗೆ ಹೇಳಿದೆ. ಅವರು ಕೂಡ ನನ್ನ‌ ಪ್ರೀತಿಗೆ ಬೆಂಬಲ ನೀಡಿದರು. ನಿನ್ನ ಇಷ್ಟದಂತೆ ಇರು. ನಾವು ಅಡ್ಡಿಪಡಿಸುವುದಿಲ್ಲ ಎಂದರು. ಎಲ್ಲವೂ ಸರಿಯಾಗಿಯೇ ಇತ್ತು.” ”

ನಮ್ಮಿಬ್ಬರ ಪ್ರೀತಿಗೆ ಮನೆಯವರೂ ಸಮ್ಮತಿ ಸೂಚಿಸಿದ್ದರು. ನಿಶ್ಚಿತಾರ್ಥದ ತನಕ ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ ನಂತರದಲ್ಲಿ ಇಬ್ಬರ ನಡುವೆಯೂ ಮನಸ್ತಾಪ ಉಂಟಾಗಿತ್ತು. ಸಣ್ಣ ಪುಟ್ಟ ವಿಚಾರಗಳಿಗಲೂ ಭಿನ್ನಾಭಿಪ್ರಾಯ ಉಂಟಾಗಿತ್ತು. ಸಮಸ್ಯೆ ಚಿಕ್ಕದಿರುವಾಗ ದೂರವಾಗುವುದು ಒಳಿತು ಎನಿಸಿತ್ತು. ಹೀಗಾಗಿ ಪರಸ್ಪರ ಸಮ್ಮತಿಯ ಮೇರೆಗೆ ದೂರವಾಗಿದ್ದೇವೆ” ಎಂದು ರಶ್ಮಿಕಾ ತಿಳಿಸಿದ್ದಾರೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top