ಸಮಾಚಾರ

ಫಿಕ್ಸ್ ಆಯ್ತು ಭಾರತೀಯ ಬ್ಯಾಡ್ಮಿಟನ್ ತಾರೆ ಸೈನಾ ನೆಹ್ವಾಲ್ ಮದುವೆ ಡೇಟ್.

ಇಂಡಿಯನ್ ಬ್ಯಾಡ್ಮಿಟನ್ ತಾರೆ ಸೈನಾ ನೆಹ್ವಾಲ್ ಮತ್ತು ಪಾರುಪಲ್ಲಿ ಕಶ್ಯಪ್ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಇತ್ತೀಚಿಗಷ್ಟೇ ಬಹಿರಂಗವಾಗಿತ್ತಲ್ಲಾ, ಆ ನಂತ್ರ ಈ ವಿವಾಹದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ನಾನಾ ರೀತಿ ಗಾಸಿಪ್ಪುಗಳು ಹರಡಿಕೊಂಡಿದ್ದವು. ಇವರು ಆ ದಿನ ಮದುವೆ ಆಗ್ತಾರಂತೆ, ಈ ದಿನ ಆಗ್ತಾರಂತೆ, ಮದುವೆ ಅಲ್ಲಿ ನಡೆಯುತ್ತಂತೆ, ಇಲ್ಲಿ ನಡೆಯುತ್ತಂತೆ ಈ ರೀತಿ ಸುದ್ದಿಗಳು ಪುಂಖಾನುಪುಂಖವಾಗಿ ಹರಿದಾಡುತ್ತಿದ್ದವು.. ಇದೀಗ ಆ ಎಲ್ಲಾ ರೂಮರುಗಳಿಗೂ ತೆರೆ ಬಿದ್ದಿದ್ದು ಸ್ವತಃ ಸೈನಾ ಅವರೇ ತಮ್ಮ ಮದುವೆ ದಿನಾಂಕವನ್ನು ಅಧಿಕೃತವಾಗಿ ಬಹುರಂಗಪಡಿಸಿದ್ದಾರೆ.

 

 

ಪುಣೆಯಲ್ಲಿ ವರದಿಗಾರರೊಂದಿಗೆ ಮಾತನ್ನಾಡುತ್ತಿದ್ದ ಸೈನಾ ನೆಹ್ವಾಲ್ “ಮದುವೆಯಾಗಲು ನನಗಿದು ಸರಿಯಾದ ಸಮಯ. ಆದರೆ ಡಿಸೆಂಬರ್ 16 ಬಿಟ್ಟರೆ , ಬೇರೆ ದಿನ ನನಗೆ ಪುರುಸೊತ್ತಿಲ್ಲ” ಎಂದಿದ್ದಾರೆ. ಈ ಮೂಲಕ ತಮ್ಮ ಮದುವೆ ಡಿಸೆಂಬರ್ 16ಕ್ಕೆ ನಡೆಯಲಿದೆ ಎಂದು ಬಾಯ್ಬಿಟ್ಟಿದ್ದಾರೆ. ಡಿಸೆಂಬರ್ 20ರಿಂದ ನಾನು ಬ್ಯಾಡ್ಮಿಂಟನ್ ಪ್ರಿಮಿಯರ್ ಲೀಗ್‌ನಲ್ಲಿ ಬ್ಯುಸಿಯಾಗುತ್ತೇನೆ. ಅದರ ಬಳಿಕ ಟೋಕಿಯೋ ಗೇಮ್ಸ್‌ಗೆ ಅರ್ಹತಾ ಪಂದ್ಯಗಳು ನಡೆಯಲಿವೆ. ಹೀಗಾಗಿ ಡಿಸೆಂಬರ್ 16ರಂದು ಮಾತ್ರ ನನಗೆ ಪುರುಸೊತ್ತಿದೆ ಎಂದಿದ್ದಾರೆ ಸೈನಾ.

ಕಳೆದ 10 ವರ್ಷಗಳಿಂದ ನಬ್ಬಿಬ್ಬರ ನಡುವೆ ಪರಿಚಯವಿದ್ದು, ಒಬ್ಬರಿಗೆ ಒಬ್ಬರೂ ಚೆನ್ನಾಗಿ ಆರ್ಥ ಮಾಡಿಕೊಂಡಿದ್ದೇವೆ. 2008ರ ಬಳಿಕ ನಾವಿಬ್ಬರೂ ಒಟ್ಟಿಗೆ ಹಲವು ಬ್ಯಾಡ್ಮಿಂಟನ್ ಟೂರ್ನಿಗಳಲ್ಲಿ ಭಾಗವಹಿಸಿದ್ದೇವೆ. ಬೇರೊಬ್ಬರೊಂದಿಗೆ ಉತ್ತಮ ಬಾಂಧವ್ಯ ರೂಪಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಆದರೆ ಇಬ್ಬರು ಬಹುಬೇಗ ಆತ್ಮೀಯಾರಗಿದ್ದೇವೆ ಎಂದು ಹೇಳಿದ್ದಾರೆ.. ಹಲವು ವರ್ಷಗಳಿಂದ ಲವ್ ನಲ್ಲಿ ಬಿದ್ದಿದ್ದ ಈ ಜೋಡಿ ಈಗ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top