ಮನೋರಂಜನೆ

ಬಹುನಿರೀಕ್ಷಿತ ‘ದಿ ವಿಲನ್’ ಸಿನಿಮಾ ಕಥೆ ಇದೇನಾ?

ಕನ್ನಡ ಚಿತ್ರರಂಗದಲ್ಲಿ ವಿಪರೀತ ಕ್ರೆಜ್ ಹುಟ್ಟುಹಾಕಿರುವ ‘ದಿ ವಿಲನ್’ ಚಿತ್ರ ಬಿಡುಗಡೆಯಾಗೋ ದಿನಾಂಕ ಪಕ್ಕಾ ಆಗಿದ್ದು ಅಕ್ಟೋಬರ್ ಹದಿನೆಂಟನೇ ತಾರೀಕಿನಂದು ತೆರೆಗೆ ಅಪ್ಪಳಿಸಲಿದೆ..ಸೆಟ್ಟೇರಿ ಎರಡು ವರ್ಷಗಳೇ ಕಳೆಯುತ್ತಾ ಬಂದಿದ್ದರೂ ಪ್ರೇಕ್ಷಕರ ವಲಯದಲ್ಲಿ ವಿಪರೀತ ಕುತೂಹಲ ಕ್ರಿಯೇಟ್ ಮೆಂಟೇನ್ ಮಾಡಿಕೊಂಡು ಬಂದಿರೋ ಪ್ರೇಮ್ ನಿರ್ದೇಶನದ ‘ದಿ ವಿಲನ್’ ಸಿನಿಮಾ ಸುದೀಪ್ ಮತ್ತು ಶಿವಣ್ಣ ಒಟ್ಟಾಗಿ ನಟಿಸಿರುವುದರಿಂದ ಈ ಪಾಟಿ ಸಂಚಲನ ಸೃಷ್ಟಿಸುತ್ತಿದೆ.. ಈಗಾಗಲೇ ಬಿಡುಗಡೆಯಾಗಿರೋ ಟೀಸರ್ ಮತ್ತು ಮೂರು ಹಾಡುಗಳ ಅಬ್ಬರವನ್ನು ಕಂಡು ಇಡೀ ಗಾಂಧಿನಗರವೇ ಬೆಚ್ಚಿಬಿದ್ದಾರೆ.

 

 

ಇಂಥಾ ಬಹುನಿರೀಕ್ಷಿತ ‘ದಿ ವಿಲನ್’ ಸಿನಿಮಾ ಕತೆಯ ಬಗ್ಗೆ ಪ್ರೇಕ್ಷಕರು ತಲೆಕೆಡಿಸಿಕೊಂಡು ಕೂತಿದ್ದಾರೆ. ಇಬ್ಬರಲ್ಲಿ ‘ವಿಲನ್’ ಯಾರು? ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಈ ನಡುವೆ ಅಭಿಮಾನಿಗಳೇ ಚಿತ್ರದ ಕತೆಯನ್ನು ಊಹಿಸುತ್ತಿದ್ದು ಟೀಸರ್‍ಗಳನ್ನು ನೋಡಿ, ಕಥೆ ಹೀಗೆಯೇ ಇರಬಹುದು ಎಂಬ ಕಲ್ಪನೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದಾರೆ.. ಆ ರೀತಿ ಹರಿದಾಡುತ್ತಿರುವ ಒಂದೆರಡು ಕತೆಗಳು ಹೀಗಿವೆ ನೋಡಿ.

ಕಥೆ ನಂಬರ್. 1:
ಚಿತ್ರದಲ್ಲಿ ಕಿಚ್ಚ ಸುದೀಪ್ ಅವ್ರು ಶರತ್ ಲೋಹಿತಶಾವ ಮತ್ತು ಶರಣ್ಯ ಅವರ ಪುತ್ರ., ರಾಮಾಯಣ ನಾಟಕದಲ್ಲಿ ತನ್ನ ಮಗ ‘ರಾವಣ’ ಪಾತ್ರವನ್ನು ಮಾಡಬೇಕು ಎಂದು ಶರತ್ ಬಯಸುತ್ತಾರೇ, ಆದರೆ ತಾಯಿ ಶರಣ್ಯ ತನ್ನ ಮಗ ರಾಮನ ಪಾತ್ರ ಮಾಡಬೇಕು ಎಂದು ಇಚ್ಛಿಸುತ್ತಾರೇ. ಕುಟುಂಬದ ಈ ಜಗಳದಲ್ಲಿ ಮೂವರು ಬೇರೆ ಬೇರೆಯಾಗುತ್ತಾರೆ.. ಮುರಿದ ಕುಟುಂಬವನ್ನು ಒಟ್ಟುಗೂಡಿಸುವ ಡಾ. ಶಿವರಾಜಕುಮಾರ್ ಅವರ ಪಾತ್ರ. ಎಂದು ಕೆಲವರು ಹೇಳುತ್ತಿದ್ದಾರೆ

ಕಥೆ ನಂಬರ್.2:
ಚಿತ್ರದಲ್ಲಿ ಕಿಚ್ಚ ಸುದೀಪ್ ಮತ್ತು ಶಿವಣ್ಣ, ಇಬ್ಬರೂ ವಿಲನ್‍ ಗಳೇ,, ಇನ್ನು ಇಬ್ಬರೂ ಕೂಡಾ ಒಬ್ಬರನ್ನು (ಆ್ಯಮಿ ಜಾಕ್ಸನ್)ರನ್ನು ಒಂದೊಂದು ಕಾರಣಕ್ಕೆ ಹುಡುಕುತ್ತಿರುತ್ತಾರೆ. ಆ ಬೇಟೆಯನ್ನು ನಾನೇ ಆಡಬೇಕು ಎಂದು ಹಠಕ್ಕೆ ಬೀಳ್ತಾರೆ. ಅಲ್ಲಿ ಇಬ್ಬರ ನಡುವೆ ಪೈಪೋಟಿ ನಡೆಯುತ್ತೆ. ಇದರ ನಡುವೆ ತಾಯಿಯ ಸೆಂಟಿಮೆಂಟ್ ಕೂಡಾ ಇದೆ.

ಕಥೆ ನಂಬರ್.3:
ಚಿತ್ರದಲ್ಲಿ ಸುದೀಪ್ ‘ವಿಲನ್’, ಶಿವಣ್ಣ ‘ರಾವಣ’ ಇಬ್ಬರದ್ದು ನೆಗಿಟೀವ್ ಪಾತ್ರಗಳೇ. ಒಬ್ಬರು ಲೋಕಲ್, ಇನ್ನೊಬ್ಬರು ಇಂಟೆರ್ ನ್ಯಾಷನಲ್. ಇಬ್ಬರ ನಡುವೆ ಪರಸ್ಪರ ಹಂಟಿಂಗ್ ಕಥೆ ಇದೆ. ಇಡೀ ಸಿನಿಮಾಗೆ ಟ್ವಿಸ್ಟ್ ನೀಡುವಂತಹ ಪಾತ್ರ ಆಮಿ ಜಾಕ್ಸನ್ ಅವರದ್ದು ಇರಬಹುದು.

ಕಥೆ ನಂಬರ್ 4:
ಇಬ್ಬರೂ ತಾವು ದೊಡ್ಡ ಡಾನ್ ಆಗಬೇಕು ಎಂದು ಪೈಪೋಟಿಗಿಳಿಯುತ್ತಾರೆ. ಆ್ಯಮಿ ಜಾಕ್ಸನ್ ತನಿಖಾಧಿಕಾರಿಯಾಗಿ ಬಂದು ಇಬ್ಬರ ನಡುವೆ ದ್ವೇಷ ತಂದಿಟ್ಟು, ಆಟವಾಡುತ್ತಾರೆ..

ಸದ್ಯಕ್ಕೆ ಅಭಿಮಾನಿಗಳು ಊಹಿಸಿರುವ ಕಥೆಗಳು ಹೀಗಿದ್ದು ನಿರ್ದೇಶಕ ಪ್ರೇಮ್ ಅವರ ನಿಜವಾದ ಕಥೆ ಏನು ಎಂಬುದನ್ನ ತೆರೆ ಮೇಲೆ ನೋಡಿಯೇ ತಿಳಿದುಕೊಳ್ಳಬೇಕಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top