ಸಮಾಚಾರ

ಕೈ ಚಳಕ ತೋರಿದ ಕಳ್ಳರು,ಕಳ್ಳತನ ಮಾಡಿ ಪರಾರಿಯಾಗುವ ಟೈಂನಲ್ಲಿ ಸಿಸಿಟಿವಿ ಕ್ಯಾಮೆರಾ ಮುಂದೆ ಕಳ್ಳರು ಮಾಡಿದಾದ್ರು ಏನ್ ಗೊತ್ತಾ

ಕಳ್ಳತನ ಮಾಡಿ ಪರಾರಿಯಾಗುವ ಟೈಂನಲ್ಲಿ ಸಿಸಿಟಿವಿ ಕ್ಯಾಮೆರಾ ಮುಂದೆ ಸ್ಟೆಪ್ ಹಾಕಿ ಡ್ಯಾನ್ಸ್ ಮಾಡಿದ ಕಳ್ಳರು,ಬೆಂಗಳೂರು ಹಾಗೂ ಇನ್ನು ಅನೇಕ ನಗರಗಳಲ್ಲಿ ಈ ನಡುವೆ ಕಳ್ಳತನ ದಿನೇ ದಿನೇ ಹೆಚ್ಚುತ್ತಲಿದೆ,ಪೊಲೀಸರು ಕಳ್ಳತನ ತಡೆಯಲು 10 ಹೆಜ್ಜೆ ಮುಂದೆ ಇಟ್ಟರೆ ಕಳ್ಳರು ಇನ್ನು 10 ಹೆಜ್ಜೆ ಮುಂದೆ ಇಟ್ಟು ಅವರ ಕಳ್ಳತನದ ಕಸುಬನ್ನು ಮಾಡುತ್ತಾ ಬಂದಿದ್ದಾರೆ ,ಮೊನ್ನೆ ಶನಿವಾರ ರಾತ್ರಿ ಗಾಂಧಿ ನಗರ ಜಿಲ್ಲೆಯ ಸರಗಾಸನ ಎಂಬಲ್ಲಿ ಕಳ್ಳತನ ಒಂದು ನಡೆದಿದೆ.

 

 

 

ಅರವಿಂದ್ ಪಟೇಲ್ ಎಂಬವರ ಮನೆಗೆ ನುಗ್ಗಿದ ಕಳ್ಳರು 1.81 ಲಕ್ಷ ರೂ. ಹಾಗೂ ಅದೇ ಕಟ್ಟಡದ ಕಲ್ಪನಾ ಶುಕ್ಲಾ ಎಂಬ ಮಹಿಳೆ ಮನೆಗೆ ನುಗ್ಗಿ 61 ಸಾವಿರ ನಗದು ಮತ್ತು ಚಿನ್ನಾಭರಣ ದೋಚಿ ಪರಾರಿ ಯಾಗಿದ್ದಾರೆ ,ಶನಿವಾರ ಅಪಾರ್ಟ್ ಮೆಂಟ್ ಗೆ ನುಗ್ಗಿದ ಮೂವರು ಕಳ್ಳರು ಎರಡು ಫ್ಲ್ಯಾಟ್ ನಲ್ಲಿ ಕೈಚಳಕ ತೋರಿಸಿದ್ದಾರೆ, ಕಳ್ಳತನದ ಬಳಿಕ ಕಳ್ಳರು ಓಡಿ ಹೋಗುವ ದೃಶ್ಯಗಳು ಕಟ್ಟಡದ ಎಂಟ್ರನ್ಸ್ ಗೇಟ್ ಬಳಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ,ಈ ಕಳ್ಳರ ಗುಂಪು ಕಳ್ಳತನ ಮಾಡಿ ಪರಾರಿಯಾಗುವ ವೇಳೆ ತಂಡದಲ್ಲಿಯ ಕಳ್ಳನೊಬ್ಬ ಸಿಸಿಟಿವಿ ಕ್ಯಾಮೆರಾ ಮುಂದೆ ಡ್ಯಾನ್ಸ್ ಮಾಡಿರುವ ವಿಡಿಯೋ ವೈರಲ್ ಆಗಿದೆ.ಈ ವಿಡಿಯೋವನ್ನು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ ,ಈ ವಿಡಿಯೋ ಈಗ ಫುಲ್ ವೈರಲ್ ಆಗಿದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top