ಮನೋರಂಜನೆ

“ಸುಳ್ಳು ಭರವಸೆ ನೀಡಿಯೇ ನಾವು ಅಧಿಕಾರಕ್ಕೆ ಬಂದಿದ್ದು” ನಿತಿನ್ ಗಡ್ಕರಿ ಹೇಳಿಕೆಯ ವೀಡಿಯೊ ವೈರಲ್.

ಸುಳ್ಳು ಭರವಸೆಗಳಿಂದಲೇ ಮೋದಿ ನೇತೃತ್ವದ ಭಾರತೀಯ ಜನತಾ ಪಾರ್ಟಿ ಕೇಂದ್ರದಲ್ಲಿ ಅಧಿಕಾರ ಚುಕ್ಕಾಣಿ ಹಿಡಿದಿದೆ ಎಂದು ಬಿಜೆಪಿಯ ರಾಷ್ಟ್ರೀಯ ನಾಯಕ, ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿರುವ ವೀಡಿಯೋ ವೈರಲ್ ಆಗಿದೆ. ಈ ವಿಡಿಯೋವನ್ನು ಕಾಂಗ್ರೆಸ್ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದೆ.

ಆ ವಿಡಿಯೋವನ್ನು ಇಲ್ಲಿ ವೀಕ್ಷಿಸಿ:

 

ಖಾಸಗಿ ಚಾನೆಲ್ ‘ಕಲರ್ಸ್ ಮರಾಠಿ’ಯ ಕಾರ್ಯಕ್ರಮವೊಂದರಲ್ಲಿ ಬಾಲಿವುಡ್ ನಟ ನಾನಾ ಪಾಟೇಕರ್ ಜೊತೆ ನಿತಿನ್ ಗಡ್ಕರಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಸಚಿವ ನಿತಿನ್ ಗಡ್ಕರಿ “ನಮಗೆ ಯಾವತ್ತೂ ಅಧಿಕಾರ ಹಿಡಿಯಲು ಸಾಧ್ಯವಿಲ್ಲ ಎನ್ನುವುದು ಗೊತ್ತಿತ್ತು, ಹೀಗಾಗಿ ನಮ್ಮವರೇ ಸುಳ್ಳು ಆಶ್ವಾಸನೆಗಳನ್ನು ಕೊಡಲು ಸಲಹೆ ನೀಡಿದರು. ಅದರಂತೆ ಸುಳ್ಳು ಭರವಸೆಗಳಿಂದಲೇ ನಮ್ಮ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದಿತು” ಎಂದು ಹೇಳಿದ್ದಾರೆ ಎನ್ನಲಾಗಿರುವ ವಿಡಿಯೋ ವನ್ನು ಕಾಂಗ್ರೆಸ್ ಟ್ವೀಟ್ ಮಾಡಿದೆ.

“ಈಗ ಜನರು ನಮಗೆ ನಾವು ನೀಡಿದ್ದ ಆಶ್ವಾಸನೆಗಳನ್ನು ನೆನಪಿಸುತ್ತಿದ್ದಾರೆ. ಆದರೆ ಜನರು ಭರವಸೆಗಳನ್ನು ನೆನಪಿಸುವಾಗ ನಮಗೆ ನಗು ಬರುತ್ತದೆ. ನಕ್ಕು ಮುಂದೆ ಸಾಗುತ್ತೇವೆ” ಎಂದು ನಿತಿನ್ ಗಡ್ಕರಿ ಈ ವಿಡಿಯೋದಲ್ಲಿ ಹೇಳಿದ್ದಾರೆ.. ಆದರೆ ಈ ವಿಡಿಯೋಣ ಅಸಲಿಯತ್ತೇನು? ಇದರ ಸತ್ಯಾಸತ್ಯತೆಯೇನು? ಎಂಬುದನ್ನು ನಿತಿನ್ ಗಡ್ಕರಿ ಆಗಲಿ, ಬಿಜೆಪಿ ಪಕ್ಷವಾಗಲಿ ಯಾವುದೇ ಹೇಳಿಕೆ ನೀಡಿಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top