ಮನೋರಂಜನೆ

ಪ್ರೇಮ್ಸ್ ಒತ್ತಾಯಕ್ಕೆ ಮಣಿದ ಮಲ್ಟಿಪ್ಲೆಕ್ಸ್ ಮಾಲೀಕರು- ನಿರ್ಮಾಪಕರ ಪಾಲಿಗೆ ಹೀರೋ ಆದ ‘ದಿ ವಿಲನ್’

‘ದಿ ವಿಲನ್’ ಸದ್ಯ ಗಾಂಧಿನಗರದ ಗಲ್ಲಿ ಗಲ್ಲಿಯಲ್ಲೂ ಹವಾ ಎಬ್ಬಿಸಿರೋ ಸಿನಿಮಾ., ಆರು ವರ್ಷಗಳ ನಂತರ ನಿರ್ದೇಶನಕ್ಕೆ ಮರಳಿರುವ ಪ್ರೇಮ್ ‘ದಿ ವಿಲನ್’ ಸಿನಿಮಾ ಮೇಲಿನ ನಿರೀಕ್ಷೆಯನ್ನು ದಿನೇ ದಿನೇ ಹೆಚ್ಚಿಸುತ್ತಲೇ ಇದ್ದಾರೆ.. ಈಗಾಗಲೇ ಬಿಡುಗಡೆಯಾಗಿರೋ ಟೀಸರ್ ಮತ್ತು ಹಾಡುಗಳ ಅಬ್ಬರ ಕಂಡು ಅನೇಕರು ಬೆಚ್ಚಿಬಿದ್ದಿದ್ದಾರೆ.. ಸೆಟ್ಟೇರಿದಾಗಿನಿಂದಲೂ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಾಗುತ್ತಲೇ ಇರುವ ವಿಲನ್ ಚಿತ್ರ ಇದೆ ತಿಂಗಳ 18ರಂದು ತೆರೆಕಾಣಿಯುತ್ತಿದೆ. ಇನ್ನು 11ರಿಂದ ಚಿತ್ರದ ಟಿಕೆಟ್ ಗಳು ಕೂಡ ಥಿಯೇಟರ್ ಗಳಲ್ಲಿ ದೊರೆಯಲಿವೆ..

 

 

ನಿರ್ದೇಶಕ ಪ್ರೇಮ್ ಎಂದರೆ ಹಾಗೆ, ಏನನ್ನೇ ಮಾಡಿದರು ಕೊಂಚ ಸೆನ್ಸೇಷನ್ ಆಗಿ ಮಾಡುವುದು ಅವರ ಜಾಯಮಾನ ಅದು ಅವರ ಬಹುನಿರೀಕ್ಷಿತ ದಿ ವಿಲನ್ ಚಿತ್ರದಲ್ಲೂ ಮುಂದುವರೆದಿದೆ.. ಈ ಮದ್ಯೆ ಮಲ್ಟಿಪ್ಲೆಕ್ಸ್ ಮಾಲೀಕರೊಂದಿಗೆ ಹೆಚ್ಚುವರಿ ಲಾಭಾಂಶಕ್ಕೆ ಮನವಿ ಮಾಡಿದ್ದ ಚಿತ್ರತಂಡ, 60:40 ಲಾಭಾಂಶಕ್ಕೆ ಒಪ್ಪಿಸಿದೆ. ಪ್ರೇಮ್ ಮನವಿಗೆ ಮನವಿಗೆ ಎಲ್ಲಾ ಮಲ್ಟಿಪ್ಲೆಕ್ಸ್ ಮಾಲೀಕರು ಒಪ್ಪಿಕೊಂಡಿದ್ದಾರೆ.

ಈ ಮೊದಲು ಪ್ರದರ್ಶನದ ಒಟ್ಟು ಲಾಭಾಂಶವನ್ನು ಮಲ್ಟಿಪ್ಲೆಕ್ಸ್ ಮಾಲೀಕರು, ನಿರ್ಮಾಪಕರು ಸಮನಾಗಿ ಹಂಚಿಕೊಳ್ತಿದ್ದರು. 50:50 ಲಾಭಾಂಶದಂತೆ ಹಂಚಿಕೊಳ್ಳುತ್ತಿದ್ದರು. ಇದರಿಂದ ಮಲ್ಟಿಪ್ಲೆಕ್ಸ್ ಮಾಲೀಕರಿಗೆ ಜಾಸ್ತಿ ಲಾಭ ಆಗುತ್ತಿದ್ದು ಕೋಟಿಗಟ್ಟಲೆ ಖರ್ಚು ಮಾಡಿದ ನಿರ್ಮಾಪಕರಿಗೆ ನಷ್ಟವೇ ಆಗುತ್ತಿದೆ. ಆದ್ದರಿಂದ ಮಲ್ಟಿಪ್ಲೆಕ್ಸ್​​ಗಳಿಂದ ಬರುವ ಲಾಭದಲ್ಲಿ ಶೇಕಡ 50 ಕ್ಕಿಂತಲೂ ಹೆಚ್ಚು ನಿರ್ಮಾಪಕರಿಗೆ ನೀಡಬೇಕೆಂದು ‘ದಿ ವಿಲನ್’ ಚಿತ್ರದ ನಿರ್ದೇಶಕ ಪ್ರೇಮ್ ಮನವಿ ಮಾಡಿಕೊಂಡಿದ್ದರು. ಈ ಮನವಿಗೆ ಮಲ್ಟಿಪ್ಲೆಕ್ಸ್​ ಮಾಲೀಕರು ಒಪ್ಪಿಕೊಂಡಿದ್ದಾರೆ. 60:40 ರಂತೆ ಹೆಚ್ಚುವರಿ ಲಾಭಾಂಶ ನೀಡೋಕೆ ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಅಂದಹಾಗೆ ಸಿನಿಮಾದ ಅಡ್ವಾನ್ಸ್ ಬುಕಿಂಗ್ಸ್ ಅಕ್ಟೋಬರ್ 11ರಿಂದ ಆರಂಭಗೊಳ್ಳಲಿದೆ. ಚಿತ್ರ ಬಿಡುಗಡೆಯಾಗಲು ಎರಡು ವಾರಗಳು ಬಾಕಿ ಇದ್ದರೂ ಕೂಡಾ ಅಭಿಮಾನಿಗಳೆಲ್ಲ ಈಗಾಗಲೇ ತಯಾರಿ ಆರಂಭಿಸಿದ್ದಾರೆ. ಮುಖ್ಯವಾದ ಥೇಟರುಗಳು ಸೇರಿದಂತೆ ಎಲ್ಲ ಕಡೆಗಳಲ್ಲಿಯೂ ‘ದಿ ವಿಲನ್’ ಚಿತ್ರಕ್ಕೆ ಅದ್ದೂರಿ ಸ್ವಾಗತ ಕೋರಲು ತಯಾರಿಗಳು ಭರದಿಂದ ಸಾಗುತ್ತಿವೆ. ಇದಕ್ಕಾಗಿ ಭಾರೀಗಾತ್ರದ ಕಟೌಟುಗಳೂ ಸೇರಿದಂತೆ ಡಿಫರೆಂಟಾದ ಬ್ಯಾನರುಗಳೂ ಸಿದ್ಧಗೊಳ್ಳುತ್ತಿವೆ.

ದಿ ವಿಲನ್ ಬಗ್ಗೆ ಹೇಳ್ಬೇಕಂದ್ರೆ ಚಿತ್ರದಲ್ಲಿ ಕಿಚ್ಚ ಸುದೀಪ್ ಮತ್ತು ಶಿವಣ್ಣನಿಗೆ ನಾಯಕಿಯಾಗಿ ಬ್ರಿಟಿಷ್ ಬ್ಯೂಟಿ ಆಮಿ ಜಾಕ್ಸನ್ ನಟಿಸುತ್ತಿದ್ದಾರೆ,,ಚಿತ್ರಕ್ಕೆ ಸಿ.ಮನೋಹರ್ ಬಂಡವಾಳ ಹಾಕಿದ್ದು ಅರ್ಜುನ್ಯ ಜನ್ಯರವರು ಸಂಗೀತ ಸಂಯೋಜನೆ ಮಾಡಿದ್ದಾರೆ…ಉಳಿದಂತೆ ಗಿರಿಗೌಡ ಅವರ ಕ್ಯಾಮರಾ ಕೈಚಳಕ ಚಿತ್ರಕ್ಕಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top