ಮನೋರಂಜನೆ

ತೆಲುಗು ನಾಡಿನಲ್ಲಿ ಬಿಕ್ಕಿ ಬಿಕ್ಕಿ ಅತ್ತ ರಶ್ಮಿಕಾ ಮಂದಣ್ಣ,ಯಾಕೆ ಗೊತ್ತಾ

ಕಿರಿಕ್ ಪಾರ್ಟಿ ಎಂಬ ‘ಕನ್ನಡ’ ಸಿನಿಮಾ ಮೂಲಕವೇ ನೇಮು ಫೇಮು ಗಳಿಸಿಕೊಂಡು ಆನಂತರ ‘ಅಪ್ಪಟ ತೆಲುಗು’ ಹುಡುಗಿಯಂತೆ ಮಿಂಚುತ್ತಿರುವಾಕೆ ರಶ್ಮಿಕಾ ಮಂದಣ್ಣ. ಒಂದೇ ಒಂದು ಚಿತ್ರದ ಮೂಲಕ ನಂಬರ್ ಒನ್ ನಟಿಯರನ್ನೇ ಮೀರಿಸುವಂತೆ ಈಕೆ ಮಿರುಗಿದ ರೀತಿ ನಿಜಕ್ಕೂ ಅಚ್ಚರಿ ಹುಟ್ಟಿಸುವಂತಿದೆ. ಆ ನಂತರದಲ್ಲಿ ಕನ್ನಡದ ದೊಡ್ಡ ದೊಡ್ಡ ಸ್ಟಾರ್’ಗಳ ಸಿನಿಮಾದಲ್ಲಿ ನಟಿಸುವ ಅವಕಾಶವನ್ನು ಗಿಟ್ಟಿಸಿಕೊಂಡಿದ್ದ ಕಿರಿಕ್ ಹುಡುಗಿ ಕನ್ನಡಕ್ಕಿಂತ ತೆಲುಗಿನಲ್ಲೇ ಹೆಚ್ಚು ಬ್ಯುಸಿಯಾಗಿದ್ದಾಳೆ.ರಶ್ಮಿಕಾ ಮಂದಣ್ಣ ತೆಲುಗಿನಲ್ಲಿ ನಟಿಸಿದ ‘ಗೀತಾ ಗೋವಿಂದಂ’ ಚಿತ್ರ ಬ್ಲಾಕ್‍ಬಸ್ಟರ್ ಹಿಟ್ ಆಗಿದೆ,ಗೀತಾ ಗೋವಿಂದಂ ಸಿನಿಮಾದಲ್ಲಿ ವಿಜಯ್ ಹಾಗೂ ರಶ್ಮಿಕಾ ಜೊತೆಗಿನ ಕಾಂಬಿನೇಷನ್’ಗೆ ತೆಲುಗು ಮಂದಿ ಫಿದಾ ಆಗಿದ್ದಾರೆ

ಈಗ ಸ್ಯಾಂಡಲ್‍ವುಡ್ ಮತ್ತು ಟಾಲಿವುಡ್ ನ ಬೇಡಿಕೆಯ ನಟಿ ರಶ್ಮಿಕಾ ಮಂದಣ್ಣ ಫ್ಯಾನ್ ಫಾಲೋಯಿಂಗ್ ದಿನೇ ದಿನೇ ಗಗನ ಮುಟ್ಟುತ್ತಿದೆ,ಸಾಕಷ್ಟು ಅಭಿಮಾನಿಗಳ ಬಳಗವನ್ನೇ ಹೊಂದಿರುವ ರಶ್ಮಿಕಾಗೆ ಹುಡುಗರು ಮಾತ್ರವಲ್ಲಾ ಹುಡುಗಿಯರು ಕೂಡ ರಶ್ಮಿಕಾಗೆ ಫುಲ್ ಫಿದಾ ಆಗಿದ್ದಾರೆ ,ಈ ನಡುವೆಯ ರಶ್ಮಿಕಾಳ ಫ್ಯಾಷನೆಬಲ್ ಲುಕ್​, ಸ್ಮೈಲ್​ಗೆ ಬಿದ್ದವರ ಸಂಖ್ಯೆ ಏನು ಕಮ್ಮಿ ಇಲ್ಲ.

 

 

 

ರಶ್ಮಿಕಾ ಮಂದಣ್ಣ ತೆಲುಗಿನಲ್ಲಿ ನಟಿಸಿದ ‘ಗೀತಾ ಗೋವಿಂದಂ’ ಚಿತ್ರದ ಶೂಟಿಂಗ್‌ ವೇಳೆ ಸೆಟ್‌ನಲ್ಲಿ ತೀವ್ರ ಆಘಾತಕ್ಕೊಳಗಾಗಿ ಬಿಕ್ಕಿ ಬಿಕ್ಕಿ ಅತ್ತ ಸುದ್ದಿ ತಡವಾಗಿ ಬೆಳಕಿಗೆ ಬಂದಿದೆ.ಈ ಬಗ್ಗೆ ಸ್ವತಃ ರಶ್ಮಿಕಾ ಮಾತನಾಡಿದ್ದಾರೆ ,
ಎಂದಿನಂತ ಸಿನಿಮಾ ಸೆಟ್‌ಗೆ ಹೋಗಿ. ಶೂಟಿಂಗ್‌ ಆರಂಭವಾಗಿ ಇನ್ನೂ ಒಂದು ವಾರ ಆಗಿತ್ತಂತೆ ಅಷ್ಟೇ . ಬೆಳಗ್ಗೆ 6 ಗಂಟೆಗೇ ಸೆಟ್‌ಗೆ ಹೋಗಿ, ವಧುವಿನ ಕಾಸ್ಟ್ಯೂಮ್‌ ಹಾಕಿಕೊಳ್ಳಬೇಕಿತ್ತು. ಸೆಟ್‌ಗೆ ಹೋದ ತಕ್ಷಣ ಎಲ್ಲರನ್ನೂ ಮಾತನಾಡಿ ವಿಶ್‌ ಮಾಡುವುದು ರಶ್ಮಿಕಾ ಅಭ್ಯಾಸವಂತೆ . ಆ ದಿನವೂ ಹಾಗೆಯೇ ಮಾಡಿದ್ದಾರೆ. ಆದರೆ ಯಾರು ರಶ್ಮಿಕಾ ಜೊತೆ ಮಾತನಾಡಲಿಲ್ಲವಂತೆ . ದಿನವೂ ತನ್ನೊಂದಿಗೆ ನಗುನಗ್ತಾ ಮಾತಾಡ್ತಾ ಇದ್ದವರೆಲ್ಲ ಹಾಗೆ ಮಾಡಿದ್ದು ರಶ್ಮಿಕಾಗೆ ಆಘಾತ ಉಂಟು ಮಾಡಿತ್ತಂತೆ. ತಕ್ಷಣ ನಿರ್ದೇಶಕ ಪರಶುರಾಮ್‌ ಅವರ ಬಳಿ ಹೋಗಿ . ಅವರು ಸಹ ಒನ್‌ ವರ್ಡ್‌ ಆನ್ಸರ್‌ ಮಾಡಿದರಂತೆ ,ರಶ್ಮಿಕ್ಗೆ ನಿಜಕ್ಕೂ ನೋವಾಯಿತ್ತಂತೆ . ಮೇಕಪ್‌ಮೆನ್‌ಗೆ ಕೇಳಿದರಂತೆ ಏನಾಗಿದೆ ಇಲ್ಲಿ ಅಂತ. ಅವರು ಕೂಡ ಏನೂ ಗೊತ್ತಿಲ್ಲ ಮೇಡಂ ಅಂತ ಹೇಳಿದ್ದಾರೆ . ರಶ್ಮಿಕಾ ಗೆ ತಾನು ಏನಾದ್ರೂ ತಪ್ಪು ಮಾಡಿದ್ನಾ ಅನ್ನಿಸೋಕೆ ಶುರು ಆಯ್ತುತ್ತಂತೆ . ನನ್ನ ಮೂಡ್‌ ಫುಲ್‌ ಅಪ್ಸೆಟ್‌ ಆಯ್ತು. ಮೇಕಪ್‌ ಮುಗಿಸಿ ಹೊರಬಂದರೂ ಯಾರೊಬ್ಬರೂ ತನ್ನ ಜತೆ ಮಾತನಾಡಲಿಲ್ಲವಂತೆ . ತಾನು ಏನು ಮಾಡುವುದು ತಿಳಿಯದೇ ನಿರ್ದೇಶಕರ ಬಳಿ ಹೋಗಿ, ‘ಸರ್‌, ತನ್ನಗೆ ಮೂಡ್‌ ಇಲ್ಲ. ಹೊರಡುತ್ತೇನೆ ‘ ಎಂದರೆ ಅವರು ಸೀರಿಯಸ್‌ ಆಗಿ ರಶ್ಮಿಕಾ ಮುಖ ನೋಡಿದ್ರಂತೆ ಕ್ಯಾರಾವನ್‌ಗೆ ಹೋಗಿ ಬೇಸರದಲ್ಲಿ ಕುಳಿತುಬಿಟ್ಟರಂತೆ .

ಆಮೇಲೆ ವಿಜಯ್‌ ದೇವರಕೊಂಡ ಬಂದು ಇದೆಲ್ಲವೂ ಪಕ್ಕಾ ಪ್ಲ್ಯಾನ್‌. ನಿಮ್ಮನ್ನು ಬಕ್ರಾ ಮಾಡಲು ಮಾಡಿದ ಐಡಿಯಾ ಎಂದು ಹೇಳಿದರಂತೆ . ರಶ್ಮಿಕಾ ಗೆ ತುಂಬಾ ಅಳು ಬಂದುಬಿಡ್ತುತ್ತಂತೆ . ಜೋರಾಗಿ ಬಿಕ್ಕಿ ಬಿಕ್ಕಿ ಅತ್ತುಬಿಟ್ಟರಂತೆ ‘ ಎಂದು ಆ ಸಂದರ್ಭವನ್ನು ವಿವರಿಸಿದರು ರಶ್ಮಿಕಾ. ರಶ್ಮಿಕಾ ಮಂದಣ್ಣರನ್ನು ಸೆಟ್‌ನಲ್ಲಿ ಯಾರೊಬ್ಬರೂ 15 ನಿಮಿಷ ಮಾತನಾಡಿಸದೇ ಹೋದರೆ ಆಕೆ ಅತ್ತು ಬಿಡುತ್ತಾರೆ ಎಂದು ನಿರ್ದೇಶಕ ಪರುಶುರಾಮ್‌ ಅವರಿಗೆ ಯಾರೋ ಹೇಳಿದ್ದರಂತೆ. ಅದನ್ನು ಟೆಸ್ಟ್‌ ಮಾಡಲೇಬೇಕು ಎಂದು ಇಡೀ ಚಿತ್ರತಂಡ ಐಡಿಯಾ ಮಾಡಿತ್ತು. ಇದಾದ ಮೇಲೆ ಪರಶುರಾಮ್‌ ಕೂಡ ತಮಗೆ ಸಮಾಧಾನ ಮಾಡಿ, ಬೇಸರ ಮಾಡಿದ್ದಕ್ಕೆ ಸಾರಿ ಕೇಳಿದರು ಎಂದು ರಶ್ಮಿಕಾ ತಿಳಿಸಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top