ಹೆಚ್ಚಿನ

ಆಗ ತಾನೇ ಮೈ ನೆರೆದ ಹೆಣ್ಮಕ್ಳಳಿಗೆ ಗುಡಿಸಲು ವಸಗೆ ಹಾಕುತ್ತಾರೆ ಅದರ ಹಿಂದಿನ ವೈಜ್ಞಾನಿಕ ಕಾರಣ ಏನು ಅಂತ ಗೊತ್ತಾ

ಆಗ ತಾನೇ ಮೈ ನೆರೆದ ಹುಡುಗಿಗೆ ಗುಡಿಸಲು ವಸಗೆ ಹಾಕುವುದರ ಹಿಂದಿನ ವೈಜ್ಞಾನಿಕ ಕಾರಣಗಳು .
ಹೆಣ್ಣುಮಕ್ಕಳು ಸುಮಾರು 11 -12 ವಯಸ್ಸಿನ ಹೊತ್ತಿಗೆ ಸಾಮಾನ್ಯವಾಗಿ ಮೈ ನೆರೆಯುತ್ತಾರೆ , ನಮ್ಮಲ್ಲಿ ಅನೇಕರಿಗೆ ಗೊತ್ತಿರುವ ಹಾಗೆ ಮೈ ನೆರೆಯುವುದು ಒಂದು ಸಹಜ ಕ್ರಿಯೆ .ಕೆಲವು ಹೆಣ್ಣು ಮಕ್ಕಳು 8-9 ವಯಸ್ಸಿಗೆ ಮೈ ನೆರೆಯುತ್ತಾರೆ ,ಹಾರ್ಮೋನ್ಗಳ ಬದಲಾವಣೆ ತಾವಿರುವ ವಾತಾವರಣ , ದೇಹದ ರೀತಿ ಇನ್ನು ಅನೇಕ ಅಂಶಗಳು ಬೇಗ ಮೈ ನೆರೆಯುವುದಕ್ಕೂ ಮತ್ತು ನಿಧಾನವಾಗಿ ಮೈ ನೆರೆಯುವುದಕ್ಕೂ ಕಾರಣವಾಗುತ್ತದೆ .

ವಿಜ್ಞಾನದ ಪ್ರಕಾರ ಹೇಳಬೇಕಾದರೆ ಹೆಣ್ಣು ಮಗು ಒಂದು ಮೊದಲಬಾರಿಗೆ ಋತು ಸ್ರಾವ ಅನುಭವಿಸಿರುತ್ತಾಳೆ ಅಂದರೆ ಆಕೆ ಋತುಮತಿಯಾಗಿರುತ್ತಾಳೆ .ಆಕೆಯ ದೇಹವು ಅಂಡಾಣುಗಳನ್ನು ಬಿಡುಗಡೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ಅರ್ಥ .ಅನೇಕ ರಾಜ್ಯಗಳಲ್ಲಿ ಮೈ ನೆರೆದ ಕ್ರಿಯೆಯನ್ನು ಬೇರೆ ಬೇರೆ ವಿಧಗಳಾಗಿ ಆಚರಿಸುತ್ತಾರೆ ಆಂಧ್ರಪ್ರದೇಶದಲ್ಲಿ ಇದನ್ನು ‘ಓಣಿ ‘ ಹಾಕುವ ಕಾರ್ಯಕ್ರಮ ಎಂದು ಕರೆಯುತ್ತಾರೆ .ನಮ್ಮ ಕರ್ನಾಟಕದಲ್ಲಿ ಇದನ್ನು ವಿಧ ವಿಧ ಹೆಸರುಗಳಿಂದ ಕರೆಯುತ್ತಾರೆ ‘ಋತು ಮತಿ ‘ , ‘ಮಗಳು ಕೈಗೆ ಬಂದಳು ‘ , ‘ವಸಗೆ ‘ , ‘ನೆರೆ ಮುಟ್ಟು’ , ಇತ್ಯಾದಿ .

 

 

 

ಮೈ ನೆರೆದ ದಿನ ಮಗಳಿಗೆ ತಲೆಗೆ ಎಣ್ಣೆ ಹಚ್ಚಿ , ಮೈ ಕೈ ಗೆ ಹರಳೆಣ್ಣೆ ತಿಕ್ಕಿ , ಸೀಗೆಕಾಯಿ ತಲೆಗೆ ಹಚ್ಚಿ ಸ್ನಾನ ಮಾಡಿಸುತ್ತಾರೆ .ತಾನು ಮುಟ್ಟಾದಾಗ ಧರಿಸಿದ ಬಟ್ಟೆಗಳನ್ನು ಒಗೆದು ಅಗಸರಿಗೆ ದಾನ ಮಾಡುತ್ತಾರೆ .ನಂತರ ಸಾಮ್ರಾಣಿ ಹೊಗೆ ಹಾಕಿ ಕೂದಲು ಒಣಗಿಸುತ್ತಾರೆ ನಂತರ ಶುಭ್ರವಾದ ಬಟ್ಟೆಯನ್ನು ತೊಡಲು ಕೊಡುತ್ತಾರೆ .

ಆದರೆ ಗುಡಿಸಲು ವಸಗೆ ಯಾಕೆ ಹಾಕುತ್ತಾರೆ ?
ಹೌದು ಇದಕ್ಕೆ ವೈಜ್ಞಾನಿಕ ಕಾರಣ ಇದೆ,ಮೊದಲಿಗೆ ಗುಡಿಸಲು ಕಟ್ಟಲು ಬಳಸುವ ಸಾಮಾನುಗಳನ್ನು ಗಮನಿಸಿಇದರಲ್ಲಿ ಮುಖ್ಯವಾಗಿ ಲಕ್ಕಿ ಸೊಪ್ಪು (ಲಕ್ಕಲಿ ಸೊಪ್ಪು ) , ಹೊಂಗೆ ಸೊಪ್ಪು ಮತ್ತು ಬೇವಿನ ಸೊಪ್ಪನ್ನು ಬಳಸುತ್ತಾರೆ .
ಈ ಮೂರು ಮರದ ರೆಂಬೆ ಕೊಂಬೆ ಎಲೆಗಳನ್ನು ಬಳಸಿಯೇ ಗುಡಿಸಲು ಕಟ್ಟುವುದು , ಈ ಮೂರರಲ್ಲಿ ಯಾವುದಾದರೂ ಎರಡು ಸಿಕ್ಕರೂ ಸಾಕು .ಅದರಲ್ಲೇನಿದೆ ವಿಶೇಷ ಅಂತೀರಾ, ಹೌದು ವಿಶೇಷ ಇದೆ ಲಕ್ಕಿ ಸೊಪ್ಪು ಆಂಟಿ ಬೈಯೋಟಿಕ್ ಗುಣಗಳನ್ನು ಹೊಂದಿದೆ ಅಷ್ಟೇ ಅಲ್ಲದೆ ಆಂಟಿ ಫಂಗಸ್ ಕ್ರಿಮಿ ವಿರೋಧಿಗುಣಗಳಿಂದಾಗಿ ಯಾವುದೇ ಕ್ರಿಮಿ ಕೀಟ ಬಾದೆ , ಸೂಕ್ಶ್ಮಾಣುಗಳ ಬಾದೆ ಇರೋದಿಲ್ಲ , ಸೊಳ್ಳೆ ಅಂತು ಹತ್ರ ಬರೋಲ್ಲ .ಹೊಂಗೆ ಸೊಪ್ಪು ಕೂಡ ತನ್ನ ಕ್ರಿಮಿ ವಿರೋಧಿಗುಣಗಳಿಗೆ ಜನಪ್ರಿಯ .ಇನ್ನು ಬೇವಿನ ಬಗ್ಗೆ ಹೇಳುವ ಹಾಗಿಲ್ಲ ಎಲ್ಲರಿಗು ತಿಳಿದಿದೆ , ಬೇವಿನ ಗಿಡಕ್ಕೆ ಗಾಳಿಯನ್ನು ಶುದ್ದಿ ಮಾಡುವ ಗುಣವಿದೆ .

ಋತುಮತಿಯಾದಾಗ ದೇಹದಲ್ಲಿ ಬಹಳ ಬದಲಾವಣೆಗಳಾಗಿರುತ್ತದೆ , ಮೊದಲ ಬಾರಿಗೆ ಸಾಕಷ್ಟು ಹೊಟ್ಟೆ ನೋವು ,ಜ್ವರದಂತ ಸಾಮಾನ್ಯ ಕಾಯಿಲೆಗಳು ಬರುವ ಸಾಧ್ಯತೆ ಹೆಚ್ಚು .ಅಷ್ಟೇ ಅಲ್ಲದೆ ದೇಹದ ರೋಗ ನಿರೋಧಕ ಶಕ್ತಿ ಕೂಡ ಕಡಿಮೆ ಇರುತ್ತೆ ಅದಕ್ಕೆ ಗುಡಿಸಲು ವಸಗೆ ಹಾಕ್ತಾರೆ .ಬಾಣಂತಿಯರ ಕೊಠಡಿಯ ಕಿಟಕಿ ಹಾಗು ಬಾಗಿಲುಗಳಿಗೂ ಈ ಸೊಪ್ಪುಗಳನ್ನು ಕಟ್ಟುತ್ತಾರೆ .ಆ ಸಮಯದಲ್ಲಿ ತುಪ್ಪ , ಬೆಣ್ಣೆ , ಸಕ್ಕರೆ ಮತ್ತೆ ಒಣ ಕೊಬ್ಬರಿ , ಸಿಹಿ ತಿಂಡಿ ಹಣ್ಣುಗಳನ್ನು ಹೆಚ್ಚಿಗೆ ತಿನ್ನಲು ಕೊಡ್ತಾರೆ .ಈಗ ಹೈಷಾರಾಮಿ ಸಂಭ್ರಮಗಳನ್ನು ಮಾಡುವವರು ಒಮ್ಮೆ ಹಿರಿಯರು ಮಾಡುವ ಸಾಂಪ್ರದಾಯಗಳನ್ನು ನೆನಪಿಟ್ಟುಕೊಂಡು ಮಾಡಬೇಕು , ಸುಮ್ಮನೆ ವಡವೆ ವಸ್ತ್ರಗಳ ದೊಂಬರಾಟ ನಡೆಯಬಾರದು .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top