ಮನೋರಂಜನೆ

ಚಿತ್ರತಂಡದಿಂದಲೇ ನಾಳೆ ಹೊರಬೀಳಲಿದೆ ಕೆಜಿಎಫ್ ಬಿಡುಗಡೆಯ ಅಸಲಿ ವಿಚಾರ.

ಪ್ರೇಕ್ಷಕರ ವಲಯದಲ್ಲಿ ಭಾರಿ ಕುತೂಹಲ ಹುಟ್ಟುಹಾಕಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರದ ರಿಲೀಸ್ ಡೇಟ್ ಫಿಕ್ಸ್ ಆಗಿತ್ತು. ನವೆಂಬರ್ 16ರಂದು ಚಿತ್ರ ದೇಶಾದ್ಯಂತ ಬಿಡುಗಡೆಯಾಗಲಿದೆ ಎಂದು ಸ್ವತಃ ಚಿತ್ರತಂಡವೇ ಅಧಿಕೃತವಾಗಿ ಘೋಷಿಸಿತ್ತು.. “ಆದರೆ ಚಿತ್ರತಂಡ ಹೇಳಿರುವ ದಿನಾಂಕದಂದು ಕೆಜಿಎಫ್ ತೆರೆಕಾಣುತ್ತಿಲ್ಲ, ಚಿತ್ರದ ರಿಲೀಸ್ ಡೇಟ್ ಡಿಸೆಂಬರ್ ಮೂರನೇ ವಾರಕ್ಕೆ ಪೋಸ್ಟ್ ಫೋನ್ ಆಗಿದೆ” ಎಂಬ ಸುದ್ದಿ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಚಿತ್ರದ ಬಗ್ಗೆ ಯಶ್ ಅಭಿಮಾನಿಗಳು ಸೇರಿದಂತೆ ಸಿನಿರಸಿಕರೆಲ್ಲರಲ್ಲೂ ಭಯಂಕರ ನಿರೀಕ್ಷೆ ಮೂಡಿದೆ. ಅದ್ಧೂರಿ ಮೇಕಿಂಗ್, ಪೋಸ್ಟರ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವಂತಹ ಸ್ಟಿಲ್ಲುಗಳ ಮೂಲಕವೇ ಭಾರಿ ಸಂಚಲನ ಸೃಷ್ಟಿಸಿರುವ ಈ ಚಿತ್ರ ಎಬ್ಬಿಸಿರೋ ಅಲೆ ಕಂಡು ಬಹುತೇಕರು ಅಚ್ಚರಿಗೊಂಡಿದ್ದಾರೆ.. ಇಂಥಾ ಮಹೋನ್ನತ ಚಿತ್ರ ರಿಲೀಸ್ ಡೇಟ್ ಫೈನಲೈಸ್ ಆಗಿದ್ದರೂ ಈಗ ಇದ್ದಕ್ಕಿದ್ದಂತೆ ಪೋಸ್ಟ್ ಫೋನ್ ನ್ಯೂಸ್ ಹರಡಲು ಕಾರಣವೇನು ಅಂತೀರಾ? ಮುಂದೆ ಓದಿ..

ಎಲ್ಲರಿಗೂ ಗೊತ್ತಿರೋ ಹಾಗೆ ಕೆಜಿಎಫ್ ಸಿನಿಮಾ ಬಹುಕೋಟಿ ವೆಚ್ಚದ ಸಿನಿಮಾ. ಸುಮಾರು 70ಕೋಟಿ ವೆಚ್ಚದಲ್ಲಿ ಈ ಸಿನಿಮಾ ತಯಾರಾಗಿದ್ದು ಏಕಕಾಲದಲ್ಲಿ ಐದು ಭಾಷೆಗಳಲ್ಲಿ ತೆರೆಗೆ ಬರಲು ಸಿದ್ಧವಾಗಿದೆ.. ಹಾಕಿರೋ ಬಂಡವಾಳ ವಾಪಸ್ಸು ಬರಬೇಕು ಅಂದ್ರೆ ಕೇವಲ ಕರ್ನಾಟಕ ಮಾತ್ರವಲ್ಲದೆ ಹೊರ ರಾಜ್ಯಗಳಲ್ಲೂ ಚಿತ್ರವನ್ನು ಬಿಡುಗಡೆ ಮಾಡಬೇಕು. ಆದರೆ ಚಿತ್ರತಂಡ ಘೋಷಿಸಿದ್ದ ದಿನಾಂಕದಂದು ‘ಕೆಜಿಎಫ್’ ಗೆ ಹೊರ ರಾಜ್ಯಗಳಲ್ಲಿ ಥಿಯೇಟರ್ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಹಾಗಾಗಿ ಸಿನಿಮಾವನ್ನು ಪೋಸ್ಟ್ ಫೋನ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

 

 

ತಮಿಳು ನಟ ಇಳಯದಳಪತಿ ವಿಜಯ್ ಅಭಿನಯದ ‘ಸರ್ಕಾರ್’, ರಜಿನಿಕಾಂತ್ ಅಭಿನಯದ 2.0 (ರೋಬೊ-2) ಮತ್ತು ಆಮಿರ್ ಖಾನ್ ಅಭಿನಯದ ‘ಥಗ್ಸ್ ಆಫ್ ಹಿಂದುಸ್ತಾನ್’ ನಂತಹ ದೊಡ್ಡ ಸಿನಿಮಾಗಳು ‘ಕೆಜಿಎಫ್’ ಫಿಕ್ಸ್ ಮಾಡಿದ್ದ ದಿನಾಂಕದ ಅಕ್ಕಪಕ್ಕದ ವಾರಗಳಲ್ಲೇ ಬಿಡುಗಡೆಯಾಗುತ್ತಿರುವುದರಿಂದ ಯಶ್ ಚಿತ್ರಕ್ಕೆ
ಹೊರ ರಾಜ್ಯಗಳಲ್ಲಿ ಥಿಯೇಟರ್’ಗಳ ಕೊರತೆ ಎದುರಾಗಬಹುದು. ಈ ಹಿನ್ನೆಲೆಯಲ್ಲಿಯೇ ನಿರ್ಮಾಪಕರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ‘ಕೆಜಿಎಫ್’ ಚಿತ್ರದ ಬಿಡುಗಡೆಯನ್ನು ಮುಂದಕ್ಕೆ ಹಾಕಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಈ ಬಗ್ಗೆ ಚಿತ್ರತಂಡ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.. ನಾಳೆ ಈ ಬಗ್ಗೆ ಸ್ವತಃ ಚಿತ್ರ ತಂಡವೇ ಅಧಿಕೃತವಾಗಿ ತಿಳಸಲಿದೆ ಎಂಬ ಮಾತು ಕೇಳಿ ಬರುತ್ತಿವೆ.

ಅಂದಹಾಗೆ ಚಿತ್ರದ ಟ್ರೈಲರ್ ರಿಲೀಸ್ ಕೂಡ ಮುಂದಕ್ಕೆ ಹೋಗಿದೆ ಎಂಬ ಸುದ್ದಿ ಇದ್ದು ಇದೂ ಕೂಡ ಅಧಿಕೃತ ಮಾಹಿತಿಯಲ್ಲ.. ಹೊಂಬಾಳೆ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಉಗ್ರಂ ಖ್ಯಾತಿಯ ಪ್ರಶಾಂತ್ ನೀಲ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದೂ ಕೂಡಾ ಈ ಚಿತ್ರದ ಆಕರ್ಷಣೆಗಳಲ್ಲೊಂದು. ಇನ್ನುಳಿದಂತೆ ರವಿ ಬಸ್ರೂರು ಸಂಗೀತ ನಿರ್ದೇಶನ ಮಾಡುತ್ತಿದ್ದು ಭುವನ್ ಗೌಡ ಅವರ ಕ್ಯಾಮರಾ ಕೈಚಳಕ ಚಿತ್ರಕ್ಕಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top