ಮನೋರಂಜನೆ

ನಿರೀಕ್ಷೆಗೂ ಮೀರಿ ದುಬಾರಿಯಾಯ್ತು ಟಿಕೆಟ್ ದರ- ‘ದಿ ವಿಲನ್’ ಟಿಕೆಟ್​ ಬೆಲೆ ರೂ.1000

ಕನ್ನಡ ಚಿತ್ರರಂಗದಲ್ಲಿ ವಿಪರೀತ ಕ್ರೆಜ್ ಹುಟ್ಟುಹಾಕಿರುವ ‘ದಿ ವಿಲನ್’ ಚಿತ್ರ ಬಿಡುಗಡೆಯಾಗೋ ದಿನಾಂಕ ಪಕ್ಕಾ ಆಗಿದ್ದು ಅಕ್ಟೋಬರ್ ಹದಿನೆಂಟನೇ ತಾರೀಕಿನಂದು ತೆರೆಗೆ ಅಪ್ಪಳಿಸಲಿದೆ..ಸೆಟ್ಟೇರಿ ಎರಡು ವರ್ಷಗಳೇ ಕಳೆಯುತ್ತಾ ಬಂದಿದ್ದರೂ ಪ್ರೇಕ್ಷಕರ ವಲಯದಲ್ಲಿ ವಿಪರೀತ ಕುತೂಹಲ ಕ್ರಿಯೇಟ್ ಮೆಂಟೇನ್ ಮಾಡಿಕೊಂಡು ಬಂದಿರೋ ಪ್ರೇಮ್ ನಿರ್ದೇಶನದ ‘ದಿ ವಿಲನ್’ ಸಿನಿಮಾ ಸುದೀಪ್ ಮತ್ತು ಶಿವಣ್ಣ ಒಟ್ಟಾಗಿ ನಟಿಸಿರುವುದರಿಂದ ಈ ಪಾಟಿ ಸಂಚಲನ ಸೃಷ್ಟಿಸುತ್ತಿದೆ.. ಈಗಾಗಲೇ ಬಿಡುಗಡೆಯಾಗಿರೋ ಟೀಸರ್ ಮತ್ತು ಮೂರು ಹಾಡುಗಳ ಅಬ್ಬರವನ್ನು ಕಂಡು ಇಡೀ ಗಾಂಧಿನಗರವೇ ಬೆಚ್ಚಿಬಿದಿದೆ.

 

 

ಇಂಥಾ ಬಹುನಿರೀಕ್ಷಿತ ‘ದಿ ವಿಲನ್’ ಸಿನಿಮಾ ಟಿಕೆಟ್​ ದರವೂ ದುಬಾರಿಯಾಗಿದೆ. ಮಲ್ಟಿಪ್ಲೆಕ್ಸ್​ಗಳಲ್ಲಿ ‘ದಿ ವಿಲನ್​’ ಟಿಕೆಟ್ ನಿರೀಕ್ಷೆಗೂ ಮೀರಿ ಜಾಸ್ತಿಯಾಗಿದೆ. ದಿ ವಿಲನ್ ಟಿಕೆಟ್ ದರ ಮೊದಲ ವಾರದಲ್ಲಿ 400 ರೂ. 500 ರೂ. 1000 ರೂ. ಆಗುವ ಸಾಧ್ಯತೆ ಇದೆ… ಕನ್ನಡದ ಮಟ್ಟಿಗೆ ಇದು ದೊಡ್ಡ ಸಾಧನೆಯೇ ಸರಿ ಎನ್ನುತ್ತಿದೆ ಗಾಂಧಿನಗರ.. ಈ ಹಿಂದೆ ಕಬಾಲಿ, ಬಾಹುಬಲಿಯಂತಹ ದೊಡ್ಡ ಸಿನಿಮಾಗಳು ರಿಲೀಸ್ ಆದಾಗಲೂ ಮಲ್ಟಿಪ್ಲೆಕ್ಸ್ ಗಳು ಟಿಕೆಟ್ ದರವನ್ನು ತುಂಬಾ ಜಾಸ್ತಿ ಮಾಡಿದ್ದರು..

ಕೇವಲ ಮಲ್ಟಿಪ್ಲೆಕ್ಸ್ ಗಳಲ್ಲಿ ಮಾತ್ರವಲ್ಲದೆ ಸಿಂಗಲ್ ಸ್ಕ್ರೀನ್ ಥಿಯೇಟರ್ ಟಿಕೆಟ್’ಗಳ ಬೆಲೆಯನ್ನೂ ಕೂಡ ಜಾಸ್ತಿ ಮಾಡಿಸಿದ್ದು ವಿಲ್ಲನ್ ಸಿನಿಮಾವನ್ನು ಥಿಯೇಟರ್ ಗಳ ಬಾಲ್ಕನಿಯಲ್ಲಿ ನೋಡಬೇಕಾದರೇ ನೀವು 200 ರು ಪಾವತಿಸಬೇಕಾಗುತ್ತದೆ,.

ಅಂದಹಾಗೆ ಸಿನಿಮಾದ ಅಡ್ವಾನ್ಸ್ ಬುಕಿಂಗ್ಸ್ ಅಕ್ಟೋಬರ್ 11ರಿಂದ ಆರಂಭಗೊಳ್ಳಲಿದೆ. ಚಿತ್ರ ಬಿಡುಗಡೆಯಾಗಲು ಎರಡು ವಾರಗಳು ಬಾಕಿ ಇದ್ದರೂ ಕೂಡಾ ಅಭಿಮಾನಿಗಳೆಲ್ಲ ಈಗಾಗಲೇ ತಯಾರಿ ಆರಂಭಿಸಿದ್ದಾರೆ. ಮುಖ್ಯವಾದ ಥೇಟರುಗಳು ಸೇರಿದಂತೆ ಎಲ್ಲ ಕಡೆಗಳಲ್ಲಿಯೂ ‘ದಿ ವಿಲನ್’ ಚಿತ್ರಕ್ಕೆ ಅದ್ದೂರಿ ಸ್ವಾಗತ ಕೋರಲು ತಯಾರಿಗಳು ಭರದಿಂದ ಸಾಗುತ್ತಿವೆ. ಇದಕ್ಕಾಗಿ ಭಾರೀಗಾತ್ರದ ಕಟೌಟುಗಳೂ ಸೇರಿದಂತೆ ಡಿಫರೆಂಟಾದ ಬ್ಯಾನರುಗಳೂ ಸಿದ್ಧಗೊಳ್ಳುತ್ತಿವೆ.

ದಿ ವಿಲನ್ ಬಗ್ಗೆ ಹೇಳ್ಬೇಕಂದ್ರೆ ಚಿತ್ರದಲ್ಲಿ ಕಿಚ್ಚ ಸುದೀಪ್ ಮತ್ತು ಶಿವಣ್ಣನಿಗೆ ನಾಯಕಿಯಾಗಿ ಬ್ರಿಟಿಷ್ ಬ್ಯೂಟಿ ಆಮಿ ಜಾಕ್ಸನ್ ನಟಿಸುತ್ತಿದ್ದಾರೆ,,ಚಿತ್ರಕ್ಕೆ ಸಿ.ಮನೋಹರ್ ಬಂಡವಾಳ ಹಾಕಿದ್ದು ಅರ್ಜುನ್ಯ ಜನ್ಯರವರು ಸಂಗೀತ ಸಂಯೋಜನೆ ಮಾಡಿದ್ದಾರೆ…ಉಳಿದಂತೆ ಗಿರಿಗೌಡ ಅವರ ಕ್ಯಾಮರಾ ಕೈಚಳಕ ಚಿತ್ರಕ್ಕಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top