ಮನೋರಂಜನೆ

ರಿಲೀಸ್ ಆಯ್ತು ‘ದಿ ವಿಲನ್’ ವಿಡಿಯೋ ಸಾಂಗ್ ಟೀಸರ್- ಯೂಟ್ಯೂಬ್‌ನಲ್ಲಿ ಟ್ರೆಂಡಿಂಗ್.

ಕನ್ನಡ ಚಿತ್ರರಂಗದಲ್ಲಿ ವಿಪರೀತ ಕ್ರೆಜ್ ಹುಟ್ಟುಹಾಕಿರುವ ‘ದಿ ವಿಲನ್’ ಚಿತ್ರ ಬಿಡುಗಡೆಯಾಗೋ ದಿನಾಂಕ ಪಕ್ಕಾ ಆಗಿದ್ದು ಅಕ್ಟೋಬರ್ ಹದಿನೆಂಟನೇ ತಾರೀಕಿನಂದು ತೆರೆಗೆ ಅಪ್ಪಳಿಸಲಿದೆ..ಸೆಟ್ಟೇರಿ ಎರಡು ವರ್ಷಗಳೇ ಕಳೆಯುತ್ತಾ ಬಂದಿದ್ದರೂ ಪ್ರೇಕ್ಷಕರ ವಲಯದಲ್ಲಿ ವಿಪರೀತ ಕುತೂಹಲ ಕ್ರಿಯೇಟ್ ಮೆಂಟೇನ್ ಮಾಡಿಕೊಂಡು ಬಂದಿರೋ ಪ್ರೇಮ್ ನಿರ್ದೇಶನದ ‘ದಿ ವಿಲನ್’ ಸಿನಿಮಾ ಸುದೀಪ್ ಮತ್ತು ಶಿವಣ್ಣ ಒಟ್ಟಾಗಿ ನಟಿಸಿರುವುದರಿಂದ ಈ ಪಾಟಿ ಸಂಚಲನ ಸೃಷ್ಟಿಸುತ್ತಿದೆ.. ಈಗಾಗಲೇ ಬಿಡುಗಡೆಯಾಗಿರೋ ಟೀಸರ್ ಮತ್ತು ಮೂರು ಹಾಡುಗಳ ಅಬ್ಬರವನ್ನು ಕಂಡು ಇಡೀ ಗಾಂಧಿನಗರವೇ ಬೆಚ್ಚಿಬಿದಿದೆ.

ಇಂಥಾ ಬಹುನಿರೀಕ್ಷಿತ ‘ದಿ ವಿಲನ್’ ಸಿನಿಮಾದ ವಿಡಿಯೋ ಸಾಂಗ್ ಮೇಕಿಂಗ್ ಟೀಸರ್ ಅನ್ನು ಚಿತ್ರ ತಂಡ ರಿಲೀಸ್ ಮಾಡಿದ್ದು ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ಬಿಡುಗಡೆ ಆದ ಕೆಲ ಗಂಟೆಗಳಲ್ಲಿ ಸಾಂಗ್ ಟೀಸರ್ ಯೂಟ್ಯೂಬ್‌ನಲ್ಲಿ ಟ್ರೆಂಡ್ ಆಗಿದೆ. ಹಾಡುಗಳಲ್ಲಿ ಸುದೀಪ್, ಶಿವಣ್ಣ, ಆಮಿ ಹಾಡಿನಲ್ಲಿ ಸಖತ್ ಮಿಂಚಿದ್ದಾರೆ. ಹಾಡುಗಳು ಹೇಗಿರುತ್ತೆ ಎಂಬ ಕೂತುಹಲ ಮತ್ತಷ್ಟು ಹೆಚ್ಚಾಗಿದೆ.

 

 

ಅಂದಹಾಗೆ ಸಿನಿಮಾದ ಅಡ್ವಾನ್ಸ್ ಬುಕಿಂಗ್ಸ್ ಅಕ್ಟೋಬರ್ 11ರಿಂದ ಆರಂಭಗೊಳ್ಳಲಿದೆ. ಚಿತ್ರ ಬಿಡುಗಡೆಯಾಗಲು ಎರಡು ವಾರಗಳು ಬಾಕಿ ಇದ್ದರೂ ಕೂಡಾ ಅಭಿಮಾನಿಗಳೆಲ್ಲ ಈಗಾಗಲೇ ತಯಾರಿ ಆರಂಭಿಸಿದ್ದಾರೆ. ಮುಖ್ಯವಾದ ಥೇಟರುಗಳು ಸೇರಿದಂತೆ ಎಲ್ಲ ಕಡೆಗಳಲ್ಲಿಯೂ ‘ದಿ ವಿಲನ್’ ಚಿತ್ರಕ್ಕೆ ಅದ್ದೂರಿ ಸ್ವಾಗತ ಕೋರಲು ತಯಾರಿಗಳು ಭರದಿಂದ ಸಾಗುತ್ತಿವೆ. ಇದಕ್ಕಾಗಿ ಭಾರೀಗಾತ್ರದ ಕಟೌಟುಗಳೂ ಸೇರಿದಂತೆ ಡಿಫರೆಂಟಾದ ಬ್ಯಾನರುಗಳೂ ಸಿದ್ಧಗೊಳ್ಳುತ್ತಿವೆ.

ದಿ ವಿಲನ್ ಬಗ್ಗೆ ಹೇಳ್ಬೇಕಂದ್ರೆ ಚಿತ್ರದಲ್ಲಿ ಕಿಚ್ಚ ಸುದೀಪ್ ಮತ್ತು ಶಿವಣ್ಣನಿಗೆ ನಾಯಕಿಯಾಗಿ ಬ್ರಿಟಿಷ್ ಬ್ಯೂಟಿ ಆಮಿ ಜಾಕ್ಸನ್ ನಟಿಸುತ್ತಿದ್ದಾರೆ,,ಚಿತ್ರಕ್ಕೆ ಸಿ.ಮನೋಹರ್ ಬಂಡವಾಳ ಹಾಕಿದ್ದು ಅರ್ಜುನ್ಯ ಜನ್ಯರವರು ಸಂಗೀತ ಸಂಯೋಜನೆ ಮಾಡಿದ್ದಾರೆ…ಉಳಿದಂತೆ ಗಿರಿಗೌಡ ಅವರ ಕ್ಯಾಮರಾ ಕೈಚಳಕ ಚಿತ್ರಕ್ಕಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top