ಮನೋರಂಜನೆ

ರಾಜ್ ವಂಶದ ಕುಡಿ ದೊಡ್ಮನೆ ಮೊಮ್ಮಗ ವಿನಯ್ ರಾಜ್​​​ಕುಮಾರ್​​ ಫೇವರೆಟ್ ಹೀರೋಯಿನ್ ಯಾರಂತೆ ಗೊತ್ತಾ

ತಮ್ಮ ಚೊಚ್ಚಲ ಸಿನಿಮಾ ಸಿದ್ಧಾರ್ಥದಿಂದ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ವರನಟ ರಾಜಕುಮಾರ್ ಅವರ ಮೊಮ್ಮಗ ವಿನಯ್ ರಾಜಕುಮಾರ್. ‘ರನ್ ಆಂಟನಿ’ ಸಿನಿಮಾ ಮೂಲಕ ಚಿತ್ರರಸಿಕರ ಮನಗೆದ್ದರು.ಸಿನಿಮಾಗಳಲ್ಲಿ ಯಾವ ಸ್ಟಾರ್ ಆದರೂ ಅವರಿಗೂ ತಮ್ಮದೇ ಆದ ಮೆಚ್ಚಿನ ನಟ ನಟಿಯರು ಇರುತ್ತಾರೆ,ಅವರು ಕೂಡ ಅವರ ನೆಚ್ಚಿನ ತಾರೆಯರಿಗೆ ಫ್ಯಾನ್ಸ್ ಆಗಿರುತ್ತಾರೆ ,ಇಲ್ಲಿ ರಾಜ್ ವಂಶದ ಕುಡಿ ದೊಡ್ಮನೆ ಮೊಮ್ಮಗ ವಿನಯ್ರಾಜ್​​​ಕುಮಾರ್​​ಗೆ ಕೂಡಾ ಫೇವರೆಟ್ ಹೀರೋಯಿನ್ ಇದ್ದಾರಂತೆ .

ನಮ್ಮ ರಾಘಣ್ಣನ ಸುಪುತ್ರ ವಿನಯ್ ರಾಜಕುಮಾರ್ ಇಷ್ಟಪಡುವ ನಾಯಕಿ ಯಾರು ಗೊತ್ತಾ ?ಬೇರೆ ಯಾರು ಅಲ್ಲ ಸಿಂಪಲ್ ಬ್ಯೂಟಿ ಹರಿಪ್ರಿಯ ಅಂತೆ,ಹೀಗಂತ ಹೇಳಿದು ಬೇರೆ ಯಾರು ಅಲ್ಲ ಸ್ವಂತ ವಿನಯ್ ರಾಜ್​​​ಕುಮಾರ್,ಹರಿಪ್ರಿಯಾರವರು ನಾಯಕಿಯಾಗಿ ನಟನೆ ಮಾಡುತ್ತಿರುವ ಡಾಟರ್ ಆಫ್ ಪಾರ್ವತಮ್ಮ ಸಿನಿಮಾ ಟೀಸರ್ ಲಾಂಚ್ ಸಮಯದಲ್ಲಿ ವಿನಯ್ ಈ ಮಾತನ್ನು ಹರಿಪ್ರಿಯಾರವರ ಮುಂದೆಯೇ ಹೇಳಿದ್ದಾರೆ .

 

 

 

ವಿನಯ್ ರಾಜಕುಮಾರ್ ಅವರ ಮುಂದಿನ ಚಿತ್ರ ಯಾವುದು ಎಂಬ ಕುತೂಹಲಕ್ಕೆ ಈಗ ಬ್ರೇಕ್ ಬಿದ್ದಿದೆ.ಸದ್ಯ ‘ಅನಂತು ವರ್ಸಸ್‌ ನುಸ್ರತ್‌’ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿ ಆಗಿರುವ ವಿನಯ್ ರಾಜಕುಮಾರ್ ಈಗ ಮತ್ತೊಂದು ಪ್ರಾಜೆಕ್ಟ್ ಕೈಗೆತ್ತಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ‘ಅನಂತು ವರ್ಸಸ್‌ ನುಸ್ರತ್‌’ ಚಿತ್ರದಲ್ಲಿ ವಿನಯ್ ಲಾಯರ್ ಪಾತ್ರದಲ್ಲಿ ಅಭಿನಯ ಮಾಡುತ್ತಿದ್ದಾರೆ. ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ‘ಅನಂತು ವರ್ಸಸ್‌ ನುಸ್ರತ್‌’ ಸಿನಿಮಾ ದಲ್ಲಿ ನಾಯಕಿಯಾಗಿ ಲತಾ ಹೆಗ್ಡೆ ಅವರು ಅಭಿನಯ ಮಾಡುತ್ತಿದ್ದಾರೆ.ವಿನಯ ರಾಜ್ ಕುಮಾರ್ ಅವರ ಮುಂದಿನ ಚಿತ್ರದ ಹೆಸರು ‘ಅಪ್ಪ ಅಮ್ಮ ಪ್ರೀತಿ’. ಈ ಸಿನಿಮಾದಲ್ಲಿ ನಟ ವಿನಯ್ ರಾಜಕುಮಾರ್ ನಾಯಕ ನಟನಾಗಿ ಅಭಿನಯ ಮಾಡಲಿದ್ದಾರೆ, ಶ್ರೀಧರ್ ಅವರು ‘ಅಪ್ಪ ಅಮ್ಮ ಪ್ರೀತಿ’ ನಿರ್ದೇಶನ ಮಾಡಲಿದ್ದಾರೆ. ಎಲ್‌‌.ಎನ್‌.ಎಲ್ ಮೂರ್ತಿ ಅವರು ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಶೀಘ್ರದಲ್ಲಿಯೇ ಈ ಸಿನಿಮಾ ಸೆಟ್ಟೇರಲಿದೆ ಎಂದು ಚಿತ್ರ ತಂಡ ತಿಳಿಸಿದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top