ಮನೋರಂಜನೆ

ಸಂಕಷ್ಟಕ್ಕೆ ಸಿಲುಕಿದ ಹಿರಿಯ ನಟಿ ಲೀಲಾವತಿ ಪುತ್ರ ವಿನೋದ್ ರಾಜ್.

ಹಿರಿಯ ನಟಿ ಲೀಲಾವತಿಯವರ ಪುತ್ರ ನಟ ವಿನೋದ್ ರಾಜ್ ಅವರು ಸಂಕಷ್ಟದಲ್ಲಿ ಸಿಲುಕಿದ್ದು ತಮ್ಮ ಒಡೆತನದ ಆಸ್ತಿಯನ್ನು ಮಾರಾಟ ಮಾಡಲು ಮುಂದಾಗಿದ್ದಾರೆ.. ಲೀಲಾವತಿಯವರ ಹೆಸರಿನಲ್ಲಿರುವ ಚೆನ್ನೈನ ಆಸ್ತಿಯನ್ನು ಮಾರಾಟಮಾಡಲು ವಿನೋದ್ ರಾಜ್ ಮತ್ತು ಲೀಲಾವತಿ ಇಬ್ಬರೂ ಒಮ್ಮತದ ನಿರ್ಧಾರ ಮಾಡಿದ್ದು ಈ ಬಗ್ಗೆ ಸ್ವತಃ ವಿನೋದ್ ಅವರೇ ಖಾಸಗಿ ಸುದ್ದಿವಾಹಿನಿಯೊಂದಿಗೆ ಸ್ಪಷ್ಟಪಡಿಸಿದ್ದಾರೆ.

ವಿನೋದ್ ರಾಜ್ ಕೆಲ ವರ್ಷಗಳಿಂದ ಚಿತ್ರರಂಗದಿಂದ ದೂರ ಉಳಿದು ಕೃಷಿ ಚಟುವಟಿಕೆಯಲ್ಲಿ ವಿನೋದ್ ರಾಜ್ ತೊಡಗಿದ್ದರು. ಆದರೆ ಈಗ ವ್ಯವಸಾಯದಿಂದ ಜೀವನ ನಡೆಸಲು ಕಷ್ಟವಾಗುತ್ತಿದೆ. , ಬೆಲೆ ಏರಿಕೆ ವ್ಯಾಪಾರ ವಹಿವಾಟಿನಲ್ಲಿ ಏರುಪೇರಾಗಿದ್ದು ಕೃಷಿ ಚಟುವಟಿಕೆಯಲ್ಲಿ ತುಂಬಲಾಗದ ನಷ್ಟವಾಗಿದೆ. ಆದ್ದರಿಂದ ಆಸ್ತಿ ಮಾರಾಟ ಮಾಡಲು ನಿರ್ಧಾರ ಮಾಡಿರುವುದಾಗಿ ವಿನೋದ್ ರಾಜ್ ಅವರು ಹೇಳಿದ್ದಾರೆ,

ಚಿತ್ರೋದ್ಯಮದಿಂದ ದೂರ ಉಳಿದು ಕೃಷಿ ಚಟುವಟಿಕೆಯನ್ನೇ ಜೀವನಾಧಾರವನ್ನಾಗಿ ಮಾಡಿಕೊಂಡಿರುವ ವಿನೋದ್ ರಾಜ್ ಅವರು ತೋಟದ ಕೂಲಿಯಾಳುಗಳಿಗೆ ಸಂಬಳ ನೀಡುವುದಕ್ಕಾಗಿ ಇತ್ತೀಚಿಗೆ ಬ್ಯಾಂಕ್‍ನಿಂದ ಹಣವನ್ನು ತೆಗೆದುಕೊಂಡು ಬರುವಾಗ ಅವರನ್ನು ಯಾಮಾರಿಸಿ ಖದೀಮರು ಒಂದು ಲಕ್ಷ ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದ್ದರು. ಈ ಬಗ್ಗೆ ಮಾತನಾಡಿದ ಅವ್ರು “ಕಳ್ಳರ ಬಗ್ಗೆ ಪೊಲೀಸರು ಸೂಕ್ತ ಕ್ರಮಗಳನ್ನ ಜರುಗಿಸಬೇಕು. ಕಳ್ಳತನ ನಡೆದಾಗ ನಮ್ಮ ತಾಯಿ ಆಘಾತಗೊಂಡಿದ್ದರು. ನಂತರ ನನಗೆ ಏನು ತೊಂದರೆ ಆಗಿಲ್ಲ ಎಂದು ಹೇಳಿದಾಗ ಸಮಾಧಾನ ಮಾಡಿಕೊಂಡಿದ್ದಾರೆ” ಎಂದರು

“ನಮ್ಮ ಹಣ ಕಳವಾದ ನಂತರ ಕೂಲಿಕಾರರಿಗೆ ಸಂಬಳ ನೀಡುವುದಕ್ಕಾಗಿ ಹಣ ಹೊಂದಿಸಲು ಸಾಕಷ್ಟು ಕಷ್ಟ ಪಟ್ಟಿದ್ದೇನೆ. ಈಗಿನ ಪರಿಸ್ಥಿತಿಯಲ್ಲಿ ವ್ಯವಸಾಯ ಮಾಡುವುದು ಅಷ್ಟು ಸುಲಭವಲ್ಲ. ಹೀಗಾಗಿ ಚೆನ್ನೈನಲ್ಲಿ ನಮ್ಮ ತಾಯಿ ಮಾಡಿಟ್ಟಿರುವ 5 ಎಕರೆ ತೋಟವನ್ನ ಮಾರಾಟ ಮಾಡಲು ತೀರ್ಮಾನಿಸಿದ್ದೇವೆ.. ನಮ್ಮ ತೋಟದಲ್ಲಿ ಸುಮಾರು 25 ಜನರು ಕೂಲಿಯಾಳುಗಳು ಇದ್ದಾರೆ. ಅವರಿಗೆ ಸಂಬಳ ಕೊಡುವುದಕ್ಕಾಗಿ ಆಸ್ತಿ ಮಾರಬೇಕಿದೆ. ಆಸ್ತಿ ಮಾರಾಟ ಮಾಡದೇ ಇದ್ದರೆ ಜೀವನ ಕಷ್ಟವಾಗುತ್ತಿದೆ” ಎಂದಿದ್ದಾರೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top