fbpx
ಮನೋರಂಜನೆ

ಚಿತ್ರರಂಗದ ಕರಾಳ ಸತ್ಯ ಸ್ಫೋಟ,ಸಭ್ಯ ನಟನಿಂದ ಅತ್ಯಾಚಾರಕ್ಕೊಳಗಾದ ಬರಹಗಾರ್ತಿ

ಸಿನಿಮಾಗಳಲ್ಲಿ ನಟಿಸಲು ಅವಕಾಶ ಕೊಡುವ ಆಮಿಷವೊಡ್ಡಿ ನಟಿಯರನ್ನು ಮಂಚಕ್ಕೆ ಆಹ್ವಾನಿಸುವ ಕಾಯಿಲೆ ಎಲ್ಲ ಚಿತ್ರರಂಗಗಳಿಗೂ ಸಾಂಕ್ರಾಮಿಕವಾಗಿ ಹರಡಿರೋ ವಿಚಾರ ಈಗ ಗುಟ್ಟಾಗಿ ಉಳಿದಿಲ್ಲ. ಇಂಥ ಕಾಸ್ಟ್ ಕೌಚಿಂಗ್‌ನ ಸರಣಿ ಇದೀಗ ಎಲ್ಲೆಲ್ಲಿಯೋ ಬಿಚ್ಚಿಕೊಳ್ಳುತ್ತಿವೆ. ಇತ್ತೀಚಿನ ದಿನಗಳಲ್ಲಿ ದೇಶವ್ಯಾಪಿ ಭಾರಿ ಚರ್ಚೆಯನ್ನು ಹುಟ್ಟುಹಾಕಿರುವ ಇಂತಹ ಅನಿಷ್ಟ ಪಿಡುಗಿನ ವಿರುದ್ಧ ದಕ್ಷಿಣ ಭಾರತ ಚಿತ್ರರಂಗದ ಎಲ್ಲಾ ಭಾಷೆಯ ಪ್ರಸಿದ್ಧ ಯುವ ನಟಿಯರನೇಕರು ತಾವೇ ಅನುಭವಿಸಿದ್ದ ಕಾಸ್ಟಿಂಗ್ ಕೌಚ್ ಮನೋ ವ್ಯಾಕುಲವನ್ನು ಸಾಂದರ್ಭಿಕವಾಗಿ ಬಿಚ್ಚಿಡುತ್ತಿದ್ದಾರೆ.

ಇತ್ತೀಚಿಗೆ ಕಾಸ್ಟಿಂಗ್ ಕೌಚ್ ವಿರುದ್ಧ ರೊಚ್ಚಿಗೆದ್ದು ನಡುರಸ್ತೆಯಲ್ಲಿ ಬಟ್ಟೆಗಳನ್ನು ಬಿಚ್ಚಿ ಅರೆ ಬೆತ್ತಲೆ ಪ್ರತಿಭಟನೆ ನಡೆಸಿದೇಟಿಗೆ ತೆಲುಗು ಚಿತ್ರರಂಗದೊಳಗೆ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗಿ ಇಡೀ ದೇಶದಾದ್ಯಂತ ಸುದ್ದಿಗೆ ಗ್ರಾಸವಾಗಿತ್ತು. ಅದಾದೇಟಿಗೆ ಹಲವು ಚಿತ್ರರಂಗದ ನಟಿಯರೂ ಕೂಡ ಚಿತ್ರರಂಗದಲ್ಲಿ ತಮಗಾಗುತ್ತಿರುವ ಚಿತಾಹಿಂಸೆಯನ್ನು ಒಂದರ ಹಿಂದೊಂದರಂತೆ ಬಿಚ್ಚಿಡುತ್ತಾ ಬಂದಿದ್ದಾರೆ. ಮೊನ್ನೆ ಬಾಲಿವುಡ್ ನಟಿ ತನುಶ್ರೀ ದತ್ತಾ ಅವರು ಈ ಮಂಚಕ್ಕೆ ಕರೆಯುವ ಕಾಯಿಲೆಯ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ್ದಾರೆ.ಇದರ ಹಿಂದೇನೆ ಬರಹಗಾರ್ತಿ ಹಾಗೂ ನಿರ್ಮಾಪಕಿಯೊಬ್ಬರು ಸಾಚಾ ನಟ ಒಬ್ಬನಿಂದ ತಾನು ಅತ್ಯಾಚಾರಕ್ಕೊಳಗಾದ ಬಗ್ಗೆ ಹೇಳಿಕೊಂಡಿದ್ದಾರೆ.

 

ಹೌದು ಬರಹಗಾರ್ತಿ ಹಾಗೂ ನಿರ್ಮಾಪಕಿ ವಿಂತಾ ನಂದಾ ಬಾಲಿವುಡ್‌ನಲ್ಲಿ ಸಭ್ಯ ಎಂದು ಗುರುತಿಸಿಕೊಂಡಿದ್ದ ನಟ ಅಲೋಕ್ ನಾಥ್‌ 19 ವರ್ಷಗಳ ಹಿಂದೆ ನನ್ನನ್ನು ಅತ್ಯಾಚಾರ ಮಾಡಿದ್ದರು ಎಂಬ ಸ್ಫೋಟಕ ಸತ್ಯವನ್ನು ತಮ್ಮ ಫೇಸ್‌ಬುಕ್‌ನಲ್ಲಿ ಹೇಳಿಕೊಂಡಿದ್ದಾರೆ. #Metoo ಅಭಿಯಾನದಲ್ಲಿ ತಾವು ಕೂಡ ಬಲಿಪಶು ಎಂದು ಹೇಳಿಕೊಂಡಿರುವ ವಿಂತಾ ನಂದಾ ಒಬ್ಬ ನಟನಿಂದ ತನ್ನಗೆ ಆದ ಅನ್ಯಾಯದ ಬಗ್ಗೆ ಎಳೆಎಳೆಯಾಗಿ ಫೇಸ್‌ಬುಕ್‌ನಲ್ಲಿ ಹೇಳಿಕೊಂಡಿದ್ದಾರೆ,’1990ರಲ್ಲಿ ತಾರಾ ಧಾರಾವಾಹಿ ಮಾಡುತ್ತಿದ್ದಾಗ ಅದರ ನಾಯಕ ಪಾತ್ರಧಾರಿಯೊಬ್ಬ ಸೀರಿಯಲ್‌ ನಟಿಯೊಬ್ಬರ ಮೇಲೆ ಆಕರ್ಷಿತರಾಗಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಪ್ರಯತ್ನಿಸಿದಾಗ, ಆತನನ್ನು ಹೊರಗಿಟ್ಟಾಗ ಅದು ಚಾನಲ್‌ನವರಿಗೆ ಇಷ್ಟವಾಗದೆ ಧಾರಾವಾಹಿ ಬದಲಾಯಿಸಲು ಹೇಳಿದ್ದರಿಂದ ನಮ್ಮ ನಿರ್ಮಾಣ ಸಂಸ್ಥೆ ಮುಚ್ಚಿ ಹೋಗಿ ಕೆಲಸವಿಲ್ಲದೆ ಕುಡಿತ, ಸಿಗರೇಟ್‌ಗೆ ದಾಸರಾಗಿ ಖಿನ್ನತೆಯಲ್ಲಿ ಇದ್ದ ಸಂದರ್ಭದಲ್ಲಿ ಒಂದೇ ಕ್ಷೇತ್ರದಲ್ಲಿ ದುಡಿಯುವವರ ನಡುವೆ ಹದಗೆಟ್ಟಿದ ಸಂಬಂಧ ಇರಬಾರದೆಂಬ ಸ್ನೇಹಿತರ ಸಲಹೆ ಮೇರೆಗೆ ಆತನೊಂದಿಗೆ ಮತ್ತೆ ಮಾತನಾಡಲು ಆರಂಭಿಸಿದೆ. ಅವರ ಮನೆಗೆ ಹೋಗಿ ಬರ್ತಾ ಇದ್ದೆ, ಅವರ ಹೆಂಡತಿ ಉತ್ತಮ ಸ್ನೇಹಿತೆ ಆಗಿದ್ದರು.

 

 

 

ಒಂದು ದಿನ ಅವರು ಮನೆಗೆ ಬರಲು ಹೇಳಿದರು, ಅಲ್ಲಿಗೆ ಹೋದಾಗ ಅವರ ಹೆಂಡತಿ ಮನೆಯಲ್ಲಿ ಇರಲಿಲ್ಲ. ಮದ್ಯದ ಅಭ್ಯಾಸವಿದ್ದ ನನಗೆ ಅವರು ಕುಡಿಯಲು ಮದ್ಯ ಕೊಟ್ಟರು. ಮದ್ಯ ಕುಡಿದ ಬಳಿಕ, ಅದರಲ್ಲಿ ಏನೋ ಹಾಕಿಕೊಟ್ಟಿದ್ದಾರೆ ಅನಿಸಿತು, ನನಗೇಕೋ ಮತ್ತು ಬರುವಂತೆ ಅನಿಸಲಾರಂಭಿಸಿದಾಗ ಅಲ್ಲಿ ನಿಲ್ಲುವುದು ಸೂಕ್ತವಲ್ಲವೆಂದು ಹೊರಡಲು ನಿರ್ಧರಿಸಿದೆ. ಅಲ್ಲಿಂದ ಹೊರಟ ನನಗೆ ನಡೆಯುವುದು ಕಷ್ಟವಾಯಿತು, ಆದರೂ ನಡೆಯಲಾರಂಭಿಸಿದೆ, ಯಾವುದೇ ಟ್ಯಾಕ್ಸಿ ಸಿಕ್ಕಿರಲಿಲ್ಲ. ಆಗ ಅವರು ಕಾರಿನಲ್ಲಿ ಬಂದು ನನ್ನ ಮನೆಗೆ ಡ್ರಾಪ್‌ ನೀಡುವುದಾಗಿ ಹೇಳಿದರು. ನನಗೂ ಬೇರೆ ಮಾರ್ಗವಿರಲಿಲ್ಲ ಅವರ ಕಾರಿನಲ್ಲಿ ಕುಳಿತೆ.

ಮನೆಗೆ ಬಂದ ಮೇಲೆ ಮದ್ಯವನ್ನು ನನ್ನ ಬಾಯಿಗೆ ಸುರಿದರು, ಮೊದಲೇ ಅಮಲು ಬಂದಿದ್ದ ನನಗೆ ಏನು ನಡೆಯಿತು ಎಂದು ತಿಳಿಯಲಿಲ್ಲ, ಬೆಳಗ್ಗೆ ಎದ್ದಾಗ ಮೈಕೈ ತುಂಬಾ ನೋಯ್ತಾ ಇತ್ತು, ನನ್ನ ಮೇಲೆ ಅತ್ಯಾಚಾರವಾಗಿದೆ ಎಂಬುವುದರ ಅರಿವಾಯಿತು. ಆದರೆ ಈ ದೌರ್ಜನ್ಯದ ಬಗ್ಗೆ ಎಲ್ಲಿಯೂ ಬಾಯಿ ಬಿಡುವ ಧೈರ್ಯ ಇರಲಿಲ್ಲ, ಏಕೆಂದರೆ ಆಗ ಎಲ್ಲವನ್ನು ಕಳೆದುಕೊಂಡು ಜೀವನದಲ್ಲಿ ಸೋತು ನಿಂತಿದ್ದೆ. ಆ ಘಟನೆಯ ಬಳಿಕ 10 ವರ್ಷ ತುಂಬಾ ಖಿನ್ನತೆ ಅನುಭವಿಸಿದೆ, ಸಾಮಾಜಿಕ ತಾಣಗಳು ನನ್ನಲ್ಲಿ ಉತ್ಸಾಹವನ್ನು ಪುಟಿದೆಬ್ಬಿಸಿತು. ಅಲ್ಲಿಂದ ತಿರುಗಿ ನೋಡಲೇ ಇಲ್ಲ, ಇಂದು ನಾನು ಏನಾಗಿದ್ದೇನೆ ನನ್ನ ಸ್ವಪರಿಶ್ರಮದಿಂದ ಆಗಿದ್ದೇನೆ. ಈ ಕ್ಷಣಕ್ಕಾಗಿ 19 ವರ್ಷ ಕಾದಿದ್ದೆ ಎಂದು ಹೇಳಿ ತನ್ನನ್ನು ರೇಪ್‌ ಮಾಡಿದವ ಬಾಲಿವುಡ್‌ನಲ್ಲಿ ‘ಸಂಸ್ಕಾರಿ’ ಎಂದು ಗುರುತಿಸಿಕೊಂಡಿದ್ದಾನೆ ಎಂದು ಹೇಳುವ ಮೂಲಕ ಎಲ್ಲರನ್ನು ಶಾಕ್ ಆಗುವ ಹಾಗೇ ಮಾಡಿದ್ದಾರೆ .

ಬರಹಗಾರ್ತಿ ಹಾಗೂ ನಿರ್ಮಾಪಕಿ ವಿಂತಾ ನಂದಾರ ಈ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಅಲೋಕ್‌ ನಾಥ್‌ ರೇಪ್ ಆಗಿದ್ದರೆ ಅದು ಬೇರೆಯವರು ಮಾಡಿರಬಹುದು, ನಾನು ಇದರ ಬಗ್ಗೆ ಏನೂ ಮಾತನಾಡುವುದಿಲ್ಲ, ಇದನ್ನು ಎಳೆಯಲು ನಂಗಿಷ್ಟವಿಲ್ಲ, ಒಂದು ಕಾಲದಲ್ಲಿ ನನ್ನ ಆತ್ಮೀಯ ಸ್ನೇಹಿತೆ ಆಗಿದ್ದಳು. ಇಂದು ಆಕೆ ಏನು ಆಗಿದ್ದಾರೋ ಅದಕ್ಕೆ ನಾನು ಕಾರಣ’ ಎಂದಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top