ಹೆಚ್ಚಿನ

ಹೆಣ್ಮಕ್ಳು ಸ್ಮಶಾನಕ್ಕೆ ಹೋಗ್ಬಾರ್ದು ಅಂತ ಯಾಕೆ ಹೇಳ್ತಾರೆ ಗೊತ್ತಾ

ಬಹುಶಃ ನಾವೆಲ್ಲರು ಒಮ್ಮೆಯಾದರು ಅಂತ್ಯ ಸಂಸ್ಕಾರಕ್ಕೆ ಹೋಗಬೇಕಾದಾಗ, ಹೆಣ್ಮಕ್ಕಳನ್ನು ಸ್ಮಶಾನಕ್ಕೆ ಕರೆತರದೆ ಇರುವುದನ್ನು ನಾವು ನೋಡಿರುತ್ತೇವೆ. ಅದಕ್ಕೆ ಕಾರಣ ಏನು ಯಾಕೆ? ಎಂದು ಎಂಬುದರ ಕುರಿತು ಎಂದಾದರು ಯೋಚಿಸಿದ್ದೀರಾ? ಚಿಕ್ಕವರಿದ್ದಾಗ ನಾವು ನಮ್ಮ ಹಿರಿಯರನ್ನು ಈ ಕುರಿತು ಪ್ರಶ್ನಿಸಿರುವುದಿಲ್ಲ. ಆದರೆ ದೊಡ್ಡವರದಾ ಮೇಲೆ ಸಹ ಈ ರೀತಿಯ ಸಂದರ್ಭ ನೋಡಿದಾಗ ಈ ಸಂಪ್ರದಾಯ ಕೆಲವೊಂದು ಧರ್ಮಗಳಲ್ಲಿ ಹಾಗೆಯೇ ಮುಂದುವರಿದುಕೊಂಡು ಬಂದಿರುತ್ತದೆ ಎಂದು ಸುಮ್ಮನಾಗಿರುತ್ತಿವಿ
ಹಿಂದೂ ಧರ್ಮದಲ್ಲಿ ಒಟ್ಟು 16 ಸಂಸ್ಕಾರಗಳಿವೆ. ವ್ಯಕ್ತಿ ಅಂತ್ಯಸಂಸ್ಕಾರದ ನಂತ್ರ 16ನೇ ಕ್ರಿಯೆ ಮಾಡಲಾಗುತ್ತದೆ.

 

 

 

ವ್ಯಕ್ತಿ ಸಾವನ್ನಪ್ಪಿದ ನಂತ್ರ ಅಂತಿಮ ಯಾತ್ರೆ ನಡೆಸಿ ಅಂತ್ಯಸಂಸ್ಕಾರ ನಡೆಸಲಾಗುತ್ತದೆ. ಮೃತ ವ್ಯಕ್ತಿ ಶವ ಯಾತ್ರೆ ಹಾಗೂ ಅಂತ್ಯಸಂಸ್ಕಾರದಲ್ಲಿ ಮಹಿಳೆಯರು ಪಾಲ್ಗೊಳ್ಳುವುದಿಲ್ಲ. ಇದಕ್ಕೆ ಹಿಂದೂ ಧರ್ಮದಲ್ಲಿ ಮಹತ್ವದ ಕಾರಣವಿದೆ.ಮಹಿಳೆಯರದು ಎಷ್ಟಾದರು ತಾಯಿ ಹೃದಯಗಳು, ಈ ಹೆಣ್ಣು ಮನಸ್ಸುಗಳು ಬಹುವಾಗಿ ನೊಂದುಕೊಳ್ಳುತ್ತವೆ. ಮನೆಯಲ್ಲಿರುವ ಸದಸ್ಯರು ಸತ್ತರೆ ಅದರಿಂದ ಮನೆ ಮಂದಿ ಚೇತರಿಸಿಕೊಳ್ಳಲು ಹಲವಾರು ದಿನಗಳು ಬೇಕಾಗುತ್ತದೆ. ಹಾಗೂ ಸ್ಮಶಾನದಲ್ಲಿ ಸದಾ ನಕಾರಾತ್ಮಕ ಶಕ್ತಿಯಿರುತ್ತದೆ. ಮಹಿಳೆಯರ ಮನಸ್ಸು ಕೋಮಲವಾಗಿರುವುದ್ರಿಂದ ಸ್ಮಶಾನದಲ್ಲಿ ಓಡಾಡಿದ್ರೆ ಸುಲಭವಾಗಿ ನಕಾರಾತ್ಮ ಶಕ್ತಿ ಅವ್ರನ್ನು ಪ್ರವೇಶ ಮಾಡುತ್ತದೆ. ಜೊತೆಗೆ ಸಾಂಕ್ರಾಮಿಕ ರೋಗಗಳು ಕಾಡುವ ಸಾಧ್ಯತೆ ಹೆಚ್ಚಿರುತ್ತದೆ.

ಸ್ಮಶಾನದಲ್ಲಿ ಮೃತ ಆತ್ಮ ಓಡಾಡುತ್ತಿರುತ್ತದೆ. ಮಹಿಳೆಯರ ದೇಹವನ್ನು ಆತ್ಮಗಳು ಪ್ರವೇಶ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ.ಈ ಎಲ್ಲ ಕಾರಣಗಳಿಂದ ಹೆಣ್ಣು ಮಕ್ಕಳನ್ನು ಸ್ಮಶಾನಕ್ಕೆ ಕರೆದುಕೊಂಡು ಹೋಗುವುದಿಲ್ಲ

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top