fbpx
ಮನೋರಂಜನೆ

ಸೌತ್ ಫಿಲಂ ಇಂಡಸ್ಟ್ರಿ ಎಂಬ ರಂಗಿನ ಪ್ರಪಂಚದಲ್ಲಿ ಒಂದೆರಡಲ್ಲ 3 ಮದುವೆಯಾದ ಸ್ಟಾರ್ ನಟ-ನಟಿಯರು ಇವರೇನೆ

ದಕ್ಷಿಣ ಭಾರತದ ನಟ ನಟಿಯರು ತಮ್ಮ ನಟನೆಯಿಂದ ಮಾತ್ರವಲ್ಲ ಕೆಲವು ಗಾಸಿಪ್ ಹಾಗು ತಮ್ಮ ಮದುವೆಯಿಂದಲೂ ಸಕ್ಕತ್ ಸುದ್ದಿಯಲ್ಲಿದ್ದಾರೆ , ಅದರಲ್ಲೂ ಕೆಲವು ನಟ ನಟಿಯರು ತಮ್ಮ ಎರಡು ಮೂರು ಮದುವೆಗಳಿಂದ ತುಂಬಾನೇ ಫೇಮಸ್ ಆಗಿದ್ದಾರೆ .

ರಾಧಿಕಾ:ನಟಿ ರಾಧಿಕಾ ಪ್ರತಾಪ್ ಕೆ. ಪೊಥೆನ್ ಅವರನ್ನು 1985 ರಲ್ಲಿ ಮದುವೆಯಾಗಿ 1986 ರಲ್ಲಿ ಡೈವೋರ್ಸ್ ಪಡೆದುಕೊಂಡರು , ರಿಚರ್ಡ್ ಹಾರ್ಡಿ ಅವರನ್ನು 1990 ರಲ್ಲಿ ಮದುವೆಯಾಗಿ 1992 ರಲ್ಲಿ ಡೈವೋರ್ಸ್ ಪಡೆದುಕೊಂಡರು,ಆನಂತರ ನಟ ಶರತ್ ಕುಮಾರ್ ಅವರನ್ನು 2001 ರಲ್ಲಿ ಮದುವೆಯಾದರು .

ಲಕ್ಷ್ಮಿ:ಆಗತಾನೆ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಲಕ್ಷ್ಮಿಯವರಿಗೆ ಅವರ ಕುಟುಂಬದವರು ಭಾಸ್ಕರ್ ಎಂಬುವವರ ಜೊತೆ ಮದುವೆ ಮಾಡುತ್ತಾರೆ. 1970 ರ ವೇಳೆ ಲಕ್ಷ್ಮಿಯವರಿಗೆ ಐಶ್ವರ್ಯ ಎಂಬ ಮಗಳು ಕೂಡ ಹುಟ್ಟುತ್ತಾಳೆ. ಆದ್ರೆ ಕಾಲ ಕಳೆದಂತೆ ಸಂಸಾರದಲ್ಲಿ ಜಗಳ ಶುರುವಾಗಿ ಡೈವೋರ್ಸ್ ನಲ್ಲಿ ಅಂತ್ಯವಾಗುತ್ತದೆ, ಭಾಸ್ಕರ್ ರೊಂದಿಗೆ ವಿಚ್ಛೇದನ ಆದ ಒಂದೆರಡು ವರ್ಷದ ಬಳಿಕ ಲಕ್ಷ್ಮಿಯವರು ಮೋಹನ್ ಎಂಬುವವರನ್ನು ಪ್ರೀತಿಸಿ ಮದುವೆಯಾಗಿದ್ದರು ಆದ್ರೆ ಆ ಸಂಭಂದವೂ ಸಹ ಹೆಚ್ಚು ದಿನ ಉಳಿಯಲಿಲ್ಲ. ಮೋಹನ್ ಅವರೂ ಕೂಡ ಲಕ್ಷ್ಮಿ ಅವರಿಂದ ದೂರವಾಗಿಬಿಟ್ಟರು.
ನಂತರ 1988ರ ಆಸುಪಾಸಿನಲ್ಲಿ ನಟ ಮತ್ತು ನಿರ್ದಶಕ ಕೆ.ಎಸ್. ಶಿವಚಂದ್ರನ್ ಎಂಬಾತನಿಗೆ ಮನಸೋತ ಲಕ್ಷ್ಮಿ ಆತನೊಂದಿಗೆ ವಿವಾಹಮಾಡಿಕೊಂಡಿದ್ದರು. ಮದುವೆ ವಯಸ್ಸಿಗೆ ಬಂದ ಮಗಳನ್ನು ಎದುರಿಟ್ಟುಕೊಂಡು ಲಕ್ಷ್ಮಿಯವರಿಗೆ ಮತ್ತೊಂದು ಮದುವೆ ಯಾಕ್ ಬೇಕಿತ್ತು ಎಂದು ಕೆಲವರು ಲಕ್ಷ್ಮಿಯವರ ಹಿಂದೆ ಮಾತನಾಡಿಕೊಂಡಿದ್ದರಂತೆ. ಲಕ್ಷ್ಮಿ ಮೂರನೇ ಮದುವೆ ಮಾಡ್ಕೊಂಡಿದ್ದಕ್ಕೆ ಸ್ವತ: ಲಕ್ಷ್ಮಿಯ ಮಗಳು ಐಶ್ವರ್ಯಾಳೇ “ಇಲ್ಲಿವರೆಗೆ ಸರ್ ಎಂದು ಕರೆಯುತ್ತಿದ್ದ ಶಿವಚಂದ್ರನ್ ನನ್ನು ನಾನು ಹೇಗೆ ಅಪ್ಪ ಎಂದು ಕರೆಯಲಾಗುತ್ತೆ” ಅಂತ ಐಶ್ವರ್ಯಾ ಲಕ್ಷ್ಮಿಯನ್ನು ವಿರೋಧಿಸಲು ಶುರುಮಾಡಿದಳು. ಮಗಳು ಕೂಡ ಲಕ್ಷ್ಮಿಯನ್ನು ವಿರೋಧಿಸಿ ಕೊನೆಗೆ ಒಬ್ಬ ಮುಸ್ಲಿಂ ಯುವಕನನ್ನು ಪ್ರೀತಿಸಿ ತನ್ನ ತಾಯಿ ಲಕ್ಷ್ಮಿಗೆ ಹೇಳದೆ ಮದುವೆಯಾಗಿದ್ದಳು.

ಊರ್ವಶಿ:ನಟಿ ಊರ್ವಶಿ 11 ಅಕ್ಟೋಬರ್ 2000 ರಂದು ಚಲನಚಿತ್ರ ನಟ ಮನೋಜ್ ಕೆ. ಜಯನ್ ಅವರನ್ನು ವಿವಾಹವಾದರು. ಅವರಿಗೆ 2001 ರಲ್ಲಿ ಜನಿಸಿದ ಮಗಳೇ ತೇಜಲಕ್ಷ್ಮಿ, 2008 ರಲ್ಲಿ ಅವರ ಮೊದಲ ಪತಿ ಮನೋಜ್ ಕೆ. ಜಯನ್ ಅವರಿಂದ ವಿಚ್ಛೇದನ ಪಡೆದ ನಂತರ ಚೆನ್ನೈ ಮೂಲದ ಬಿಲ್ಡರ್ ಶಿವಪ್ರಸಾದ್ ಅವರನ್ನು ನವೆಂಬರ್ 2013 ರಲ್ಲಿ ವಿವಾಹವಾದರು. ಆಗಸ್ಟ್ 2014 ರಲ್ಲಿ ಇಹ್ಯಾನ್ ಪ್ರಜಾಪತಿ ಎಂಬ ಹೆಸರಿನ ಮಗು ಜನಸಿತು , ಈ ಮಧ್ಯೆ ಆಕೆಗೆ ಚೆನ್ನೈ ಮೂಲದ ವ್ಯಕ್ತಿಯೊಬ್ಬರ ಜೊತೆ ಲಿವಿಂಗ್ ಟು ಗೇದರ್ ಸಂಬಂಧ ಇರುವುದಾಗಿ ಸುದ್ದಿ ಇತ್ತು .

 

 

 

ಪವನ್ ಕಲ್ಯಾಣ್:ಪವನ್ ಕಲ್ಯಾಣ್ ಮೂರು ಬಾರಿ ಮದುವೆಯಾಗಿದ್ದಾರೆ; 1997 ರಿಂದ 2007 ರವರೆಗೆ ನಂದಿನಿಯವರನ್ನು ಮದುವೆಯಾಗಿದ್ದರು ,2009 ರಿಂದ 2012 ರವರೆಗೆ ರೇಣು ದೇಸಾಯಿಯವರನ್ನು ಪ್ರೀತಿಸಿ ಮದುವೆಯಾಗಿದ್ದರು ರೇಣು ದೇಸಾಯಿಯೊಂದಿಗೆ ಅಕಿರಾ ಎಂಬ ಪುತ್ರ ಹಾಗು ಆಧ್ಯಾ ಪುತ್ರಿ ಇದ್ದಾರೆ,2013 ರಲ್ಲಿ ಅನ್ನಾ ಲೆಜ್ನೆವಾ ಅವರನ್ನು ಮದುವೆಯಾಗಿದ್ದಾರೆ ಇವರಿಗೆ ಮಾರ್ಕ್ ಶಂಕರ್ ಪವನೊವಿಚ್ ಎಂಬ ಹೆಸರಿನ ಒಬ್ಬ ಮಗ ಇದ್ದಾನೆ .

ಶರತ್ ಬಾಬು:ಕನ್ನಡದ ಅಮೃತ ವರ್ಷಿಣಿ ಚಿತ್ರದಲ್ಲಿ ನಟನೆ ಮಾಡಿದ್ದ ಶರತ್ ಬಾಬು ಮೂರು ಮದುವೆ ಆಗಿದ್ದರು ,ತೆಲುಗಿನ ಖ್ಯಾತಿ ನಟಿ ರಮಾ ಪ್ರಭಾ ಅವರನ್ನು 1981ರಿಂದ 1988 ರ ವರೆಗೆ ಮದುವೆಯಾಗಿ ವಿಚ್ಛೇದನ ಪಡೆದ ನಂತರ ಸ್ನೇಹಲತಾ ನಂಬಿಯಾರ್ ಎಂಬುವವರನ್ನು ಮದುವೆಯಾಗಿದ್ದರು 1990 ರಿಂದ 2011 ರ ವರೆಗೆ ಜೊತೆಗಿದ್ದರು , ಆನಂತರ ವಿದೇಶದಲ್ಲಿ ಕೆಲಸ ಮಾಡುವ ಹೆಣ್ಣಿನ ಜೊತೆ ಲಿವಿಂಗ್ ಟು ಗೇದರ್ ಸಂಬಂಧ ಇದೆ ಎಂದು ಹೇಳಿಕೊಂಡಿದ್ದರು .

ಜೆಮಿನಿ ಗಣೇಶನ್:ತಮಿಳು ತೆಲುಗು ಹಾಗು ಮಲಯಾಳಂ,ಹಿಂದಿ ಚಿತ್ರಗಳಲ್ಲಿ ನಟನೆ ಮಾಡಿದ್ದ ಖ್ಯಾತ ನಟ ಜೆಮಿನಿ ಗಣೇಶನ್ ಮೊದಲಿಗೆ 19 ನೇ ವಯಸ್ಸಿನಲ್ಲಿ, ಅಲಮೇಲು ಎಂಬ ಮಹಿಳೆಯನ್ನು ವಿವಾಹವಾದರು ಆನಂತರ ಖ್ಯಾತ ನಟಿಯರಾದ ಪುಷ್ಪವಲ್ಲಿ ಮತ್ತು ಸಾವಿತ್ರಿಯವರನ್ನು ಮದುವೆಯಾಗಿ ಮಕ್ಕಳನ್ನು ಪಡೆದರು , ತಮ್ಮ ನಂತರ 78 ನೇ ವಯಸ್ಸಿನಲ್ಲಿ ಗಣೇಶನ್ 36 ವರ್ಷದ ಜೂಲಿಯಾಳನ್ನು ವಿವಾಹವಾದರು.

 

ಪ್ರಭಾಕರ್ :ಪ್ರಭಾಕರ್ ಕ್ರಿಶ್ಚಿಯನ್ ಧರ್ಮಿ ಆಗಿದ್ದರೂ ಅವರ ಮೊದಲ ಪತ್ನಿಯ ಹೆಸರು ಆಲ್ಫೋನ್ಸಾ ಮೇರಿ ಇವರಿಗೆ ಹುಟ್ಟಿದ ಮಗನ ಹೆಸರು ವಿನೋದ್ ಪ್ರಭಾಕರ್ ಈಗ ಮರಿ ಪ್ರಭಾಕರ್ ಎಂದೇ ಖ್ಯಾತಿಯಾಗಿದ್ದಾರೆ.ಆ ನಂತರ ನಟಿ ಜಯಮಾಲಾ ಅವರನ್ನು ಮದುವೆಯಾಗಿದ್ದು ಇವರಿಗೆ ಹುಟ್ಟಿದ ಮಗಳ ಹೆಸರು ಸೌಂದರ್ಯ.ಅನಂತರ ಮೂರನೇ ಮದುವೆ ಮಾಡಿಕೊಂಡರು ಪ್ರಭಾಕರ್, ಮಲಯಾಳಂ ನಟಿ ಅಂಜು ಅವರೊಂದಿಗೆ ಪ್ರೀತಿಯಲ್ಲಿ ಬಿದ್ದು ಮದುವೆಯಾಗುತ್ತಾರೆ ಇವರಿಗೆ ಅರ್ಜುನ್ ಎಂಬ ಮಗನಿದ್ದಾನೆ.ಇಷ್ಟೆಲ್ಲಾ ಮದುವೆಯನ್ನು ಮಾಡಿಕೊಂಡರು ಆದರೂ ಸಹ ಯಾವೊಂದು ಯಾವೊಂದು ದಾಂಪತ್ಯದ ಸಂಬಂಧ ಕೂಡ ಹೆಚ್ಚು ಕಾಲ ನಿಲ್ಲಲಿಲ್ಲ ಅವರ ಕೊನೆಯ ದಿನಗಳಲ್ಲಿ ಅವರ ಮೊದಲ ಪತ್ನಿಯೆ ಪ್ರಭಾಕರ ಅವರನ್ನು ಹತ್ತಿರದಿಂದ ನೋಡಿಕೊಂಡರು.

ಕಮಲ್ ಹಾಸನ್:1978,ರಲ್ಲಿ 24 ನೇ ವಯಸ್ಸಿನಲ್ಲಿ ಕಮಲ್ ನೃತ್ಯ ಕಲಾವಿದೆ ವಾಣಿ ಗಣಪತಿಯವರನ್ನು ವಿವಾಹವಾದರು ಹತ್ತು ವರ್ಷಗಳ ನಂತರ ವಿಚ್ಛೇದನ ಪಡೆದರು.1988 ರಲ್ಲಿ ಕಮಲ್ ಮತ್ತು ನಟಿ ಸಾರಿಕಾ ತಮ್ಮ ಮೊದಲ ಮಗುವಾದ ಶೃತಿ ಹಾಸನ್ 1986 ರಲ್ಲಿ ಹುಟ್ಟಿದ ನಂತರ 1988 ರಲ್ಲಿ ಮದುವೆಯಾದರು, ಇದಾದ ಬಳಿಕ ನಟಿ ಸಿಮ್ರಾನ್ ಜೊತೆ ಸಂಬಂಧ ಇತ್ತು ಎಂಬ ಸುದ್ದಿಗಳು ಹಬ್ಬಿದವು .ಆನಂತರ ನಟಿ ಗೌತಮಿ ಜೊತೆ ಲಿವಿಂಗ್ ಟು ಗೇದರ್ ಸಂಬಂಧದಲ್ಲಿದ್ದು ಕಳೆದ ವರ್ಷ ಬೇರಾದರು .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top