fbpx
ಮನೋರಂಜನೆ

ಮಲ್ಟಿಪ್ಲೆಕ್ಸ್‌ಗಳಿಂದ ಕನ್ನಡ ಚಿತ್ರಗಳಿಗೆ ಮಹಾ ಮೋಸದ ವಿರುದ್ಧ ನಿರ್ದೇಶಕ ಪ್ರೇಮ್ಸ್ ಅಸಮಾಧಾನ.

ನಿರ್ದೇಶಕ ಪ್ರೇಮ್ಸ್ ಸದ್ಯ ಸಕತ್ ಬ್ಯುಸಿಯಾಗಿದ್ದಾರೆ ಯಾಕೆಂದರೆ ಅವರ ಬಹುನಿರೀಕ್ಷಿತ ದಿ ವಿಲನ್ ಸಿನಿಮಾ ಇನ್ನೇನು ವಾರದೊಪ್ಪತ್ತಿನಲ್ಲಿ ತೆರೆಗೆ ಅಪ್ಪಳಿಸಲಿದೆ. ಈ ನಿಟ್ಟಿನಲ್ಲಿ ಆಗಬೇಕಿರುವ ಪ್ರೊಮೋಷನ್ ಕಾರ್ಯಗಳಲ್ಲಿ ಪ್ರೇಮ್ಸ್ ತಲ್ಲೀನರಾಗಿದ್ದಾರೆ.. ಈ ಮಧ್ಯೆ ಪ್ರೇಮ್ ಅವರು ಮಲ್ಟಿಪ್ಲೆಕ್ಸ್ ಮಾಲೀಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.. ಚಿತ್ರ ರಿಲೀಸ್ ಹತ್ತಿರದಲ್ಲಿರುವಾಗಲೇ ಮಲ್ಟಿಪ್ಲೆಕ್ಸ್ ಗಳ ವಿರುದ್ಧ ಬಿರುದ್ದ ಪ್ರೇಮ್ ತಿರುಗಿ ಬೀಳಲು ಕಾರಣವೇನು ಅಂತೀರಾ? ಮುಂದೆ ಓದಿ.

 

 

ಚಿತ್ರ ಪ್ರದರ್ಶನದ ಒಟ್ಟು ಲಾಭಾಂಶವನ್ನು ಮಲ್ಟಿಪ್ಲೆಕ್ಸ್ ಮಾಲೀಕರು, ನಿರ್ಮಾಪಕರು ಸಮನಾಗಿ ಹಂಚಿಕೊಳ್ತಿದ್ದರು. 50:50 ಲಾಭಾಂಶದಂತೆ ಹಂಚಿಕೊಳ್ಳುತ್ತಿದ್ದರು. ಇದರಿಂದ ಮಲ್ಟಿಪ್ಲೆಕ್ಸ್ ಮಾಲೀಕರಿಗೆ ಜಾಸ್ತಿ ಲಾಭ ಆಗುತ್ತಿದ್ದು ಕೋಟಿಗಟ್ಟಲೆ ಖರ್ಚು ಮಾಡಿದ ನಿರ್ಮಾಪಕರಿಗೆ ನಷ್ಟವೇ ಆಗುತ್ತಿದೆ. ಆದ್ದರಿಂದ ಮಲ್ಟಿಪ್ಲೆಕ್ಸ್​​ಗಳಿಂದ ಬರುವ ಲಾಭದಲ್ಲಿ ಶೇಕಡ 50 ಕ್ಕಿಂತಲೂ ಹೆಚ್ಚು ನಿರ್ಮಾಪಕರಿಗೆ ನೀಡಬೇಕೆಂದು ‘ದಿ ವಿಲನ್’ ಚಿತ್ರದ ನಿರ್ದೇಶಕ ಪ್ರೇಮ್ ಮನವಿ ಮಾಡಿಕೊಂಡಿದ್ದರು.. ಆದರೆ ಪ್ರೇಮ್ ಅವರ ಮನವಿ ಬಗ್ಗೆ ಮಾತನಾಡಿಲ್ಲ. ಇದನ್ನ ಕಂಡು ಬೇಸರಗೊಂಡಿರೋ ಪ್ರೇಮ್‌, ತಮ್ಮ ಟ್ವಿಟ್ಟರ್‌ ಮತ್ತು ಫೇಸ್‌ ಬುಕ್‌ ಪೇಜ್‌ನಲ್ಲಿ ಮಲ್ಟಿಪ್ಲೆಕ್ಸ್‌ಗಳ ವಿರುದ್ಧ ನನ್ನ ಧಿಕ್ಕಾರ ಅಂತ ಗರಂ ಆಗಿದ್ದಾರೆ.

“ಪರಭಾಷಿಕರಿಗೊಂದು ಬೆಲೆ, ಕನ್ನಡಿಗರಿಗೊಂದು ಬೆಲೆ ಕಟ್ತಿರೋ ಮಲ್ಟಿಪ್ಲೆಕ್ಸ್‌ಗಳ(PVR, Cinipolis, inox) ಮಹಾಮೋಸಕ್ಕೆ ನನ್ನ ಧಿಕ್ಕಾರ. ಲೋಕಲ್‌ ಮಾಲ್‌ಗಳ ಮಾಲಿಕರು ಪ್ರದರ್ಶನದ ಪರ್ಸೆಂಟೇಜ್‌ನಲ್ಲಿ ನಿರ್ಮಾಪಕರಿಗೆ ಹೆಚ್ಚು ಶೇರ್‌ ಕೊಡಲು ಒಪ್ಪಿಕೊಂಡಿದ್ದಕ್ಕೆ ಧನ್ಯವಾದ.ವಾಣಿಜ್ಯಮಂಡಳಿಗೆ ಮನವಿ ಸಲ್ಲಿಸಿದ್ರು ಪ್ರಯೋಜನವಾಗ್ಲಿಲ್ಲ. ಉದ್ಯಮದ ಒಳಿತಿಗಾಗಿ ಮಂಡಳಿ ಇರುವುದೇ ಆದರೆ ದಯವಿಟ್ಟು, ಈ ಸಮಸ್ಯೆಯನ್ನ ಕೂಡಲೇ ಬಗೆಹರಿಸಿ.” ಎಂದು ಪ್ರೇಮ್ ಟ್ವೀಟ್ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top