fbpx
ಮನೋರಂಜನೆ

ತನ್ನ ಕರಾಳ ದಿನಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟ ‘ಧಿಮಾಕು’ ನಾಯಕಿ ಫ್ಲೋರಾ ಸೈನಿ

ಸಿನಿಮಾಗಳಲ್ಲಿ ನಟಿಸಲು ಅವಕಾಶ ಕೊಡುವ ಆಮಿಷವೊಡ್ಡಿ ನಟಿಯರನ್ನು ಮಂಚಕ್ಕೆ ಆಹ್ವಾನಿಸುವ ಕಾಯಿಲೆ ಎಲ್ಲ ಚಿತ್ರರಂಗಗಳಿಗೂ ಸಾಂಕ್ರಾಮಿಕವಾಗಿ ಹರಡಿರೋ ವಿಚಾರ ಈಗ ಗುಟ್ಟಾಗಿ ಉಳಿದಿಲ್ಲ. ಇಂಥ ಕಾಸ್ಟ್ ಕೌಚಿಂಗ್‌ನ ಸರಣಿ ಇದೀಗ ಎಲ್ಲೆಲ್ಲಿಯೋ ಬಿಚ್ಚಿಕೊಳ್ಳುತ್ತಿವೆ. ಇತ್ತೀಚಿನ ದಿನಗಳಲ್ಲಿ ದೇಶವ್ಯಾಪಿ ಭಾರಿ ಚರ್ಚೆಯನ್ನು ಹುಟ್ಟುಹಾಕಿರುವ ಇಂತಹ ಅನಿಷ್ಟ ಪಿಡುಗಿನ ವಿರುದ್ಧ ದಕ್ಷಿಣ ಭಾರತ ಚಿತ್ರರಂಗದ ಎಲ್ಲಾ ಭಾಷೆಯ ಪ್ರಸಿದ್ಧ ಯುವ ನಟಿಯರನೇಕರು ತಾವೇ ಅನುಭವಿಸಿದ್ದ ಕಾಸ್ಟಿಂಗ್ ಕೌಚ್ ಮನೋ ವ್ಯಾಕುಲವನ್ನು ಸಾಂದರ್ಭಿಕವಾಗಿ ಬಿಚ್ಚಿಡುತ್ತಿದ್ದಾರೆ.

ಇತ್ತೀಚಿಗೆ ಕಾಸ್ಟಿಂಗ್ ಕೌಚ್ ವಿರುದ್ಧ ರೊಚ್ಚಿಗೆದ್ದು ನಡುರಸ್ತೆಯಲ್ಲಿ ಬಟ್ಟೆಗಳನ್ನು ಬಿಚ್ಚಿ ಅರೆ ಬೆತ್ತಲೆ ಪ್ರತಿಭಟನೆ ನಡೆಸಿದೇಟಿಗೆ ತೆಲುಗು ಚಿತ್ರರಂಗದೊಳಗೆ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗಿ ಇಡೀ ದೇಶದಾದ್ಯಂತ ಸುದ್ದಿಗೆ ಗ್ರಾಸವಾಗಿತ್ತು. ಅದಾದೇಟಿಗೆ ಹಲವು ಚಿತ್ರರಂಗದ ನಟಿಯರೂ ಕೂಡ ಚಿತ್ರರಂಗದಲ್ಲಿ ತಮಗಾಗುತ್ತಿರುವ ಚಿತಾಹಿಂಸೆಯನ್ನು ಒಂದರ ಹಿಂದೊಂದರಂತೆ ಬಿಚ್ಚಿಡುತ್ತಾ ಬಂದಿದ್ದಾರೆ. ಮೊನ್ನೆ ಬಾಲಿವುಡ್ ನಟಿ ತನುಶ್ರೀ ದತ್ತಾ ಅವರು ಈ ಮಂಚಕ್ಕೆ ಕರೆಯುವ ಕಾಯಿಲೆಯ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ್ದಾರೆ.

ಇದರ ಹಿಂದೇನೆ ಕನ್ನಡದ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿರುವ ಫ್ಲೋರಾ ಸೈನಿ ಅಲಿಯಾಸ್ ಆಶಾ ಸೈನಿ ತೆಲುಗು ಹಾಗೂ ತಮಿಳು ಚಿತ್ರಗಳಲ್ಲೂ ನಟಿಸಿ ಸೈ ಅನಿಸಿಕೊಂಡಿದ್ದಾರೆ ,ಫ್ಲೋರಾ ಸೈನಿ ಕನ್ನಡದ ಕೋದಂಡರಾಮ, ಗಿರಿ, ನಮ್ಮಣ್ಣ, ಧಿಮಾಕು, ಸಿಐಡಿ ಈಶ ಸೇರಿದಂತೆ ಮುಂತಾದ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.ಕೆಲ ದಿನ ಗಳಿದ ಮಾಯವಾಗಿದ್ದ ಆಶಾ ಸೈನಿ ದಿಡೀರ್ ಅಂತ ಈ ಫೋಟೋ ಶೇರ್ ಮಾಡುವ ಮೂಲಕ ಒಂದು ಭಯಾನಕ ಸಥ್ಯಯೊಂದನ್ನು ಹೊರಹಾಕಿದ್ದಾರೆ.ಫೇಸ್‍ಬುಕ್‌ನಲ್ಲಿ ತನಗಾದ ಅನ್ಯಾಯವನ್ನು ಹಂಚಿಕೊಂಡಿದ್ದಾರೆ.

 

 

 

ಆಶಾ ಸೈನಿ ಯವರ ಮಾಜಿ ಪ್ರಿಯಕರ, ನಿರ್ಮಾಪಕ ಗೌರಂಗ್ ದೋಷಿ ಅತ್ಯಂತ ಕೆಟ್ಟದಾಗಿ ತನಗೆ ಚಿತ್ರಹಿಂಸೆ ನೀಡಿದ್ದ ಎಂದು ಆರೋಪಿಸಿದ್ದಾರೆ. ತನ್ನ ಮೇಲೆ ಗೌರಂಗ್ ದೋಷಿ ಹಲ್ಲೆ ನಡೆಸಿದಾಗ ಗಾಯಗೊಂಡಿದ್ದ ಫೋಟೋಗಳನ್ನು ಫೇಸ್‍ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ಮುಖದ ಮೇಲೆ ಅಲ್ಲಲ್ಲಿ ಗಾಯದ ಕಲೆಗಳಿರುವ ಫೋಟೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.ಫೋಟೋ ಶೇರ್ ಮಾಡಿ ಆ ದಿನ ಅವರ ಮೇಲೆ ನಡೆದ ಹಲ್ಲೆಯನ್ನು ಬಿಡಿ ಬಿಡಿಯಾಗಿ ಹೇಳಿದ್ದಾರೆ
“ಇಲ್ಲಿರುವುದು ನಾನೇ. 2007ರ ಪ್ರೇಮಿಗಳ ದಿನಾಚರಣೆ ದಿನ ಗೌರಂಗ್ ದೋಷಿ ನನ್ನ ಮೇಲೆ ಪೈಶಾಚಿಕವಾಗಿ ಎರಗಿ ಹಲ್ಲೆ ನಡೆಸಿದ. ಒಂದು ವರ್ಷ ಕಾಲ ನನಗೆ ನರಕ ತೋರಿಸಿದ. ಅದರ ಪ್ರತಿಫಲವಾಗಿ ನನ್ನ ಮುಖದ ಮೇಲೆ ಮಾಯದ ಕಲೆಗಳಾದವು. ಆ ಸಮಯದಲ್ಲಿ ನಾನು ಈ ಸಂಗತಿಯನ್ನು ಬಯಲು ಮಾಡಿದ್ದೆ. ಆದರೆ ನನ್ನನ್ನು ಯಾರೂ ನಂಬುತ್ತಿರಲಿಲ್ಲ. ಯಾಕೆಂದರೆ ಆಗ ಗೌರಂಗ್‌ ಪ್ರತಿಷ್ಠಿತ ವ್ಯಕ್ತಿಯಾಗಿದ್ದ. ನನಗೆ ಸಿನಿಮಾ ಅವಕಾಶಗಳು ಸಿಗದಂತೆ ಮಾಡುತ್ತೇನೆ ಎಂದು ಬಹಳಷ್ಟು ಸಲ ಬೆದರಿಕೆ ಹಾಕಿದ್ದ. ಕೆಲವು ಸಂದರ್ಭಗಳಲ್ಲಿ ನನ್ನನ್ನು ಸಿನಿಮಾಗಳಿಗೆ ಆಯ್ಕೆ ಮಾಡಿದಂತೆ ಮಾಡಿ ಕಡೆಗೆ ಕೈಬಿಡುತ್ತಿದ್ದ ದಿನಗಳೂ ಇವೆ. ನನ್ನನ್ನು ಆಡಿಷನ್ಸ್‌ಗೂ ಸಹ ಕರೆಯಲು ಇಷ್ಟಪಡುತ್ತಿರಲಿಲ್ಲ” ಎಂದಿದ್ದಾರೆ. ಆ ಕ್ಷಣಗಳಲ್ಲಿ ನನಗೆ ಬಾಯಿಬಿಟ್ಟು ಹೇಳಿಕೊಳ್ಳಲಾಗದ ಪರಿಸ್ಥಿತಿ. ಕೇವಲ ನನ್ನ ಪ್ರತಿಭೆ ನೋಡಿ ಅವಕಾಶ ನೀಡುವವರು ಯಾರಾದರೂ ಇದ್ದರೆ ಅವರ ಬಳಿಗೆ ಓಡಿಹೋಗಿ ತಲೆಮರೆಸಿಕೊಳ್ಳೋಣ ಎಂದುಕೊಂಡಿದ್ದೆ.

 

ನಾನಷ್ಟೇ ಅಲ್ಲ ಅದೆಷ್ಟೋ ಮಂದಿ ಹೆಣ್ಣುಮಕ್ಕಳು ಗೌರಂಗ್ ಕಾರಣದಿಂದ ಸಾಕಷ್ಟು ಕಷ್ಟನಷ್ಟ ಎದುರಿಸುತ್ತಿದ್ದಾರೆ. ಅವರೆಲ್ಲಾ ನನಗೆ ಫೋನ್ ಮಾಡಿ ಸಹಾಯ ಮಾಡಿ ಎಂದು ಕೇಳಿದರು. ಆದರೆ ನಾನು ಆ ಧೈರ್ಯ ಮಾಡಲು ಸಾಧ್ಯವಾಗಲಿಲ್ಲ. ತಮ್ಮ ಮೇಲೆ ನಡೆದಿರುವ ಹಲ್ಲೆ, ದೌರ್ಜನ್ಯಗಳನ್ನು ಬಹಿರಂಗಪಡಿಸುತ್ತಿರುವವರಿಗಾಗಿ ಈ ಪೋಸ್ಟ್ ಹಾಕುತ್ತಿದ್ದೇನೆ ಎಂದಿದ್ದಾರೆ. “ನೀವೇ ನನ್ನ ಸೂಪರ್ ಹೀರೋಗಳು. ನಿಮ್ಮಂತಹವರು ಸಮಾಜಕ್ಕೆ ತುಂಬಾ ಅವಶ್ಯಕ. ಗೌರಂಗ್‌ನಿಂದಾಗಿ ನನ್ನ ಜೀವನದಲ್ಲಿ ಸಾಕಷ್ಟು ನಷ್ಟವಾಯಿತು. ಆ ಘಟನೆ ಬಳಿಕ ನನ್ನ ಜೀವನದಲ್ಲಿ ನಾನು ಸರಿಪಡಿಸಲಾಗದ ಬದಲಾವಣೆಗಳು ಆದವು. ಆದರೆ ಆ ದೇವರ ಮುಂದೆ ಯಾರೂ ದೊಡ್ಡವರಲ್ಲ ಎಂದು ನಂಬುತ್ತಿದ್ದೆ. ಸತ್ಯವನ್ನು ನಂಬಿ. ಅದನ್ನು ಆಯುಧದಂತೆ ಧರಿಸಿ. ಮತ್ತೆ ನಾವೆಲ್ಲಾ ಸಂತೋಷವಾಗಿ ಇರೋಣ. ಇಂತಹವರಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳೋಣ” ಎಂದಿದ್ದಾರೆ ಫ್ಲೋರಾ. ತನುಶ್ರೀ ದತ್ತಾ ಬಳಿಕ ಬಾಲಿವುಡ್ ಬೆಡಗಿಯರು ಒಬ್ಬೊಬ್ಬರಾಗಿ ತಮಗಾದ ಲೈಂಗಿಕ ದೌರ್ಜನ್ಯಗಳನ್ನು ಬಹಿರಂಗಪಡಿಸುತ್ತಿರುವುದುಒಳ್ಳೆಯ ಬೆಳವಣಿಗೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top