ಮನೋರಂಜನೆ

ತೆಲುಗು, ಹಿಂದಿಯಲ್ಲಿ ಕೂಡ ‘ಪಂಚತಂತ್ರ’ ಬೋಧಿಸಲಿದ್ದಾರೆ ಭಟ್ಟ್ರು.

ಮುಗುಳುನಗೆ ಚಿತ್ರದ ನಂತರ ನಿರ್ದೇಶಕ ಯೋಗರಾಜ್ ಭಟ್ಟರು ಅದೇಕೋ ಸೈಲೆಂಟಾದಂತಿದ್ದಾರಲ್ಲಾ ಅಂತ ಅನೇಕರಿಗೆ ಅನ್ನಿಸಿದ್ದರೆ ಅಚ್ಚರಿಯೇನಿಲ್ಲ. ಆದರೆ ಭಟ್ಟರು ಹೀಗೆ ಸೈಲೆಂಟಾಗಿದ್ದಾರೆಂದರೆ ಯಾವುದೋ ಕಾಮಗಾರಿ ಪ್ರಗತಿಯಲ್ಲಿದೆ ಅಂತಲೇ ಅರ್ಥ. ಅಂದಹಾಗೆ ಭಟ್ಟರ ಸೈಲೆಂಟ್ ಕಾಮಗಾರಿ ಇದೀಗ ಅಚಿತಿಮ ಹಂತ ತಲುಪಿದೆ. ಅದರ ಭಾಗವಾಗಿ ಅವರ ಹೊಸಾ ಚಿತ್ರ ಪರಪಂಚ ಚಿತ್ರದ ಕಾಮಗಾರಿಗಳೂ ಬಿರುಸಿನಿಂದ ನಡೆಯುತ್ತಿದೆ.

 

 

ಯೋಗರಾಜ ಭಟ್ಟರ ಸರಕು ಖಾಲಿಯಾಯ್ತಾ ಅಂತೊಂದು ಪ್ರಶ್ನೆ ಎದ್ದಾಗೆಲ್ಲ ಅವರು ಕ್ರಿಯೇಟೀವ್ ಆಗಿಯೇ ಗಮನ ಸೆಳೆಯುತ್ತಾ ಮೈಕೊಡವಿ ಬರುವುದು ಭಟ್ಟರ ಸ್ಪೆಷಾಲಿಟಿ.. ಯಾವುದೇ ಚಿತ್ರವಾದರೂ ತಮ್ಮ ಟ್ರೇಡ್ ಮಾರ್ಕಿನಂತಿರೋ ಉಡಾಫೆತನದಿಂದಲೇ ಪ್ರಮೋಷನ್ನು, ಪ್ರಚಾರ ಎಲ್ಲವನ್ನೂ ಮಾಡಿ ಮುಗಿಸುವ ಭಟ್ರು ತಮ್ಮ ಮುಂದಿನ ಸಿನಿಮಾ ಪಂಚತಂತ್ರವನ್ನು ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡಲು ತೀರ್ಮಾನಿಸಿದ್ದಾರೆ.

“ಪಂಚತಂತ್ರ” ಕನ್ನಡವಷ್ಟೇ ಅಲ್ಲದೆ ತೆಲುಗು, ಹಿಂದಿಯಲ್ಲಿಯೂ ತಯಾರಾಗಲಿದೆಯಂತೆ. ವಿಹಾನ್ ಹಾಗೂ ಅಕ್ಷರಾ ಗೌಡ ಅಭಿನಯದ ಈ ಚಿತ್ರವನ್ನು ತೆಲುಗು ಹಾಗೂ ಹಿಂದಿಯಲ್ಲಿ ಸಹ ಯೋಗರಾಜ್ ಭಟ್ ಅವರೇ ನಿರ್ದೇಶಿಸುತ್ತಾರೆ ಎಂದು ಹೇಳಲಾಗುತ್ತಿದೆ.ಆಯಾ ಭಾಷೆಯ ಚಿತ್ರಗಳಿಗೆ ಅಲ್ಲಿನ ಸ್ಥಳೀಯ ಪ್ರತಿಭೆಗಳನ್ನೇ ಆಯ್ಕೆ ಮಾಡಿಕೊಲ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

ತೆಲುಗು ಹಾಗೂ ಹಿಂದಿ ಭಾಷೆ ದೊಡ್ಡ ನಿರ್ಮಾಣ ಸಂಸ್ಥೆಗಳು ಇದಾಗಲೇ ಭಟ್ ಅವರ ಸಂಪರ್ಕದಲ್ಲಿದ್ದು ತೆಲುಗು ನಿರ್ಮಾಣ ಸಂಸ್ಥೆಯೊಡನೆ ಮಾತುಕತೆ ಅಂತಿಮ ಹಂತ ತಲುಪಿದೆ. ಇನ್ನೂ ಹೆಚ್ಚಿನ ವಿವರಗಳನ್ನು ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ಬಹಿರಂಗಪಡಿಸಲಾಗುತ್ತದೆಯಂತೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top